ಗಿಲ್ ಮೇಲಿದೆ ಬೆಟ್ಟದ್ದಷ್ಟು ಜವಾಬ್ದಾರಿ!
ಹಾರ್ದಿಕ್ ನಾಯಕತ್ವದಲ್ಲಿ, ಜಿಟಿ ಎರಡು ಬಾರಿ ಫೈನಲ್‌ಗೆ ತಲುಪಿದ್ದ ತಂಡ 14 ಪಂದ್ಯಗಳಲ್ಲಿ ಐದು ಗೆಲುವು ಮತ್ತು ಎರಡು ಡ್ರಾ ಸಾಧಿಸಿತ್ತು. ಈ ವರ್ಷ ಶುಭ್‌ಮನ್ ತಮ್ಮ ತಂಡವನ್ನು ಪ್ಲೇಆಫ್‌ಗೆ ಕೊಂಡೊಯ್ಯುವ ಭರವಸೆಯಲ್ಲಿದ್ದಾರೆ. ಇಂದಿನ ಗೆಲುವು ಅವರಿಗೆ ಮತ್ತಷ್ಟು ಹುಮ್ಮಸ್ಸು ನೀಡಲಿದೆ. ಹೀಗಾಗಿ ಇಂದಿನ ಪಂದ್ಯ ಗೆಲ್ಲೋದಕ್ಕೆ ಗಿಲ್ ಈಗಾಗಲೇ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.
ಕಳೆದ ವರ್ಷ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಕೂಡ ಇದೇ ರೀತಿಯ ಆಟವನ್ನು ಆಡಿತ್ತು. ಆಡಿದ 14 ಪಂದ್ಯಗಳಲ್ಲಿ ಐದು ಗೆಲುವು ಮತ್ತು ಒಂಬತ್ತು ಸೋಲುಗಳನ್ನು ಕಂಡಿದೆ. ಪಾಯಿಂಟ್ಸ್ ಟೇಬಲ್‌ನಲ್ಲಿ ಒಂಬತ್ತನೇ ಸ್ಥಾನ ಪಡೆದುಕೊಂಡಿದ್ದರು. ಆದ್ರೆ ಈ ಸೀಸನ್‌ನಲ್ಲಿ ಟಾಪ್ 4 ರಲ್ಲಿ ಬರೋ ಯೋಚನೆಯಲ್ಲಿದ್ದಾರೆ.
ಶ್ರೇಯಸ್ ಅಯ್ಯರ್ ಪಂಜಾಬ್ ನಾಯಕ!
2024 ರ ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್ ಆಗಿತ್ತು. ಈ ತಂಡದ ನಾಯಕನಾಗಿದ್ದ ಶ್ರೇಯಸ್ ಅಯ್ಯರ್ ಅವರನ್ನು ಖರೀದಿ ಮಾಡಲು ಪಂಜಾಬ್ ಕಿಂಗ್ಸ್ ಮುಗಿಬಿದ್ದಿತ್ತು. ಪಂಜಾಬ್ ಕಿಂಗ್ಸ್ 2014ರಲ್ಲಿ ಮೊದಲ ಹಾಗೂ ಕೊನೆ ಬಾರಿ ಫೈನಲ್ ತಲುಪಿತ್ತು. ಈ ಬಾರಿ ಶ್ರೇಯಸ್ ಮಾರ್ಗದರ್ಶನದಲ್ಲಿ ಕಪ್ ಗೆಲ್ಲೋ ನಿರೀಕ್ಷೆಯಲ್ಲಿದೆ.
ಇದನ್ನೂ ಓದಿ: ಐಪಿಎಲ್ ಕ್ರೇಜ್‌ಗೆ ಕಿಚ್ಚು ಹಚ್ಚೋ ಹಾಟ್ ಬ್ಯೂಟೀಸ್ ಇವ್ರೇ!
GT vs PBKS ಹೆಡ್ ಟು ಹೆಡ್
ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 5 ಬಾರಿ ಆಡಿದೆ. ಈ ಪಂದ್ಯಗಳಲ್ಲಿ, GT 3 ಬಾರಿ ಗೆದ್ದಿದೆ, ಆದರೆ PBKS 2 ಬಾರಿ ಜಯಗಳಿಸಿದೆ.
ಗುಜರಾತ್ ಟೈಟನ್ಸ್ ಸಂಭಾವ್ಯ ಪ್ಲೇಯಿಂಗ್ 11
ಶುಭ್ಮನ್ ಗಿಲ್ (ಸಿ), ಜೋಶ್ ಬಟ್ಲರ್, ಸಾಯಿ ಸುದರ್ಶನ್, ಶಾರುಖ್ ಖಾನ್, ಗ್ಲೆನ್ ಫಿಲಿಪ್ಸ್, ರಾಹುಲ್ ತೆವಾಟಿಯಾ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಅರ್ಷದ್ ಖಾನ್, ರಶೀದ್ ಖಾನ್, ಕಗಿಸೊ ರಬಾಡ ಮತ್ತು ಮೊಹಮ್ಮದ್ ಸಿರಾಜ್
ಇಂಪ್ಯಾಕ್ಟ್ ಪ್ಲೇಯರ್ಸ್: ಮಹಿಪಾಲ್ ಲೊಮ್ರೋರ್, ಪ್ರಸಿದ್ಧ್ ಕೃಷ್ಣ, ಮಾನವ್ ಸುತಾರ್
ಪಂಜಾಬ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್ 11!
ಪ್ರಭ್‌ಸಿಮ್ರಾನ್ ಸಿಂಗ್ (WK), ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ (c), ಶಶಾಂಕ್ ಸಿಂಗ್, ಗ್ಲೆನ್ ಮ್ಯಾಕ್ಸ್‌ವೆಲ್, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಅಜ್ಮತುಲ್ಲಾ ಒಮರ್ಜಾಯ್, ಮಾರ್ಕೊ ಜಾನ್ಸೆನ್, ಹರ್‌ಪ್ರೀತ್ ಬ್ರಾರ್, ಯುಜ್ವೇಂದ್ರ ಚಾಹಲ್
ಇಂಪ್ಯಾಕ್ಟ್ ಪ್ಲೇಯರ್ಸ್: ಕುಲದೀಪ್ ಸೇನ್, ಸೂರ್ಯಾಂಶ್ ಶೆಗ್ಡೆ
ಹೇಗಿದೆ ಪಿಚ್?
ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಅನ್ನು ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳ ಸ್ವರ್ಗವೆಂದು ಪರಿಗಣಿಸಲಾಗುತ್ತದೆ.ಇಲ್ಲಿ ಇರುವ ಐದು ಪದರಗಳ ಮಣ್ಣು ಸ್ಥಿರವಾದ ಬೌನ್ಸ್ ಅನ್ನು ಖಚಿತಪಡಿಸುತ್ತದೆ. ಇದರಿಂದ ಬ್ಯಾಟ್ಸ್‌ಮನ್‌ಗಳಿಗೆ ಯಾವುದೇ ದಿಕ್ಕಿನಲ್ಲಿ ಚೆಂಡನ್ನು ಹೊಡೆಯಲು ಸುಲಭವಾಗುತ್ತದೆ. ಆದ್ರೆ, ಅಹಮದಾಬಾದ್‌ನಲ್ಲಿ ಆಟದ ಪರಿಸ್ಥಿತಿಗಳಲ್ಲಿ ಸ್ಪಿನ್ನರ್‌ಗಳು ಕಷ್ಟಪಡುವುದು ಸಹಜ.
Ahmedabad,Gujarat
March 25, 2025 12:29 PM IST