England vs India: ರಾಹುಲ್​, ಪಂತ್ ಶತಕ! ಇಂಗ್ಲೆಂಡ್​​ಗೆ 370 ರನ್​ಗಳ ಬೃಹತ್ ಗುರಿ ನೀಡಿದ ಟೀಮ್ ಇಂಡಿಯಾ | kl Rahul and rishabh pant century helps Indian set 371 target to England

England vs India: ರಾಹುಲ್​, ಪಂತ್ ಶತಕ! ಇಂಗ್ಲೆಂಡ್​​ಗೆ 370 ರನ್​ಗಳ ಬೃಹತ್ ಗುರಿ ನೀಡಿದ ಟೀಮ್ ಇಂಡಿಯಾ | kl Rahul and rishabh pant century helps Indian set 371 target to England

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 471 ರನ್ ಗಳಿಸಿದರೆ, ಇಂಗ್ಲೆಂಡ್ 465 ರನ್ ಗಳಿಸಿತು. ಭಾರತ ಕೇವಲ 6 ರನ್‌ಗಳ ಮುನ್ನಡೆ ಸಾಧಿಸಿತ್ತು. ಇದೀಗ 2ನೇ ಇನ್ನಿಂಗ್ಸ್​​ನಲ್ಲಿ ರಾಹುಲ್ ಹಾಗೂ ರಿಷಭ್ ಪಂತ್ ಶತಕದ  195 ರನ್​ಗಳ ಜೊತೆಯಾಟ ನೀಡಿ ಸವಾಲಿನ ಗುರಿ ನೀಡಲು ನೆರವಾದರು. 4ನೇ ದಿನ ಬ್ಯಾಟಿಂಗ್ ಆರಂಭಿಸಿದ ಭಾರತ ಮೊದಲ ಓವರ್​​ನಲ್ಲೇ ನಾಯಕ ಶುಭ್​ಮನ್ ಗಿಲ್​ ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಒಂದಾದ ರಾಹುಲ್-ಪಂತ್ ಇಂಗ್ಲಿಷ್ ಬೌಲರ್​ಗಳನ್ನ ಬೆಂಡತ್ತಿದರು.

9ನೇ ಶತಕ ಸಿಡಿಸಿದ ರಾಹುಲ್

ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದ  ರಾಹುಲ್ 202 ಎಸೆತಗಳಲ್ಲಿ 13 ಬೌಂಡರಿಗಳ ನೆರವಿನಿಂದ ಶತಕ ಪೂರ್ಣಗೊಳಿಸಿದರು. ಒಟ್ಟಾರೆ 247 ಎಸೆತಗಳಲ್ಲಿ 18 ಬೌಂಡರಿಗಳ ನೆರವಿನಿಂದ 137 ರನ್​ಗಳಿಸಿ ಔಟ್ ಆದರು. ಇದು ರಾಹುಲ್​ರ 9ನೇ ಶತಕವಾಗಿದೆ. ವಿಶೇಷವೆಂದರೆ ರಾಹುಲ್ 9 ಶತಕಗಳಲ್ಲಿ 8 ಶತಕಗಳು ವಿದೇಶದಲ್ಲಿ ಬಂದಿವೆ. ಕೇವಲ ಒಂದು ಶತಕ ಮಾತ್ರ ತವರಿನಲ್ಲಿ ಬಂದಿದೆ. ಇಂಗ್ಲೆಂಡ್​​ನಲ್ಲಿ 3, ಆಸ್ಟ್ರೇಲಿಯಾದಲ್ಲಿ 1, ದಕ್ಷಿಣ ಆಫ್ರಿಕಾದಲ್ಲಿ 2, ಶ್ರೀಲಂಕಾದಲ್ಲಿ 1, ವೆಸ್ಟ್​​ ಇಂಡೀಸ್​ನಲ್ಲಿ ಒಂದು ಶತಕ ಸಿಡಿಸಿದ್ದಾರೆ.

ಪಂತ್ ಸಿಡಿಲಬ್ಬರದ ಶತಕ

ರಾಹುಲ್ ಶತಕದ ಬೆನ್ನಲ್ಲೇ ವಿಕೆಟ್ ಕೀಪರ್ ರಿಷಭ್ ಪಂತ್ ಕೂಡ ತಮ್ಮ 8ನೇ ಟೆಸ್ಟ್ ಶತಕ ಪೂರೈಸಿದರು.  ಮೊದಲ ಇನ್ನಿಂಗ್ಸ್​​ನಲ್ಲಿ 134 ರನ್​ಗಳಿಸಿದ್ದ ರಿಷಭ್, 2ನೇ ಇನ್ನಿಂಗ್ಸ್​​ನಲ್ಲಿ 130 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್​ಗಳ ನೆರವಿನಿಂದ ಶತಕ ಪೂರೈಸಿದರು. ಒಟ್ಟಾರೆ 15 ಬೌಂಡರಿ, 3 ಸಿಕ್ಸರ್ಗಳ ನೆರವಿನಿಂದ 118 ರನ್​ಗಳಿಸಿದರು.

ಪಂತ್ ವಿಕೆಟ್ ನಂತರ ರಾಹುಲ್ ಹಾಗೂ ಕರುಣ್ ನಾಯರ್ 46 ರನ್​ ಸೇರಿಸಿದರು. ರಾಹುಲ್ ಬೆನ್​ ಕಾರ್ಸ್​ ಬೌಲಿಂಗ್​​ನಲ್ಲಿ ಬೌಲ್ಡ್ ಆದರು.  ಮೊದಲ ಇನ್ನಿಂಗ್ಸ್​​ನಲ್ಲಿ ಡಕ್ ಔಟ್ ಆಗಿದ್ದ, ಕರುಣ್ ನಾಯರ್ 20 ರನ್​ಗಳಿಸಿ ಕ್ರಿಸ್ ವೋಕ್ಸ್ ಬೌಲಿಂಗ್​​ನಲ್ಲಿ ಕಾಟ್ ಅಂಡ್ ಬೌಲ್ಡ್ ಆದರು.  ಈ ವಿಕೆಟ್ ನಂತರ ಬಂದವರೆಲ್ಲಾ ಕ್ರೀಸ್​ನಲ್ಲಿ ನಿಲ್ಲಲಾಗದೇ ಬಂದಷ್ಟೆ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಜಡೇಜಾ ಅಜೇಯ 25 ರನ್​ಗಳಿಸಿದರು.  ಶಾರ್ದೂಲ್ ಠಾಕೂರ್ (4) , ಮೊಹಮ್ಮದ್ ಸಿರಾಜ್ (0) ಹಾಗೂ ಜಸ್ಪ್ರೀತ್ ಬುಮ್ರಾ (0) ಒಂದೇ ಓವರ್​​ನಲ್ಲಿ ಜೋಶ್ ಟಂಗ್​​ಗೆ ವಿಕೆಟ್ ಒಪ್ಪಿಸಿದರು. ಪ್ರಸಿಧ್ ಕೃಷ್ನ11 ಎಸೆತಗಳನ್ನೆದುರಿಸಿದರಾದರೂ ಖಾತೆ ತೆರೆಯಲಾಗಲಿಲ್ಲ.

ಈ ಮೈದಾನದಲ್ಲಿ ಗರಿಷ್ಠ ಚೇಸ್ ಎಷ್ಟಿದೆ?

ಲೀಡ್ಸ್​​ನಲ್ಲಿ ಗರಿಷ್ಠ ಚೇಸಿಂಗ್ ದಾಖಲೆ ಇಲ್ಲಿವೆ

  1. ಆಸ್ಟ್ರೇಲಿಯಾ vs ಇಂಗ್ಲೆಂಡ್ (1948)- 404 ರನ್‌
  2. ಇಂಗ್ಲೆಂಡ್ vs ಆಸ್ಟ್ರೇಲಿಯಾ (2019)- 359 ರನ್‌
  3. ವೆಸ್ಟ್ ಇಂಡೀಸ್ vs ಇಂಗ್ಲೆಂಡ್ (2017)- 322 ರನ್‌
  4. ಇಂಗ್ಲೆಂಡ್ vs ಆಸ್ಟ್ರೇಲಿಯಾ (2001)- 315 ರನ್‌ಗಳು
  5. ಇಂಗ್ಲೆಂಡ್ vs ನ್ಯೂಜಿಲೆಂಡ್ (2022)- 296 ರನ್‌ಗಳು
  6. ಇಂಗ್ಲೆಂಡ್ vs ಆಸ್ಟ್ರೇಲಿಯಾ (2023)- 251 ರನ್‌ಗಳು
  7. ಇಂಗ್ಲೆಂಡ್ vs ಪಾಕಿಸ್ತಾನ (1982)- 219 ರನ್‌ಗಳು
  8. ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ (1929)- 184 ರನ್‌ಗಳು