Gill and Pant s Masterclass India Posts 471 in First Innings vs England

Gill and Pant s Masterclass India Posts 471 in First Innings vs England

Last Updated:

ಭಾರತ ತಂಡ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್​ ಪಂದ್ಯದಲ್ಲಿ 471 ರನ್​ಗಳಿಗೆ ಆಲೌಟ್ ಆಗಿದೆ. ನಾಯಕ ಶುಭ್​ಮನ್ ಗಿಲ್ (147, ವಿಕೆಟ್ ಕೀಪರ್ ರಿಷಭ್ ಪಂತ್ (134) ಮತ್ತು ಆರಂಭಿಕ ಯಶಸ್ವಿ ಜೈಸ್ವಾಲ್ (101) ಶತಕ, ಕೆಎಲ್ ರಾಹುಲ್ 42 ರನ್‌ಗಳ ಕೊಡುಗೆ ನೀಡಿದರು.

ಶುಭ್​ಮನ್ ಗಿಲ್- ಪಂತ್ಶುಭ್​ಮನ್ ಗಿಲ್- ಪಂತ್
ಶುಭ್​ಮನ್ ಗಿಲ್- ಪಂತ್

ಲೀಡ್ಸ್​ನ ಹೆಡಿಂಗ್ಲಿ ಮೈದಾನದಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 471ಕ್ಕೆ ಆಲೌಟ್ ಆಗಿದೆ. ಮೊದಲ ದಿನ ಸಂಪೂರ್ಣ ಪ್ರಾಬಲ್ಯ ಮೆರೆದಿದ್ದ ಭಾರತ ತಂಡ 2ನೇ ದಿನ ಅದೇ ಪ್ರದರ್ಶನವನ್ನು ನೀಡುವಲ್ಲಿ ವಿಪಲರಾದರು. ಆದರೆ ರಿಷಭ್ ಪಂತ್ ಮಾತ್ರ 2ನೇ ದಿನ ಅಬ್ಬರಿಸಿ ತಮ್ಮ 6ನೇ ಟೆಸ್ಟ್ ಶತಕ ಪೂರೈಸಿದರು. ನಾಯಕ ಶುಭಮನ್ ಗಿಲ್ (147, ವಿಕೆಟ್ ಕೀಪರ್ ರಿಷಭ್ ಪಂತ್ (134) ಮತ್ತು ಆರಂಭಿಕ ಯಶಸ್ವಿ ಜೈಸ್ವಾಲ್ (101) ಶತಕ, ಕೆಎಲ್ ರಾಹುಲ್ 42 ರನ್‌ಗಳ ಕೊಡುಗೆ ನೀಡಿದರು.