Last Updated:
ಗುಜರಾತ್ ಟೈಟನ್ಸ್ 217 ರನ್ಗಳ ಬೃಹತ್ ಮೊತ್ತ ದಾಖಲಿಸಿದ್ದು, ಸಾಯಿ ಸುದರ್ಶನ್ 82 ರನ್ಗಳೊಂದಿಗೆ ಮಿಂಚಿದರು. ಜೋಸ್ ಬಟ್ಲರ್ ಮತ್ತು ಶಾರುಖ್ ಖಾನ್ 36 ರನ್ಗಳೊಂದಿಗೆ ಸಹಕರಿಸಿದರು.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2025ರ 23 ನೇ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಿವೆ. ಆತಿಥೇಯ ಗುಜರಾತ್ ಟೈಟಾನ್ಸ್ ಟಾಸ್ ಸೋತು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 217 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ. ಆರಂಭಿಕ ಬ್ಯಾಟ್ಸ್ಮನ್ ಸಾಯಿ ಸುದರ್ಶನ್ (82) ಮತ್ತೊಮ್ಮೆ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರು. ಜೋಸ್ ಬಟ್ಲರ್ (36) ಹಾಗೂ ಶಾರುಖ್ ಖಾನ್ (36) ಸುದರ್ಶನ್ಗೆ ಸಾಥ್ ನೀಡಿ ಬೃಹತ್ ಮೊತ್ತಕ್ಕೆ ನೆರವಾದರು.
First Published :
April 09, 2025 9:24 PM IST