Gambhir: ನನ್ನನ್ನ ಟಾರ್ಗೆಟ್ ಮಾಡಿ, ಆ 23 ವರ್ಷದ ಹುಡುಗನನ್ನಲ್ಲ! ಟೀಮ್ ಇಂಡಿಯಾ ಯಂಗ್​ಸ್ಟರ್ ಬೆನ್ನಿಗೆ ನಿಂತ ಗಂಭೀರ್ | Gambhir Comes to Harshit Rana’s Defense: ‘Criticizing Youngsters is Unacceptable’ | ಕ್ರೀಡೆ

Gambhir: ನನ್ನನ್ನ ಟಾರ್ಗೆಟ್ ಮಾಡಿ, ಆ 23 ವರ್ಷದ ಹುಡುಗನನ್ನಲ್ಲ! ಟೀಮ್ ಇಂಡಿಯಾ ಯಂಗ್​ಸ್ಟರ್ ಬೆನ್ನಿಗೆ ನಿಂತ ಗಂಭೀರ್ | Gambhir Comes to Harshit Rana’s Defense: ‘Criticizing Youngsters is Unacceptable’ | ಕ್ರೀಡೆ
ನನ್ನನ್ನ ಟಾರ್ಗೆಟ್ ಮಾಡಿ

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ ನಂತರ, ಗಂಭೀರ್ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ, ಹರ್ಷಿತ್ ವಿರುದ್ಧ ನಡೆಯುತ್ತಿರುವ ಟ್ರೋಲಿಂಗ್‌ಗೆ ಪ್ರತಿಕ್ರಿಯಿಸಿ, 23 ವರ್ಷದ ಹುಡುಗನನ್ನ ಗುರಿಯಾಗಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಮತ್ತು ಅಗತ್ಯವಿದ್ದರೆ, ನನ್ನನ್ನ ಗುರಿಯಾಗಿಸಬೇಕು ಎಂದು ಅವರು ಟೀಕೆಗೆ ತಿರುಗೇಟು ನೀಡಿದ್ದಾರೆ.

ವೀವ್ಸ್​ಗೋಸ್ಕರ್ ಬಾಯಿಗೆ ಬಂದಂತೆ ಮಾತನಾಡಬೇಡಿ

“ಯೂಟ್ಯೂಬ್ ಚಾನೆಲ್ ನಡೆಸುವವರು 23 ವರ್ಷದ ಹುಡುಗನನ್ನು ಗುರಿಯಾಗಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಟ್ರೋಲಿಂಗ್ ನಡೆಯುತ್ತಿದೆ. ಅಂತಹ ಜನರ ಮನಸ್ಥಿತಿ ಹೇಗಿರುತ್ತದೆ ಎಂದು ಊಹಿಸಿ. ನೀವು ನನ್ನನ್ನು ಟಾರ್ಗೆಟ್ ಮಾಡಲು ಬಯಸಿದರೆ ಮಾಡಿ. ನಾನು ಅದನ್ನು ನಿಭಾಯಿಸುತ್ತೇನೆ. ಆದರೆ, ನಿಮ್ಮ ಯೂಟ್ಯೂಬ್ ವೀಕ್ಷಣೆಗಳಿಗಾಗಿ ಯುವ ಆಟಗಾರನನ್ನು ಟ್ರೋಲ್ ಮಾಡುವುದು ನಾಚಿಕೆಗೇಡಿನ ಕೃತ್ಯ. ಅವರು ತಮ್ಮದೇ ಆದ ಅರ್ಹತೆಯ ಮೇಲೆ ಕ್ರಿಕೆಟ್ ಆಡುತ್ತಿದ್ದಾರೆ. ಅಂತಹ ಯುವ ಕ್ರಿಕೆಟಿಗರನ್ನು ಟಾರ್ಗೆಟ್ ಮಾಡುವುದನ್ನ ನಿಲ್ಲಿಸಿ” ಎಂದು ಗಂಭೀರ್ ಹೇಳಿದ್ದಾರೆ.

ವಿರಾಟ್-ಕೊಹ್ಲಿ ವಿಶ್ವಕಪ್​ ಆಡುವ ಬಗ್ಗೆ ಪ್ರತಿಕ್ರಿಯೆ

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ 2027ರ ವಿಶ್ವಕಪ್ ಆಡುತ್ತಾರೆಯೇ ಎಂದು ಕೇಳಿದ್ದಕ್ಕೆ ಉತ್ತರಿಸಿದ ಗಂಭೀರ್, ” ವಿಶ್ವಕಪ್‌ಗೆ ಇನ್ನೂ ಎರಡೂವರೆ ವರ್ಷಗಳು ಉಳಿದಿವೆ. ಹಾಗಾಗಿ ಈಗ ಏನಾಗುತ್ತದೆ ಎಂಬುದರ ಕುರಿತು ನಾವು ಯೋಚಿಸಬೇಕು. ಕೊಹ್ಲಿ ಮತ್ತು ರೋಹಿತ್ ಗುಣಮಟ್ಟದ ಆಟಗಾರರು. ಇಬ್ಬರೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ನಾವು ಭಾವಿಸುತ್ತೇವೆ.” ಪ್ರಸ್ತುತ ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿರುವ ರೋ-ಕೋ ಜೋಡಿಯನ್ನು ಈ ತಿಂಗಳ 19 ರಿಂದ ಪ್ರಾರಂಭವಾಗುವ ಆಸೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದೆ. ಕಾಂಗರೂಗಳೊಂದಿಗಿನ ಟಿ20 ಸರಣಿ ಅಕ್ಟೋಬರ್ 29 ರಿಂದ ಆರಂಭವಾಗಲಿದೆ.

ಆಸೀಸ್ ವಿರುದ್ಧದ ಮೂರು ಏಕದಿನ ಪಂದ್ಯಗಳಿಗೆ ಭಾರತ ತಂಡ

ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಷರ್ ಪಟೇಲ್, ಕೆಎಲ್ ರಾಹುಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಶದೀಪ್ ಸಿಂಗ್, ಪ್ರಸಿಧ್ ಕೃಷ್ಣ ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್)

ಐದು ಟ್ವೆಂಟಿ-20 ಪಂದ್ಯಗಳಿಗೆ ಭಾರತ ತಂಡ

ಸೂರ್ಯಕುಮಾರ್ (ನಾಯಕ), ಅಭಿಷೇಕ್ ಶರ್ಮಾ, ಶುಭ್​ಮನ್ ಗಿಲ್ (ಉಪನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್, ಕುಲ್‌ದೀಪ್ ಯಾದವ್, ರಿಂಕು ಸಿಂಗ್, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್