Last Updated:
ಟೀಂ ಇಂಡಿಯಾ ಓರ್ವ ಆಟಗಾರ ಮಾತ್ರ ತನ್ನ ಫಿಟ್ನೆಸ್ ಕಾರಣದಿಂದಲೇ ಐಪಿಎಲ್ ತಂಡದಿಂದ ಹಾಗೂ ಟೀಂ ಇಂಡಿಯಾದಿಂದಲೂ ಹೊರಬಿದ್ದು ನಿರಾಸೆ ಅನುಭವಿಸಿದ್ದಾನೆ.
ಕ್ರಿಕೆಟ್ ಆಟಗಾರರು (Cricket Players) ಫಿಟ್ನೆಸ್ (Fitness) ಕಡೆ ತುಂಬಾ ಗಮನಹರಿಸುತ್ತಾರೆ. ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ಶುಭ್ಮನ್ ಗಿಲ್ರಂತಹ ಆಟಗಾರರು ಆಟದ ಜೊತೆಗೆ ತಮ್ಮ ಫಿಟ್ನೆಸ್ನಿಂದಲೂ ಜಗತ್ತಿನಾದ್ಯಂತ ಖ್ಯಾತಿ ಗಳಿಸಿದ್ದಾರೆ. ಆದ್ರೆ, ಟೀಂ ಇಂಡಿಯಾ (Team India) ಓರ್ವ ಆಟಗಾರ ಮಾತ್ರ ತನ್ನ ಫಿಟ್ನೆಸ್ ಕಾರಣದಿಂದಲೇ ಐಪಿಎಲ್ (IPL) ತಂಡದಿಂದ ಹಾಗೂ ಟೀಂ ಇಂಡಿಯಾದಿಂದಲೂ ಹೊರಬಿದ್ದು ನಿರಾಸೆ ಅನುಭವಿಸಿದ್ದಾನೆ.
ಹೌದು ಆತ ಬೇರೆ ಯಾರೂ ಅಲ್ಲ, ಭಾರತ ತಂಡದ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವವರಲ್ಲಿ ಒಬ್ಬರಾದ ಸರ್ಫರಾಜ್ ಖಾನ್ (Sarfaraz Khan). ಅವರು ಸದ್ಯ 17 ಕೆಜಿ ತೂಕ ಇಳಿಸಿಕೊಳ್ಳುವ ಮೂಲಕ ಗಮನಸೆಳೆದಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ಭಾರತೀಯ ತಂಡದಿಂದ ಸ್ಥಾನ ಕಳೆದುಕೊಂಡ ಸರ್ಫರಾಜ್, ಸ್ಥಿರ ಪ್ರದರ್ಶನ ನೀಡುತ್ತಿದ್ದರೂ, ದೀರ್ಘಕಾಲದವರೆಗೆ ಅವರ ಫಿಟ್‌ನೆಸ್ ಬಗ್ಗೆ ವಿಮರ್ಶಕರು ಪ್ರಶ್ನಿಸುತ್ತಿದ್ದರು.

17 ಕೆಜಿ ತೂಕ ಇಳಿಸಿಕೊಂಡ ಸರ್ಫರಾಜ್ ಖಾನ್
ಕಳೆದ ವರ್ಷ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಸರ್ಫರಾಜ್, ತಂಡದಲ್ಲಿ ತಮ್ಮ ಸ್ಥಾನವನ್ನು ಇನ್ನೂ ಭದ್ರಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ದೇಶೀಯ ಕ್ರಿಕೆಟ್‌ನಲ್ಲಿ ಸರ್ಫರಾಜ್ ಅವರ ಬ್ಯಾಟ್‌ನಿಂದ ರನ್‌ಗಳು ಬರುತ್ತಿದ್ದರೂ, ಬಲಗೈ ಬ್ಯಾಟ್ಸ್‌ಮನ್ ತಮ್ಮ ಫಿಟ್‌ನೆಸ್‌ನ ಮೇಲೆಯೂ ಶ್ರಮಿಸುವ ಮೂಲಕ ತಮ್ಮ ದೃಢಸಂಕಲ್ಪವನ್ನು ಮತ್ತಷ್ಟು ಸಾಬೀತುಪಡಿಸಿದ್ದಾರೆ.
ಇಂಗ್ಲೆಂಡ್ ಪ್ರವಾಸಕ್ಕಾಗಿ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಸರ್ಫರಾಜ್ ಅವರನ್ನು ಕಡೆಗಣಿಸಿದಾಗ, ಹರ್ಭಜನ್ ಸಿಂಗ್ ಸೇರಿದಂತೆ ಭಾರತದ ಅನೇಕ ಮಾಜಿ ಕ್ರಿಕೆಟಿಗರು ಸರ್ಫರಾಜ್ ಅವರ ಪರ ಬ್ಯಾಟ್ ಬೀಸಿದ್ದರು. ಹಾಗೂ ಫಿಟ್ನೆಸ್ ಕಡೆ ಗಮನಹಿಸಲು ಸಲಹೆ ನೀಡಿದ್ದರು. ಬಿಸಿಸಿಐ ಆಯ್ಕೆ ಸಮಿತಿಯಿಂದ ಕೈಬಿಡಲ್ಪಟ್ಟ ಸರ್ಫರಾಜ್ ಖಾನ್ ಆಸ್ಟ್ರೇಲಿಯಾ ಪ್ರವಾಸ ವಿಫಲವಾದ ನಂತರ ತಂಡದ ಮ್ಯಾನೆಜ್ಮೆಂಟ್ನ ನಂಬಿಕೆ ಕಳೆದುಕೊಂಡಿದ್ದರು. ಆದರೆ, ಜಿಮ್‌ನಲ್ಲಿ ಕಷ್ಟಪಟ್ಟು ವರ್ಕೌಟ್ ಮಾಡುವ ಮೂಲಕ ಆಯ್ಕೆದಾರರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
July 21, 2025 10:57 PM IST