Ganapati Temple: ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ ಭಕ್ತಾಧಿಗಳು ಈ ಕ್ಷೇತ್ರಕ್ಕೊಮ್ಮೆ ಭೇಟಿ ನೀಡದೆ ಇರಲಾರರು! |  This Unique Ganapati Temple is located near Kukke Subrahmanya Temple 

Ganapati Temple: ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ ಭಕ್ತಾಧಿಗಳು ಈ ಕ್ಷೇತ್ರಕ್ಕೊಮ್ಮೆ ಭೇಟಿ ನೀಡದೆ ಇರಲಾರರು! |  This Unique Ganapati Temple is located near Kukke Subrahmanya Temple 

Last Updated:

ಇಡೀ ಗಣಪತಿಯ ಮೂರ್ತಿಯನ್ನು ಕೇವಲ ಒಂದೇ ಕಲ್ಲನ್ನು ಬಳಸಿಕೊಂಡು ನಿರ್ಮಿಸಲಾಗಿದೆ. ಭಕ್ತಿಯ ಜೊತೆಗೆ ಜನಾಕರ್ಷಣೆಯ ಕೇಂದ್ರಬಿಂದುವೂ ಆಗಿರುವ ಈ ಅಭಯ ಮಹಾಗಣಪತಿ ದೇವಸ್ಥಾನದ ಆಕೃತಿಯೂ ವಿಭಿನ್ನವಾಗಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ(Kukke Subrahmanya Temple) ಲಕ್ಷಾಂತರ ಭಕ್ತರ ಅತ್ಯಂತ ನಂಬಿಕೆಯ ಕ್ಷೇತ್ರ‌. ಇದೇ ಕಾರಣಕ್ಕಾಗಿ ಈ ಕ್ಷೇತ್ರಕ್ಕೆ ದೊಡ್ಡ ದೊಡ್ಡ ಸೆಲೆಬ್ರೆಟಿಗಳಿಂದ(Celebrities) ಹಿಡಿದು ಅತ್ಯಂತ ಕಡು ಬಡವನೂ ಬಂದು ದೇವರ ದರ್ಶನವನ್ನು ಮಾಡಿಕೊಂಡು ಹೋಗುತ್ತಾನೆ. ದೇವರ ಊರಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಕ್ಷೇತ್ರವಲ್ಲದೆ, ಕ್ಷೇತ್ರದ ಅಕ್ಕಪಕ್ಕದಲ್ಲೆಲ್ಲಾ ಹಲವು ಕ್ಷೇತ್ರಗಳಿದ್ದು, ಇವುಗಳಲ್ಲಿ ಕುಮಾರಧಾರಾ ಸ್ನಾನಘಟ್ಟದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ ರಸ್ತೆಯಲ್ಲಿ ಸಿಗುವ ಅಭಯ ಮಹಾಗಣಪತಿ ಕ್ಷೇತ್ರವೂ ಒಂದು.

ಈ ದೇವಾಲಯದ ಮುಖ್ಯ ರಸ್ತೆಯ ಬಲಭಾಗದಲ್ಲಿದೆ. ಈ ಕ್ಷೇತ್ರದಲ್ಲಿರುವ ಗಣಪನ ವಿಗ್ರಹ ಅತ್ಯಂತ ದೊಡ್ಡ ಏಕಶಿಲಾ ಪ್ರತಿಮೆಗಳಲ್ಲಿ ಒಂದಾಗಿದೆ. ಈ ವಿಗ್ರಹವು 21 ಅಡಿ (6.4 ಮೀ) ಎತ್ತರವಾಗಿದೆ. ದೇವಾಲಯದ ವಾಸ್ತುಶಿಲ್ಪವು ನೇಪಾಳಿ ಶೈಲಿಯಲ್ಲಿದ್ದು, ಕುಕ್ಕೆ ಸುಬ್ರಹ್ಮಣ್ಯ ಕ್ಕೆ ತೆರಳುವ ಎಲ್ಲಾ ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡಿ ಗಣಪತಿಯ ಅನುಗ್ರಹವನ್ನು ಪಡೆಯುತ್ತಿದ್ದಾರೆ.

ಇದನ್ನೂ ಓದಿ: Hasanamba Temple: ಮೊಬೈಲ್‌ನಲ್ಲೇ ಟಿಕೆಟ್‌ ಬುಕ್‌ ಮಾಡಿ- ಆರಾಮಾಗಿ ಹಾಸನಾಂಬ ದೇವಿಯ ದರ್ಶನ ಪಡೆಯಿರಿ!

ಏಕಶಿಲಾ ಗಣಪತಿ ವಿಗ್ರಹ ಇದು!

ಇಡೀ ಗಣಪತಿಯ ಮೂರ್ತಿಯನ್ನು ಕೇವಲ ಒಂದೇ ಕಲ್ಲನ್ನು ಬಳಸಿಕೊಂಡು ನಿರ್ಮಿಸಲಾಗಿದೆ. ಭಕ್ತಿಯ ಜೊತೆಗೆ ಜನಾಕರ್ಷಣೆಯ ಕೇಂದ್ರಬಿಂದುವೂ ಆಗಿರುವ ಈ ಅಭಯ ಮಹಾಗಣಪತಿ ದೇವಸ್ಥಾನದ ಆಕೃತಿಯೂ ವಿಭಿನ್ನವಾಗಿದೆ. ಭಾರತೀಯ ಮತ್ತು ನೇಪಾಳಿ ಶಿಲ್ಪಕಲೆಯನ್ನು ಬಳಸಿಕೊಂಡು ಈ ಕ್ಷೇತ್ರವನ್ನು ನಿರ್ಮಿಸಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಸುಬ್ರಹ್ಮಣ್ಯದ ಸಂಪುಟ ನರಸಿಂಹ ವ್ಯಾಪ್ತಿಗೆ ಬರುತ್ತೆ ಕ್ಷೇತ್ರ

ಸುಬ್ರಹ್ಮಣ್ಯದ ಸಂಪುಟ ನರಸಿಂಹ ವ್ಯಾಪ್ತಿಗೆ ಬರುವ ಈ ಕ್ಷೇತ್ರ ಮಠದ ಆಡಳಿತಕ್ಕೆ ಒಳಪಟ್ಟಿದ್ದು, ಕ್ಷೇತ್ರದ ಎಲ್ಲಾ ವ್ಯವಸ್ಥೆಗಳು ಮಠದ ಮೂಲಕವೇ ನಡೆಯುತ್ತಿದೆ. ಅತ್ಯಂತ ಎತ್ತರದಲ್ಲಿ ಶೋಭಾಯಮಾನವಾಗಿ ವಿರಾಜಮಾನನಾಗಿರುವ ಗಣೇಶನನ್ನು ಹತ್ತಿರದಿಂದ ನೋಡೋದೇ ಒಂದು ರೀತಿಯ ರೋಮಾಂಚನ. ದೇವರ ವಿಗ್ರಹದ ಪಕ್ಕದಲ್ಲೇ ದೇವರಿಗೆ ಆರತಿ ಬೆಳಗುವ ಅವಕಾಶವೂ ಈ ಕ್ಷೇತ್ರದಲ್ಲಿದ್ದು,ಇಲ್ಲಿಗೆ ಬರುವ ಭಕ್ತಾಧಿಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ಗಣಪನಿಗೆ ಆರತಿ ಬೆಳಗಿ ಕೃತಾರ್ಥರಾಗುತ್ತಾರೆ.