Full Fog: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಳಿ-ಚಳಿ, ಹೆಚ್ಚಾದ ಮಂಜು ಮುಸುಕಿದ ವಾತಾವರಣ! | Chilly Atmosphere | ದಕ್ಷಿಣ ಕನ್ನಡ

Full Fog: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಳಿ-ಚಳಿ, ಹೆಚ್ಚಾದ ಮಂಜು ಮುಸುಕಿದ ವಾತಾವರಣ! | Chilly Atmosphere | ದಕ್ಷಿಣ ಕನ್ನಡ

Last Updated:

ಬಂಟ್ವಾಳ, ಪುತ್ತೂರು ಭಾಗಗಳಲ್ಲಿ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದೆ. ಮುಡುಪು, ಸಜಿಪ ಪ್ರದೇಶಗಳಲ್ಲಿ ದಟ್ಟ ಮಂಜು ಆವರಿಸಿದ್ದು, ವಾಹನಗಳು ಹೆಡ್ ಲೈಟ್ ಹಾಕಿಯೇ ಸಂಚರಿಸುತ್ತಿವೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಕರಾವಳಿಯಲ್ಲಿ ಮಳೆಯ (Rain) ಆರ್ಭಟ ತಗ್ಗಿ ಕಳೆದೆರಡು ದಿನಗಳಿಂದ ಬಿಸಿಲಿನ ಬೇಗೆ ಆರಂಭಗೊಂಡಿದೆ. ಮಳೆಗಾಲದಲ್ಲಿ ದಟ್ಟ ಕಾರ್ಮೋಡಗಳಿಂದ ಮುಸುಗಿದ್ದ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಮಂಜು (Fog) ಮುಸುಕಿದ ವಾತಾವರಣದ ಸೃಷ್ಟಿಯಾಗಿದೆ. ಇಂದಿನಿಂದ ಸುಮಾರು ತಿಂಗಳ ಕಾಲ ಜಿಲ್ಲೆಯ ಹಸಿರು ವಾತಾವರಣವಿರುವ ಬಂಟ್ವಾಳ, ಪುತ್ತೂರು (Puttur) ಭಾಗದಲ್ಲಿ ಮಂಜು ಮುಸುಕಿದ ವಾತಾವರಣ ಕಂಡು ಬರುವ ಸಾಧ್ಯತೆಯೂ ಇದೆ. ಅದರಲ್ಲೂ ಬೆಟ್ಟ-ಗುಡ್ಡಗಳಿಂದ ಕೂಡಿರುವ ಮುಡಿಪು, ಸಜಿಪ ಮೊದಲಾದ ಕಡೆಗಳಲ್ಲಿ ಇಡೀ ಪ್ರದೇಶವನ್ನೇ ಮಂಜು ಆವರಿಸಿದ್ದು, ರಸ್ತೆಗಳೂ ಮಂಜಿನಿಂದಾಗಿ ಕಾಣಿಸದಂತಹ ಸ್ಥಿತಿಗೆ ತಲುಪಿದೆ.

ದಟ್ಟ ಮಂಜು

ದಟ್ಟ ಮಂಜುನ ಕಾರಣಕ್ಕಾಗಿ ರಸ್ತೆಗಳಲ್ಲಿ ಸಂಚರಿಸುವ ಎಲ್ಲಾ ವಾಹನಗಳೂ ಹೆಡ್ ಲೈಟ್ ಗಳನ್ನು ಹಾಕಿಯೇ ಸಂಚರಿಸುತ್ತಿದ್ದು, ಒಂದು ವೇಳೆ ಹೆಡ್ ಲೈಟ್ ಗಳನ್ನು ಹಾಕದೇ ಹೋದಲ್ಲಿ ಎದುರು ಕಡೆಯಿಂದ, ಪಕ್ಕದಿಂದ ಸಂಚರಿಸುವ ಯಾವುದೇ ವಾಹನಗಳು ಕಣ್ಣಿಗೆ ಕಾಣದಷ್ಟು ದಟ್ಟವಾಗಿದೆ ಈ ಮಂಜುಗಳ ಆವರಿಸಿಕೊಂಡಿದೆ.

ಚಳಿಯ ವಾತಾವರಣ

ಮಂಜಿನ ವಾತಾವರಣದಿಂದಾಗಿ ಜಿಲ್ಲೆಯ ಹಲವೆಡೆ ರಾತ್ರಿಯಿಂದ ಬೆಳಗ್ಗಿನ ತನಕವೂ ಚಳಿಯ ವಾತಾವರಣದ ಕಂಡು ಬಂದಿದ್ದು, ಸೂರ್ಯನ ಕಿರಣಗಳು ತೀಕ್ಷ್ಣವಾದಂತೆ ಮಂಜುಗಳು ಕರಗಿ, ಬೆಚ್ಚಗಿನ ವಾತಾವರಣದ ಅನುಭವವಾಗುತ್ತಿದೆ. ಮಂಜು ಮುಸುಕಿದ ಸಮಯದಲ್ಲಿ ಪ್ರಕೃತಿಯ ಸೊಬಗೇ ಒಂದು ತರಹದ ಥ್ರಿಲ್ಲಿಂಗ್ ಆಗಿದ್ದು, ಜನ ಮಂಜುಗಳ ಮಧ್ಯೆ ಹಾಗೇ ಸುಮ್ಮನೆ ಓಡಾಡುವ ಮೂಲಕ ಮಂಜಿನ ತಂಪಾದ ಅನುಭವವನ್ನು ಆನಂದಿಸುತ್ತಿದ್ದಾರೆ.