Fastest Century: 14 ಬೌಂಡರಿ, 7 ಸಿಕ್ಸರ್, 34 ಎಸೆತಗಳಲ್ಲಿ ಶತಕ! ಟಿ20ಯಲ್ಲಿ ಅತಿ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟರ್ | maharashtra s Kiran Navgire scores fastest century in women’s T20 history | ಕ್ರೀಡೆ

Fastest Century: 14 ಬೌಂಡರಿ, 7 ಸಿಕ್ಸರ್, 34 ಎಸೆತಗಳಲ್ಲಿ ಶತಕ! ಟಿ20ಯಲ್ಲಿ ಅತಿ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟರ್ | maharashtra s Kiran Navgire scores fastest century in women’s T20 history | ಕ್ರೀಡೆ

Last Updated:

ಕಿರಣ್ ನವಗಿರೆ 35 ಎಸೆತಗಳಲ್ಲಿ 14 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಒಳಗೊಂಡಂತೆ ಅಜೇಯ 106 ರನ್ ಗಳಿಸಿದರು. ಜನವರಿ 2021 ರಲ್ಲಿ ಒಟಾಗೊ ವಿರುದ್ಧ ವೆಲ್ಲಿಂಗ್ಟನ್ ಪರ 36 ಎಸೆತಗಳಲ್ಲಿ ಶತಕ ಗಳಿಸಿದ ನ್ಯೂಜಿಲೆಂಡ್ ನಾಯಕಿ ಸೋಫಿ ಡಿವೈನ್ ಅವರ ಮೂರು ವರ್ಷಗಳ ಹಳೆಯ ವಿಶ್ವದಾಖಲೆಯನ್ನು ಕಿರಣ್ ಮುರಿದಿದ್ದಾರೆ.

ಕಿರಣ್ ನವಗಿರೆಕಿರಣ್ ನವಗಿರೆ
ಕಿರಣ್ ನವಗಿರೆ

ಭಾರತೀಯ ಬ್ಯಾಟರ್ ಕಿರಣ್ ನವಗಿರೆ (Kiran Navgire) ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಮಹಿಳಾ ಟಿ20 (Women’s T20 challenge) ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಹಾರಾಷ್ಟ್ರ ಮತ್ತು ಪಂಜಾಬ್ ನಡುವಿನ ಸೀನಿಯರ್ ಮಹಿಳಾ ಟಿ20 ಟ್ರೋಫಿ ಪಂದ್ಯದಲ್ಲಿ ಕಿರಣ್ ಈ ಸಾಧನೆ ಮಾಡಿದ್ದಾರೆ. ಅಕ್ಟೋಬರ್ 17, ಶುಕ್ರವಾರ ನಾಗ್ಪುರದ ವಿಸಿಎ ಕ್ರೀಡಾಂಗಣದಲ್ಲಿ (ಸಿವಿಲ್ ಲೈನ್ಸ್) ನಡೆದ ಪಂದ್ಯದಲ್ಲಿ ಮಹಾರಾಷ್ಟ್ರ ಪರ ಇನ್ನಿಂಗ್ಸ್ ಆರಂಭಿಸಿದ ಕಿರಣ್ ಕೇವಲ 34 ಎಸೆತಗಳಲ್ಲಿ ಮೂರಂಕಿ ದಾಟಿದರು.

ಸೂಫಿ ಡಿವೈನ್ ಶತಕ ಬ್ರೇಕ್

ಒಟ್ಟಾರೆಯಾಗಿ, ಕಿರಣ್ ನವಗಿರೆ 35 ಎಸೆತಗಳಲ್ಲಿ 14 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಒಳಗೊಂಡಂತೆ ಅಜೇಯ 106 ರನ್ ಗಳಿಸಿದರು. ಜನವರಿ 2021 ರಲ್ಲಿ ಒಟಾಗೊ ವಿರುದ್ಧ ವೆಲ್ಲಿಂಗ್ಟನ್ ಪರ 36 ಎಸೆತಗಳಲ್ಲಿ ಶತಕ ಗಳಿಸಿದ ನ್ಯೂಜಿಲೆಂಡ್ ನಾಯಕಿ ಸೋಫಿ ಡಿವೈನ್ ಅವರ ಮೂರು ವರ್ಷಗಳ ಹಳೆಯ ವಿಶ್ವದಾಖಲೆಯನ್ನು ಕಿರಣ್ ಮುರಿದಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ಅವರ ಸ್ಫೋಟಕ ಇನ್ನಿಂಗ್ಸ್‌ ನೆರವಿನಿಂದ ಮಹಾರಾಷ್ಟ್ರ ತಂಡ ಕೇವಲ 8 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 111 ರನ್‌ಗಳ ಗುರಿಯನ್ನು ತಲುಪಿತು. ಕಿರಣ ಒಬ್ಬರೆ 107ರನ್​ಗಳಿಸಿದ್ದು ಮತ್ತೊಂದು ವಿಶೇಷವಾಗಿತ್ತು.

ಕಡಿಮೆ ಮೊತ್ತ ಚೇಸ್ ವೇಳೆ ಶತಕ

ಕಿರಣ್ ನವಗಿರೆ ಅವರ ಶತಕದ ಸಮಯದಲ್ಲಿ ಅವರ ಸ್ಟ್ರೈಕ್ ರೇಟ್ 302.86 ಆಗಿತ್ತು. ಟಿ20 ಕ್ರಿಕೆಟ್‌ನಲ್ಲಿ ಶತಕದ ಸಿಡಿಸಿದ ಸಮಯದಲ್ಲಿ 300+ ಸ್ಟ್ರೈಕ್ ರೇಟ್ ಹೊಂದಿರುವ ಮೊದಲ ಮಹಿಳಾ ಕ್ರಿಕೆಟರ್ ಕಿರಣ್ . ಈ ಅವಧಿಯಲ್ಲಿ ಕೇವಲ 6 ರನ್ ಗಳಿಸಿದ ಮುಕ್ತಾ ಮಾಗ್ರೆ ಅವರೊಂದಿಗೆ ಕಿರಣ್ ಎರಡನೇ ವಿಕೆಟ್‌ಗೆ ಅಜೇಯ 103 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. 111 ರನ್​ಗಳ ಗುರಿಯನ್ನ ಮಹಾರಾಷ್ಟ್ರ ತಂಡ ಕೇವಲ 8 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು ತಲುಪುತು. ಚೇಸಿಂಗ್ ವೇಳೆ ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಆಟಗಾರ್ತಿಯೊಬ್ಬರು ಶತಕ ಗಳಿಸಿದ ಅತ್ಯಂತ ಕಡಿಮೆ ತಂಡದ ಸ್ಕೋರ್ ಇದಾಗಿದೆ. ಈ ಹಿಂದೆ, ಈ ದಾಖಲೆಯನ್ನು ದಕ್ಷಿಣ ಆಫ್ರಿಕಾದ ಅನ್ನೆರಿ ಡಿರ್ಕ್ಸನ್ ಹೊಂದಿದ್ದರು, ಅವರು ಒಟ್ಟು 123 ರನ್‌ಗಳಲ್ಲಿ 106 ರನ್ ಗಳಿಸಿದ್ದರು.

ಭಾರತದ ಪರ 2022ರಿಂದ ಸಿಗದ ಅವಕಾಶ

ಅರುಣಾಚಲ ಪ್ರದೇಶ ವಿರುದ್ಧ 162 ರನ್ ಗಳಿಸಿದ ಕಿರಣ್, ಪುಣೆಯಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮೇರೆ ಗ್ರಾಮದವರು. 31 ವರ್ಷದ ಅವರು ಮೇ 2022 ರಲ್ಲಿ ಮಹಿಳಾ ಟಿ20 ಟ್ರೋಫಿಯಲ್ಲಿ ನಾಗಾಲ್ಯಾಂಡ್ ಪರ ಆಟಿ ಸೀಸನ್​ನಲ್ಲಿ 35 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಮೊದಲ ಬಾರಿಗೆ ಸುದ್ದಿಯಾಗಿದ್ದರು. ಅರುಣಾಚಲ ಪ್ರದೇಶ ವಿರುದ್ಧ 76 ಎಸೆತಗಳಲ್ಲಿ 162 ರನ್ ಗಳಿಸಿದರು. ಈ ಅದ್ಭುತ ಪ್ರದರ್ಶನವು ಅದೇ ವರ್ಷ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಅಂತರರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿತು.