GT vs PBKS, IPL 2025: ಇಂದು ಗುಜರಾತ್ vs ಪಂಜಾಬ್ ಮುಖಾಮುಖಿ! ಹೆಡ್​ ಟು ಹೆಡ್ ರೆಕಾರ್ಡ್, ಕೀ ಪ್ಲೇಯರ್ಸ್ ಕುರಿತು ಮಾಹಿತಿ ಇಲ್ಲಿದೆ | GT vs PBKS IPL 2025 Match Prediction head to head XI Pitch and Weather Report

GT vs PBKS, IPL 2025: ಇಂದು ಗುಜರಾತ್ vs ಪಂಜಾಬ್ ಮುಖಾಮುಖಿ! ಹೆಡ್​ ಟು ಹೆಡ್ ರೆಕಾರ್ಡ್, ಕೀ ಪ್ಲೇಯರ್ಸ್ ಕುರಿತು ಮಾಹಿತಿ ಇಲ್ಲಿದೆ | GT vs PBKS IPL 2025 Match Prediction head to head XI Pitch and Weather Report

ಗುಜರಾತ್ ಟೈಟಾನ್ಸ್ 2022ರಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದಿದ್ದು, ತಮ್ಮ ಚೊಚ್ಚಲ ಋತುವಿನಲ್ಲಿ ಭರ್ಜರಿ ಪ್ರದರ್ಶನ ನೀಡಿತ್ತು. ಆದರೆ, ಪಂಜಾಬ್ ಕಿಂಗ್ಸ್ 2008ರಿಂದ ಐಪಿಎಲ್‌ನಲ್ಲಿ ಭಾಗವಹಿಸುತ್ತಿದ್ದರೂ ಒಮ್ಮೆಯೂ ಪ್ರಶಸ್ತಿ ಗೆಲ್ಲಲಿಲ್ಲ. 2014ರಲ್ಲಿ ಫೈನಲ್ ತಲುಪಿದ್ದ ಪಂಜಾತ್ ತಂಡವನ್ನು ಕೆಕೆಆರ್ ಸೋಲಿಸಿ ಟ್ರೋಫಿ ಗೆದ್ದಿತ್ತು. ಈ ಬಾರಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಪಂಜಾಬ್ ತಂಡ ತಮ್ಮ ಮೊದಲ ಟ್ರೋಫಿಗಾಗಿ ಹೋರಾಡಲಿದೆ.

ಇದನ್ನೂ ಓದಿ: ಮುಂಬೈ ವಿರುದ್ಧ ಗೆಲುವಿಗೆ ಆತನೇ ಕಾರಣ! 20ರ ಯುವಕ ನಮ್ಮ ತಂಡದ ಎಕ್ಸ್​ ಫ್ಯಾಕ್ಟರ್ ಎಂದ ಗಾಯಕ್ವಾಡ್

ಹೆಡ್​ ಟು ಹೆಡ್ ದಾಖಲೆ

ಈ ಎರಡು ತಂಡಗಳ ನಡುವೆ ಇದುವರೆಗೆ ಒಟ್ಟು ಐದು ಪಂದ್ಯಗಳು ನಡೆದಿದ್ದು, ಗುಜರಾತ್ ಟೈಟಾನ್ಸ್ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಮೇಲುಗೈ ಪಡೆದಿದೆ. ಪಂಜಾಬ್ ಕಿಂಗ್ಸ್ ಎರಡು ಪಂದ್ಯಗಳಲ್ಲಿ ಜಯ ಗಳಿಸಿದ್ದು, ಕಳೆದ ಋತುವಿನ ಕೊನೆಯ ಎನ್‌ಕೌಂಟರ್‌ನಲ್ಲಿ ಶಶಾಂಕ್ ಸಿಂಗ್ (61 ರನ್) ಮತ್ತು ಅಶುತೋಷ್ ಶರ್ಮಾ ಅವರ ಅದ್ಭುತ ಬ್ಯಾಟಿಂಗ್‌ನಿಂದ ಮೂರು ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತ್ತು. ಈ ಬಾರಿ ಗುಜರಾತ್ ತವರು ಮೈದಾನದಲ್ಲಿ ಆಡುವುದರಿಂದ ಪಂದ್ಯ ರೋಚಕತೆಯನ್ನು ಇನ್ನಷ್ಟು ಹೆಚ್ಚಿಸಿದೆ.

ತಂಡದ ಬಲಾಬಲ

ಗುಜರಾತ್ ತಂಡದ ಶುಭಮನ್ ಗಿಲ್ ಈ ಋತುವಿನಲ್ಲಿ ನಾಯಕತ್ವದ ಜೊತೆಗೆ ತಮ್ಮ ಬ್ಯಾಟಿಂಗ್‌ನಲ್ಲಿ ಹೊಸ ಆಯಾಮವನ್ನು ತರಲು ಪ್ರಯತ್ನಿಸುತ್ತಿದ್ದಾರೆ. ರಶೀದ್ ಖಾನ್, ಜೋಸ್ ಬಟ್ಲರ್ ಮತ್ತು ಕಗಿಸೊ ರಬಾಡದಂತಹ ಅಂತರರಾಷ್ಟ್ರೀಯ ತಾರೆಯರು ತಂಡದ ಶಕ್ತಿಯನ್ನು ಹೆಚ್ಚಿಸಿದ್ದಾರೆ. ಇನ್ನೊಂದೆಡೆ, ಪಂಜಾಬ್ ತಂಡದಲ್ಲಿ, ಸ್ಟೋಯ್ನಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಯುಜ್ವೇಂದ್ರ ಚಾಹಲ್ ಅವರ ಅನುಭವವು ಶ್ರೇಯಸ್ ಅಯ್ಯರ್‌ಗೆ ಬೆಂಬಲವಾಗಿದ್ದಾರೆ.

ಇದನ್ನೂ ಓದಿ: ಹೈದರಾಬಾದ್​ ಪರ 7ನೇ ಶತಕ ಸಿಡಿಸಿದ ಇಶಾನ್ ಕಿಶನ್! ಅತಿ ಹೆಚ್ಚು ಶತಕ ದಾಖಲಿಸಿದ ಟಾಪ್ ತಂಡಗಳಿವು

ಸಂಭಾವ್ಯ ತಂಡಗಳು

ಗುಜರಾತ್ ಟೈಟನ್ಸ್ ಸಂಭಾವ್ಯ ಆಟಗಾರರು: ಶುಭ್​ಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಗ್ಲೆನ್ ಫಿಲಿಪ್ಸ್, ರಾಹುಲ್ ತೆವಾಟಿಯಾ, ವಾಷಿಂಗ್ಟನ್ ಸುಂದರ್, ರಶೀದ್ ಖಾನ್, ಮೊಹಮ್ಮದ್ ಸಿರಾಜ್, ಸಾಯಿ ಕಿಶೋರ್, ಕಗಿಸೊ ರಬಾಡ, ಪ್ರಸಿದ್ಧ್ ಕೃಷ್ಣ. ಇಂಪ್ಯಾಕ್ಟ್ ಪ್ಲೇಯರ್ಸ್ ಶಾರುಖ್ ಖಾನ್ ಮತ್ತು ಮಹಿಪಾಲ್ ಲೊಮ್ರೋರ್

ಪಂಜಾಬ್​ ಕಿಂಗ್ಸ್ ಸಂಭಾವ್ಯ ಆಟಗಾರರು: ಪ್ರಭಸಿಮ್ರಾನ್ ಸಿಂಗ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಶಶಾಂಕ್ ಸಿಂಗ್, ನೆಹಾಲ್ ವಧೇರಾ, ಮಾರ್ಕೊ ಜಾನ್ಸನ್, ಹರ್‌ಪ್ರೀತ್ ಬ್ರಾರ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಹಲ್. ಇಂಪ್ಯಾಕ್ಟ್ ಪ್ಲೇಯರ್ಸ್: ಲಾಕಿ ಫರ್ಗುಸನ್ ಮತ್ತು ಅಜ್ಮತುಲ್ಲಾ ಒಮರ್ಜೈ