ಎರಡು ತಂಡಗಳ ಪ್ಲೇಯಿಂಗ್ ಇಲೆವೆನ್
ಗುಜರಾತ್ ಟೈಟಾನ್ಸ್ : ಶುಭ್ಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಶೆರ್ಫೇನ್ ರುದರ್ಫೋರ್ಡ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅರ್ಷದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಕಗಿಸೊ ರಬಾಡ, ಪ್ರಶಮದ್ ಸಿರಾಜ್, ಪ್ರಶ್ಮದ್ ಸಿರಾಜ್
ಲಖನೌ ಸೂಪರ್ ಜೈಂಟ್ಸ್: ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (ನಾಯಕ ಮತ್ತು ವಿಕೀ), ನಿಕೋಲಸ್ ಪೂರನ್, ಆಯುಷ್ ಬಡೋನಿ, ಅಬ್ದುಲ್ ಸಮದ್, ಹಿಮ್ಮತ್ ಸಿಂಗ್, ಶಹಬಾಜ್ ಅಹ್ಮದ್, ಅವೇಶ್ ಖಾನ್, ಆಕಾಶ್ ದೀಪ್, ವಿಲಿಯಂ ಓ’ರೂರ್ಕ್
ಅಗ್ರಸ್ಥಾನದ ಮೇಲೆ ಜಿಟಿ ಕಣ್ಣು
ಶುಭ್ ಮನ್ ಗಿಲ್ ನೇತೃತ್ವದ ತಂಡವು ಈಗಾಗಲೇ ಪ್ಲೇಆಫ್‌ನಲ್ಲಿ ಸ್ಥಾನ ಪಡೆದುಕೊಂಡಿದೆ ಮತ್ತು ಫೈನಲ್ ತಲುಪುವ ಉತ್ತಮ ಅವಕಾಶಕ್ಕಾಗಿ ಅಗ್ರ-ಎರಡು ಸ್ಥಾನಗಳಿಸುವ ಗುರಿಯನ್ನು ಹೊಂದಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 10 ವಿಕೆಟ್‌ಗಳ ಅಭೂತಪೂರ್ವ ಗೆಲುವಿನ ನಂತರ, ಮಾಜಿ ಚಾಂಪಿಯನ್‌ಗಳು ಆತ್ಮವಿಶ್ವಾಸದಲ್ಲಿದ್ದು, ಆ ಗೆಲುವಿನ ಆವೇಗವನ್ನು ಮುಂದುವರಿಸಲು ಬಯಸುತ್ತಿದೆ.
ಮತ್ತೊಂದೆಡೆ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಸೋಲಿನ ನಂತರ LSG ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ. 12 ಪಂದ್ಯಗಳಲ್ಲಿ ಕೇವಲ ಐದು ಗೆಲುವುಗಳೊಂದಿಗೆ, ರಿಷಭ್ ಪಂತ್ ನೇತೃತ್ವದ ತಂಡವು ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಆದಾಗ್ಯೂ, ತಮ್ಮ ಋತುವನ್ನು ಸಕಾರಾತ್ಮಕವಾಗಿ ಕೊನೆಗೊಳಿಸಲು ಬಯಸುತ್ತಿದೆ. ಈ ಎರಡೂ ತಂಡಗಳು ಕೊನೆಯ ಬಾರಿ ಎಕಾನಾ ಕ್ರೀಡಾಂಗಣದಲ್ಲಿ ಮುಖಾಮುಖಿಯಾದಾಗ, ಎಲ್‌ಎಸ್‌ಜಿ ಆರು ವಿಕೆಟ್‌ಗಳಿಂದ ಗೆದ್ದಿತು ಮತ್ತು ಇದೇ ರೀತಿಯ ಫಲಿತಾಂಶವನ್ನು ಪುನರಾವರ್ತಿಸಲು ಪ್ರಯತ್ನಿಸುತ್ತದೆ.
ಹೆಡ್ ಟು ಹೆಡ್ ದಾಖಲೆ
ಗುಜರಾತ್ ಟೈಟನ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವೆ ನಡೆದ 6 ಪಂದ್ಯಗಳಲ್ಲಿ ಗುಜರಾತ್ 4 ಪಂದ್ಯಗಳನ್ನು ಗೆದ್ದಿದ್ದರೆ, ಲಖನೌ ಸೂಪರ್ ಜೈಂಟ್ಸ್ 2 ಪಂದ್ಯಗಳನ್ನು ಗೆದ್ದಿದೆ.