Fastest Century: ಬರೋಬ್ಬರಿ 24 ಸಿಕ್ಸರ್, 26 ಎಸೆತಗಳಲ್ಲಿ ಸ್ಫೋಟಕ ಶತಕ! ಚರಿತ್ರೆ ಸೃಷ್ಟಿಸಿದ ಜೈನ್ ನಖ್ವಿ | Zain Naqvi Unleashes Fury 26-Ball Century with 24 Sixes Including 6 Consecutive Maxes

Fastest Century: ಬರೋಬ್ಬರಿ 24 ಸಿಕ್ಸರ್, 26 ಎಸೆತಗಳಲ್ಲಿ ಸ್ಫೋಟಕ ಶತಕ! ಚರಿತ್ರೆ ಸೃಷ್ಟಿಸಿದ ಜೈನ್ ನಖ್ವಿ | Zain Naqvi Unleashes Fury 26-Ball Century with 24 Sixes Including 6 Consecutive Maxes

ಒಂದೇ ಓವರ್​​ನಲ್ಲಿ 6 ಸಿಕ್ಸರ್

23 ವರ್ಷದ ಜೈನ್ ನಖ್ವಿ, ಮಾರ್ಖೋರ್ ಮಿಲಾನೊ ತಂಡದ ಪರ ಆಡುತ್ತಾ, 37 ಎಸೆತಗಳಲ್ಲಿ 432.43ರ ಸ್ಟ್ರೈಕ್ ರೇಟ್‌ನೊಂದಿಗೆ 160 ರನ್‌ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ 24 ಸಿಕ್ಸರ್‌ಗಳು ಮತ್ತು 2 ಬೌಂಡರಿಗಳಿದ್ದವು. ಒಂದೇ ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದ ನಖ್ವಿ, ಯುವರಾಜ್ ಸಿಂಗ್, ಕೀರನ್ ಪೊಲಾರ್ಡ್‌ರಂತಹ ದಿಗ್ಗಜರ ಸಾಲಿಗೆ ಸೇರಿದರು. ಈ ಸಾಧನೆ ಟಿ20 ಕ್ರಿಕೆಟ್‌ನ ಇತಿಹಾಸದಲ್ಲಿ ಅಪೂರ್ವವಾಗಿದೆ.

ಇದಲ್ಲದೆ ಚುಟುಕು ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್​​ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿ ಬ್ಯಾಟರ್ ಎನಿಸಿಕೊಂಡರು. ಇದಕ್ಕೂ ಮುನ್ನ ಸಾಹಿಲ್ ಚೌಹಾಣ್ 18 ಸಿಕ್ಸರ್ ಸಿಡಿಸಿದ್ದರು. ಇದೀಗ 24 ಸಿಕ್ಸರ್ ಸಿಡಿಸುವ ಮೂಲಕ ನಖ್ವಿ ವಿಶ್ವದಾಖಲೆ ಬರೆದಿದ್ದಾರೆ. ಆದರೆ ಇದು ಟಿ10 ಆಗಿರುವುದರಿಂದ ಇದನ್ನ ದಾಖಲೆಯಾಗಿ ಪರಿಗಣಿಸುವುದಿಲ್ಲ. ಆದರೆ ನಖ್ವಿ ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿರುವುದರಿಂದ ಈ ಸುದ್ದಿ ಸಂಚಲನ ಮೂಡಿಸುತ್ತಿದೆ.

ಇದನ್ನೂ ಓದಿ: Alan Wilkins: ಕ್ಯಾನ್ಸರ್ ಗೆದ್ದು ಐಪಿಎಲ್​ಗೆ ಮರಳಿದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ!

ಪಂದ್ಯದ ವಿವರ

ಯುರೋಪಿಯನ್ ಟಿ20 ಲೀಗ್‌ನ ಈ ಪಂದ್ಯದಲ್ಲಿ ಮಾರ್ಖೋರ್ ಮಿಲಾನೊ, ಸಿವಿಟಾವೆಚಿಯಾ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 210 ರನ್ ಗಳಿಸಿತು. ಜೈನ್ ನಖ್ವಿಯ ಶತಕವೇ ತಂಡದ ಬೃಹತ್ ಸ್ಕೋರ್‌ಗೆ ಕಾರಣವಾಯಿತು. ಆದರೆ ಇತರ ಆಟಗಾರರು ಗಮನಾರ್ಹ ಕೊಡುಗೆ ನೀಡಲಿಲ್ಲ. ಆದರೆ 211 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಿವಿಟಾವೆಚಿಯಾ 9 ಓವರ್‌ಗಳಲ್ಲಿ 106 ರನ್‌ಗೆ ಆಲೌಟ್ ಆಗಿ 104 ರನ್‌ಗಳಿಂದ ಸೋತಿತು. ಶಹಬಾಜ್ ಮಸೂದ್ (34 ರನ್) ಸಿವಿಟಾವೆಚಿಯಾದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.

ಟಿ20ಯಲ್ಲಿ ಟಾಪ್ 10 ವೇಗದ ಶತಕಗಳು

ನಖ್ವಿಯ 26 ಎಸೆತಗಳ ಶತಕ ಟಿ20ಯ ಅತ್ಯಂತ ವೇಗದ ಶತಕವಾಗಿದೆ. ಸಾಹಿಲ್ ಚೌಹಾಣ್ (27), ಉರ್ವಿಲ್ ಪಟೇಲ್ ಮತ್ತು ಅಭಿಷೇಕ್ ಶರ್ಮಾ (28), ಕ್ರಿಸ್ ಗೇಲ್ (30, 2013 ಐಪಿಎಲ್), ರಿಷಭ್ ಪಂತ್ (32), ಲುಬ್ಬೆ, ನಿಕೋಲ್ ಲಾಟನ್, ಸಿಕಂದರ್ ರಝಾ (33), ಆಂಡ್ರ್ಯೂ ಸೈಮಂಡ್ಸ್ (34) ಟಿ20 ಯಲ್ಲಿ ವೇಗದ ಶತಕ ಸಿಡಿಸಿದವರ ಪಟ್ಟಿಯಲ್ಲಿದ್ದಾರೆ.

ನಖ್ವಿಯ ವೃತ್ತಿಜೀವನ

ಇಟಲಿ ಪರ ಆಡುವ ಜೈನ್ ನಖ್ವಿ 4 ಟಿ20ಐ ಪಂದ್ಯಗಳಲ್ಲಿ 7 ರನ್ ಗಳಿಸಿದ್ದಾರೆ. ಆದರೆ, ಈ ಶತಕವು ಅವರನ್ನು ಜಾಗತಿಕ ಗಮನಕ್ಕೆ ತಂದಿದೆ. ಈ ಸಾಧನೆ ಯುರೋಪಿಯನ್ ಕ್ರಿಕೆಟ್‌ನಲ್ಲಿ ಇಟಲಿಯ ಉದಯಕ್ಕೆ ಸಂಕೇತವಾಗಿದೆ.