Ghibli Style Image: ಘಿಬ್ಲಿ ಸ್ಟೈಲ್‌ ಇಮೇಜ್‌ ಟ್ರೆಂಡ್‌- ಸೈಬರ್‌ ವಂಚಕರ ಜಾಲಕ್ಕೆ ಸಿಗದಿದ್ರೆ ಒಳ್ಳೇದು ಅಂತಿದಾರೆ ತಜ್ಞರು! | Ghibli style image trend – experts say it’s best if it doesn’t fall into the hands of cybercriminals!

Ghibli Style Image: ಘಿಬ್ಲಿ ಸ್ಟೈಲ್‌ ಇಮೇಜ್‌ ಟ್ರೆಂಡ್‌- ಸೈಬರ್‌ ವಂಚಕರ ಜಾಲಕ್ಕೆ ಸಿಗದಿದ್ರೆ ಒಳ್ಳೇದು ಅಂತಿದಾರೆ ತಜ್ಞರು! | Ghibli style image trend – experts say it’s best if it doesn’t fall into the hands of cybercriminals!

Last Updated:

ಆದ್ದರಿಂದ ಎಐ ಆಧಾರಿತ ಟೂಲ್ಸ್‌ನಲ್ಲಿ ಫೋಟೊ ಅಪ್ಲೋಡ್ ಮಾಡುವ ಮೊದಲು ಎರಡೆರಡು ಬಾರಿ ಯೋಚಿಸಬೇಕು. ಹಾಗೇನಾದರೂ ಫೋಟೊ ಬಳಸಬೇಕಾದಲ್ಲಿ ಮೆಟಾಡೇಟಾ ಡಿಲೀಟ್ ಮಾಡುವ ಟೂಲ್ಸ್ ಉಪಯೋಗಿಸಬಹುದು.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಟ್ರೆಂಡ್ ಸೃಷ್ಟಿಸಿರುವ ಘಿಬ್ಲಿ ಸ್ಟೈಲ್‌ ಇಮೇಜ್‌ಗೆ(Ghibli Style Image) ಫಿದಾ ಆಗದಿರುವವರು ಇಲ್ಲ. ತಮ್ಮ ಫೋಟೊವನ್ನು ಘಿಬ್ಲಿ‌ ಸ್ಟೈಲ್‌ಗೆ ಪರಿವರ್ತಿಸಿ ಖುಷಿ ಪಡುತ್ತಿರುವವರನ್ನು ನಾವು ನೋಡುತ್ತಿದ್ದೇವೆ. ಎಐ ತಂತ್ರಜ್ಞಾನ(AI Technology) ಬಳಸಿ ಘಿಬ್ಲಿ ಆರ್ಟ್ ಮಾಡುವವರಿಗೆ ಪೊಲೀಸರು, ಸೈಬರ್ ತಜ್ಞರು(Cyber Experts) ಖಡಕ್ ಎಚ್ಚರಿಕೆ ನೀಡಿದ್ದಾರೆ. ಹೌದು… ಘಿಬ್ಲಿ ಸ್ಟೈಲ್ ಇಮೇಜ್ ಸೃಷ್ಟಿಸಲು ಎಐ ಬಳಸುವ ಮೊದಲು ಸಾಕಷ್ಟು ಯೋಚನೆ ಮಾಡಿ. ಕೆಲವು ಎಐ ಆ್ಯಪ್‌ಗಳು ಗೌಪ್ಯತೆಯನ್ನು ರಕ್ಷಿಸುವುದಿಲ್ಲ. ಆದ್ದರಿಂದ ವಿಶ್ವಾಸಾರ್ಹ ಎಐ ಆ್ಯಪ್‌ಗಳ‌ನ್ನು(AI Apps) ಮಾತ್ರ ಬಳಸಿ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ.

ಸೈಬರ್ ತಜ್ಞರ ಪ್ರಕಾರ, ನಾವು ತೆಗೆದ ಪ್ರತಿಯೊಂದು ಫೋಟೋದಲ್ಲೂ “ಮೆಟಾಡೇಟಾ” ಎಂಬ ಮಾಹಿತಿಯಿರುತ್ತದೆ. ಈ ಮೆಟಾಡೇಟಾ ಅಥವಾ EXIF ನಲ್ಲಿ ನಾವು ಯಾವ ಡಿವೈಸ್‌ನಲ್ಲಿ ಫೋಟೊ ತೆಗೆದಿದ್ದೇವೆ. ಯಾವ ಸ್ಥಳದಲ್ಲಿ ತೆಗೆದಿದ್ದೇವೆ (GPS ಲೊಕೆಶನ್), ಯಾವಾಗ ತೆಗೆದಿದ್ದೇವೆ. ಫ್ಲ್ಯಾಶ್ ಬಳಸಿದ್ದೇವೆಯೇ? ಎಂಬ ಸಂಪೂರ್ಣ ಮಾಹಿತಿ ಇರುತ್ತದೆ. ಈ ಮಾಹಿತಿ ಸೈಬರ್ ಕ್ರಿಮಿನಲ್‌ಗಳ ಕೈಗೆ ಸಿಕ್ಕಿದರಂತೂ ನಾವಿರುವ ಸ್ಥಳ, ಸಮಯ ಮತ್ತು ಬದುಕಿನ ವೈಯಕ್ತಿಕ ವಿವರಗಳು ಖಂಡಿತಾ ಬಯಲಾಗಲು ಸಾಧ್ಯ.

ಇದನ್ನೂ ಓದಿ: Dakshina Kannada: ದಾರಿಹೋಕರ ಗಮನ ಸೆಳೆಯುತ್ತಿದೆ ಹೆದ್ದಾರಿ ಪಕ್ಕದ ಈ ಬೆಟ್ಟ!

ಆದ್ದರಿಂದ ಎಐ ಆಧಾರಿತ ಟೂಲ್ಸ್‌ನಲ್ಲಿ ಫೋಟೊ ಅಪ್ಲೋಡ್ ಮಾಡುವ ಮೊದಲು ಎರಡೆರಡು ಬಾರಿ ಯೋಚಿಸಬೇಕು. ಹಾಗೇನಾದರೂ ಫೋಟೊ ಬಳಸಬೇಕಾದಲ್ಲಿ ಮೆಟಾಡೇಟಾ ಡಿಲೀಟ್ ಮಾಡುವ ಟೂಲ್ಸ್ ಉಪಯೋಗಿಸಬಹುದು. ಬಳಸುವ ಮುನ್ನ ಯಾವುದೇ ಅಪ್ಲಿಕೇಶನ್‌‌ನ ಪರ್ಮಿಶನ್ಸ್‌ಅನ್ನು ಗಮನಿಸಿ, ಅನುಮತಿ ನೀಡಿ. ಫೋಟೋದಲ್ಲಿ ನಿಮ್ಮೊಂದಿಗೆ ಇತರರು ಇದ್ದರೆ ಅವರ ಅನುಮತಿಯಿಲ್ಲದೆ ಅಪ್ಲೋಡ್ ಮಾಡಬೇಡಿ. Terms & Conditions ಓದಿ ಅರ್ಥಮಾಡಿಕೊಳ್ಳಿ. Targeted Ads ಹಿಂತೆಗೆದುಕೊಳ್ಳಲು ನಿಮ್ಮ ಬ್ರೌಸರ್ ಅಥವಾ ಆಪ್ ಸೆಟ್ಟಿಂಗ್‌ಗಳಲ್ಲಿ opt-out ಆಯ್ಕೆ ಮಾಡಿಕೊಳ್ಳಲು ಸೈಬರ್ ತಜ್ಞರು ಸಲಹೆ ನೀಡುತ್ತಿದ್ದಾರೆ.

ನಮ್ಮ ಫೋಟೊಗಳು ಸೈಬರ್ ಖದೀಮರ ಕೈಗೆ ಸಿಕ್ಕಿದ್ದಲ್ಲಿ ಅವರು ತಮಗೆ ಬೇಕಾದಂತೆ ಅದನ್ನು ಬದಲಾಯಿಸಿ ಬ್ಲ್ಯಾಕ್ ಮೇಲ್ ಮಾಡುವ ಅಪಾಯವಿದೆ. ಆದ್ದರಿಂದ ಘಿಬ್ಲಿಗೆ ಎಐ ಬಳಸುವ ಮುನ್ನ ಎಚ್ಚರಿಕೆ ವಹಿಸದಿದ್ದಲ್ಲಿ ಆಪತ್ತು ಕಟ್ಟಿಟ್ಟ ಬುತ್ತಿ.