ಫಾಫ್ ಡು ಪ್ಲೆಸಿಸ್‌ನ ಈ ಶತಕವು ಅವರ ಎಂಟನೇ ಟಿ20 ಶತಕವಾಗಿದ್ದು, ಆರನ್ ಫಿಂಚ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಸ್ ಬಟ್ಲರ್, ಮೈಕೆಲ್ ಕ್ಲಿಂಗರ್ ಮತ್ತು ರೋಹಿತ್ ಶರ್ಮಾ ಅವರಂತಹ ದಿಗ್ಗಜರ ಜೊತೆಗೆ ಅವರನ್ನು ನಿಲ್ಲಿಸಿದೆ. ಈ ಶತಕದೊಂದಿಗೆ, ಫಾಫ್ ಒಟ್ಟು 420 ಟಿ20 ಪಂದ್ಯಗಳಿಂದ 11,755 ರನ್‌ಗಳನ್ನು ಗಳಿಸಿದ್ದಾರೆ. MLC 2025ರ ಋತುವಿನಲ್ಲಿ ಈಗಾಗಲೇ 7 ಇನಿಂಗ್ಸ್‌ಗಳಲ್ಲಿ 317 ರನ್‌ಗಳೊಂದಿಗೆ ಬ್ಯಾಟಿಂಗ್ ಚಾರ್ಟ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ಋತುವಿನ ಆರಂಭದಲ್ಲಿ ಸ್ಯಾನ್ ಫ್ರಾನ್ಸಿಸ್ಕೊ ಯೂನಿಕಾರ್ನ್ಸ್ ವಿರುದ್ಧ 51 ಎಸೆತಗಳಲ್ಲಿ 100 ರನ್‌ಗಳನ್ನು ಗಳಿಸಿದ್ದರು.
Faf du Plessis: 40 ದಾಟಿದ್ರು ನಿಲ್ಲುತ್ತಿಲ್ಲ ಫಾಫ್ ಡು ಪ್ಲೆಸಿಸ್ ಅಬ್ಬರ! ಸ್ಫೋಟಕ ಶತಕ ಸಿಡಿಸಿ ವಿಶ್ವದಾಖಲೆ ಬರೆದ ಮಾಜಿ RCB ಕ್ಯಾಪ್ಟನ್
