Fitness: ಸಖತ್‌ ಫೇಮಸ್‌ ಮಂಗಳೂರು ಮ್ಯಾರಾಥಾನ್‌, ವಿದೇಶದಿಂದಲೂ ಬಂದ ಓಟಗಾರರು! 6000ಕ್ಕೂ ಹೆಚ್ಚು ಮಂದಿ ಭಾಗಿ | Mangaluru Marathon 6000 runners achieve record unveiling | ದಕ್ಷಿಣ ಕನ್ನಡ

Fitness: ಸಖತ್‌ ಫೇಮಸ್‌ ಮಂಗಳೂರು ಮ್ಯಾರಾಥಾನ್‌, ವಿದೇಶದಿಂದಲೂ ಬಂದ ಓಟಗಾರರು! 6000ಕ್ಕೂ ಹೆಚ್ಚು ಮಂದಿ ಭಾಗಿ | Mangaluru Marathon 6000 runners achieve record unveiling | ದಕ್ಷಿಣ ಕನ್ನಡ

Last Updated:

ಮಂಗಳೂರು ರನ್ನರ್ಸ್‌ ಕ್ಲಬ್‌ ಆಯೋಜಿಸಿದ ಮ್ಯಾರಥಾನ್‌ನಲ್ಲಿ 6000ಕ್ಕೂ ಹೆಚ್ಚು ಮಂದಿ ಭಾಗಿ! ಆಸ್ಟ್ರೇಲಿಯಾ, ಜಪಾನ್‌, ಡೆನ್ಮಾರ್ಕ್‌, ನೈಜೀರಿಯಾ ದೇಶಗಳಿಂದಲೂ ಸ್ಪರ್ಧಿಗಳು ಭಾಗವಹಿಸಿ ಗಮನ ಸೆಳೆದರು.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಈ ದಿನದ ಬೆಳಗು ಮಂಗಳೂರಿನಲ್ಲಿ (Mangaluru) ಎಂದಿನಂತಿರಲಿಲ್ಲ. ಮಂಗಳೂರು ನಗರದ ಮಂಗಳಾ ಕ್ರೀಡಾಂಗಣ ಹಾಗೂ ಅಲ್ಲಿಂದ ಕೂಳೂರು ಕಡೆಗೆ ತೆರಳುವ ರಸ್ತೆ (Road) ಹಳದಿ ಕೆಂಪು ದಿರಿಸು ತೊಟ್ಟ ʻಓಟಗಾರರʼ ಓಟಕ್ಕೆ (Run) ಸಾಕ್ಷಿಯಾಯಿತು. ಮಂಗಳೂರು ರನ್ನರ್ಸ್‌ ಕ್ಲಬ್‌ ಆಯೋಜಿಸಿದ್ದ ನಾಲ್ಕನೇ ಮಂಗಳೂರು ಮ್ಯಾರಥಾನ್‌ ದಾಖಲೆ (Achievement) ಸಂಖ್ಯೆಯ 6000ಕ್ಕೂ ಅಧಿಕ ಮಂದಿಯ ಪಾಲ್ಗೊಳ್ಳುವಿಕೆಯಿಂದ ಗಮನ ಸೆಳೆಯಿತು.

ದೇಶ-ವಿದೇಶದ ಜನರಿಂದ ಭರ್ಜರಿ ಓಟ

ದೇಶದ 20ಕ್ಕೂ ಅಧಿಕ ರಾಜ್ಯಗಳಿಂದ ಅಲ್ಲದೆ ಆಸ್ಟ್ರೇಲಿಯಾ, ಜಪಾನ್‌, ಡೆನ್ಮಾರ್ಕ್‌, ನೈಜೀರಿಯಾ ದೇಶಗಳಿಂದಲೂ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಬಾರಿ ಹೆಚ್ಚು ಮಂದಿಯನ್ನಾಕರ್ಷಿಸಲು ಆರು ವಿಭಾಗಗಳಿದ್ದವು. ಫುಲ್‌ ಮ್ಯಾರಥಾನ್, 20 ಮೈಲರ್, ಹಾಫ್‌ ಮ್ಯಾರಥಾನ್, 10 ಕೆ ರನ್‌, 5ಕೆ ರನ್‌ ಹಾಗೂ 2ಕೆ ಗಮ್ಮತ್‌ ರನ್‌ ಈ ವಿಭಾಗಗಳಲ್ಲಿ ಶ್ರೇಷ್ಠ ಅಥ್ಲೆಟ್‌ಗಳಿಂದ ತೊಡಗಿ, ಹವ್ಯಾಸಿ ಓಟಗಾರರು, ಫಿಟ್ನೆಸ್‌ ಉತ್ಸಾಹಿಗಳು, ವಿವಿಧ ವಯೋಮಾನದಿಂದ ಭಾಗಿಯಾದರು.

ಬೆಳಿಗ್ಗೆ 4.15ರಿಂದಲೇ ಪ್ರಾರಂಭವಾಯ್ತು ಮ್ಯಾರಾಥಾನ್

ಬೆಳಗ್ಗೆ 4.15ಕ್ಕೇ ಪೂರ್ಣ ಮ್ಯಾರಥಾನ್‌ಗೆ ಹಿರಿಯ ಓಟಗಾರ, 76ರ ಹರೆಯದ ಕೊಚ್ಚಿನ್‌ ನ ಜಾನ್ಸನ್‌ ಪಾಲ್‌ ಮೊಯ್ಲನ್‌ ಅವರು ನಿವಿಯಸ್‌ ಸೊಲ್ಯೂಷನ್ಸ್‌ ನ ಚೀಫ್‌ ಗ್ರೋತ್‌ ಆಫೀಸರ್‌ ಶಶಿರ್‌ ಶೆಟ್ಟಿ ಅವರೊಂದಿಗೆ ಫ್ಲಾಗ್‌ ಆಫ್‌ ಮಾಡಿದರು. ಈ ಸ್ಪರ್ಧೆಯಲ್ಲಿ 120 ಮಂದಿ ಪಾಲ್ಗೊಂಡಿದ್ದರು. 20 ಮೈಲರ್‌ ಸ್ಪರ್ಧೆಯಲ್ಲಿ 150 ಮಂದಿ ಭಾಗಿಯಾಗಿದ್ದರು. ಹಾಫ್‌ ಮ್ಯಾರಥಾನ್‌ಗೆ 700ಕ್ಕೂ ಅಧಿಕ ಮಂದಿ ಇದರಲ್ಲಿ ಇದ್ದರು.‌

6 ಸಾವಿರಕ್ಕೂ ಹೆಚ್ಚು ಜನರಿಂದ ಮೈಲಿಗಟ್ಟಲೆ ಓಟ

ಇದನ್ನೂ ಓದಿ: Student Achievement:ʼಇನ್ಮೇಲೆ ಕಾಲೇಜ್‌ ಗೆ ಜೆಟ್‌ ಅಲ್ಲಿ ಬರ್ತೀವಿʼ; ಯುದ್ಧ ವಿಮಾನ ತಯಾರಿಸಿ ಹಾರಾಡಿದ ವಿದ್ಯಾರ್ಥಿಗಳು!

ಬಳಿಕ 10 ಕೆ ರನ್‌, 1500ರಷ್ಟು ಮಂದಿಯನ್ನೊಳಗೊಂಡಿತ್ತು. 5ಕೆ ರನ್‌ ಹೆಚ್ಚು ಜನಪ್ರಿಯವಿದ್ದು 3000ಕ್ಕೂ ಅಧಿಕ ಮಂದಿ ಸೇರಿದ್ದರು. ಪಿಲಿನಲಿಕೆಯಿಂದ ಪ್ರೇರಿತ ಫಿನಿಷರ್‌ ಪದಕವನ್ನು ಸ್ಪರ್ಧಿಗಳಿಗೆ ನೀಡಲಾಯಿತು. ಬೇರ್‌ ಫೂಟ್‌ ಬಾಬಿ ಎಂದೇ ಖ್ಯಾತರಾದ ಥಾಮಸ್‌ ಬಾಬಿ ಫಿಲಿಪ್‌ ಅವರು ಬರಿಗಾಲಿನಲ್ಲಿ 30 ಮೈಲರ್‌ ಓಡಿ ಫಿನಿಷ್‌ ಮಾಡಿದರು. ಕಮಿಷನರ್‌ ಸುಧೀರ್‌ ರೆಡ್ಡಿ 21.1 ಕಿ.ಮೀ ರನ್‌ ಓಡಿ 2:17:37 ಗಂಟೆಯಲ್ಲಿ ಫಿನಿಷ್‌ ಮಾಡಿದರು. ಸಂಸದ ಬ್ರಿಜೇಶ್‌ ಚೌಟ ಅವರು 5 ಕೆ ರನ್‌ ನಲ್ಲಿ ಗಮನ ಸೆಳೆದರು.