Last Updated:
ಗುರುಪೂರ್ಣಿಮೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ಮಹತ್ವವಿದೆ. ಶೈಕ್ಷಣಿಕ ವೃಂದ, ಬೌದ್ಧರು, ಯೋಗ ಸಂಪ್ರದಾಯದಲ್ಲಿ ಗುರುಗಳ ಪ್ರಾಮುಖ್ಯತೆಯನ್ನು ಸ್ಮರಿಸುತ್ತಾರೆ.
ದಕ್ಷಿಣ ಕನ್ನಡ: ನಾಡಿನೆಲ್ಲಡೆ ಇಂದು ಗುರುಪೂರ್ಣಿಮೆಯನ್ನು (Guru Purnima) ಶ್ರದ್ಧಾಭಕ್ತಿಯಿಂದ ಆಚರಿಲಾಗುತ್ತಿದೆ. ಕಿರಿಯರು ಹಿರಿಯರನ್ನು ಸನ್ಮಾನಿಸುವ, ಆಶೀರ್ವಾದ ಕೋರುವ ವಿಶೇಷ (Special)ಆಚರಣೆ (Celebration) ಇದು. ವ್ಯಕ್ತಿಯ ಜೀವನದಲ್ಲಿ ಗುರುವಿನ ಸ್ಥಾನದಲ್ಲಿರುವ ವ್ಯಕ್ತಿಗೆ ಗೌರವ ಸಲ್ಲಿಸುವ ಈ ದಿನವನ್ನು ಎಲ್ಲಾ ವರ್ಗದ ಜನ ಆಚರಿಸುತ್ತಿದ್ದು, ಈ ದಿನಕ್ಕೆ ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ಭಾರೀ ಮಹತ್ವವೂ ಇದೆ.
ಹಿಂದೂ ಪಂಚಾಂಗದ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಈ ದಿನದಂದು, ಹಿಂದೂಗಳು ಮತ್ತು ಬೌದ್ಧರು ತಮ್ಮ ಗುರುವಿಗೆ ಪೂಜೆ ಸಲ್ಲಿಸುತ್ತಾರೆ.
ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ.
ಗುರುಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆ ಅಲ್ಲದೆ ಶೈಕ್ಷಣಿಕ ಮತ್ತು ವಿದ್ವಾಂಸರ ವೃಂದದಲ್ಲೂ ಮಹತ್ವವಿದೆ. ಈ ದಿನ ಶೈಕ್ಷಣಿಕ ವೃಂದದವರು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಮತ್ತು ತಮ್ಮ ಭಾವಿ ಶಿಕ್ಷಕರನ್ನು ಮತ್ತು ವಿದ್ವಾಂಸರನ್ನು ಸ್ಮರಿಸುವ ಮೂಲಕ ಆಚರಿಸುತ್ತಾರೆ.
Dakshina Kannada,Karnataka
July 10, 2025 7:16 PM IST