Last Updated:
ಬಿಟ್ಟರ್ ಜಿಂಜರ್ ಸಸಿ ದೇಸಿಯ ಶ್ಯಾಂಪೂ ಆಗಿದ್ದು, ಹಳ್ಳಿ ಜನ ಕೂದಲು ಆರೈಕೆಗೆ ಬಳಸುತ್ತಿದ್ದರು. ಕೆಮಿಕಲ್ ರಹಿತ ಈ ಶ್ಯಾಂಪೂ ಕೂದಲು ಸಮಸ್ಯೆಗಳಿಗೆ ರಾಮಬಾಣ.
ದಕ್ಷಿಣಕನ್ನಡ: ತಲೆ ಕೂದಲು (Hair) ಸೊಂಪಾಗಿ ಬೆಳೆಯಲು, ಕೂದಲು ಉದುರದಿರಲು, ಬಿಳಿಯಾಗದಿರಲು ಇಂದು ಮಾರುಕಟ್ಟೆಯಲ್ಲಿ ಭಿನ್ನ ಭಿನ್ನವಾದ ಶ್ಯಾಂಪೂಗಳಿವೆ. ರಾಸಾಯನಿಕಯುಕ್ತ (Chemical) ಈ ಶ್ಯಾಂಪೂಗಳ ಕಂಪನಿಗಳು (Company) ಹೇಳುವಂತೆ ಇವುಗಳು ತಲೆಯಲ್ಲಿ ಕೂದಲನ್ನು ಬೆಳೆಯುವಂತೆ ಮಾಡುತ್ತೋ ಅಥವಾ ಇಲ್ಲದಂತೆ ಮಾಡುತ್ತೋ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿಯೇ ಉಳಿದಿದೆ. ಹಾಗಾದರೆ ಈ ಶ್ಯಾಂಪೂ, ಸೋಪು ಇಲ್ಲದ ಕಾಲದಲ್ಲಿ ಜನ ಏನು ಮಾಡುತ್ತಿದ್ದರು? ಯಾವುದನ್ನ ಶ್ಯಾಂಪೂ, ಸಾಬೂನು ತರಹ ಉಪಯೋಗಿಸುತ್ತಿದ್ದರು? ಅನ್ನೋ ಪ್ರಶ್ನೆಗಳಿಗೆ ಕೆಲವು ಗಿಡಗಳು (Plants) ಉತ್ತರವನ್ನು ನೀಡುತ್ತವೆ.
ಇಂತಹ ಗಿಡಗಳಲ್ಲಿ ಬಿಟ್ಟರ್ ಜಿಂಜರ್ ಸಸಿಯೂ ಒಂದು. ಈ ಸಸಿಯಲ್ಲಿ ಬೆಳೆಯುವ ಹೂವಿನಾಕಾರದ ವಸ್ತುವನ್ನು ಹಿಸುಕಿದರೆ ಸಾಕು ನೊರೆಯುಕ್ತ ಶ್ಯಾಂಪೂ ರೀತಿಯ ನೀರು ಹೊರಬರುತ್ತದೆ. ಹಿಂದಿನ ಕಾಲದ ಜನ ಹೆಚ್ಚಾಗಿ ಈ ಬಿಟ್ಟರ್ ಜಿಂಜರ್ ಶ್ಯಾಂಪೂವನ್ನೇ ಹೆಚ್ಚಾಗಿ ತಮ್ಮ ತಲೆಗೂದಲ ಆರೈಕೆಗಾಗಿ ಬಳಸುತ್ತಿದ್ದರು.
ಕೂದಲ ಆರೈಕೆಗೆ ಇರುವ ಅತ್ಯುತ್ತಮ ಕೆಮಿಕಲ್ ರಹಿತವಾದ ಶ್ಯಾಂಪೂವನ್ನ ಈ ಬಿಟ್ಟರ್ ಜಿಂಜರ್ ಮೂಲಕ ಪಡೆಯಬಹುದಾಗಿದೆ. ಇದು ಶುಂಠಿಯ ಒಂದು ಪ್ರಭೇದವಾಗಿದ್ದು ಶುಂಠಿಯಂತದ್ದೇ ವಾಸನೆಯೂ ಹೊಂದಿದೆ. ಕೂದಲು ತುಂಬಾ ಉದುರುತ್ತಿದ್ದರೆ, ಬಹಳ ಎಳೆವೆಯಲ್ಲಿ ತಲೆಕೂದಲು ಬಿಳಿಯಾಗುವುದು (ಬಾಲನರೆ), ತಲೆಬಿಸಿ, ತಲೆನೋವು, ತಲೆಸುತ್ತು, ತಲೆಹೊಟ್ಟು ಹೀಗೆ ಎಲ್ಲಾ ಸಮಸ್ಯೆಗಳಿಗೂ ಈ ಜಿಂಜರ್ ರಾಮಬಾಣವಾಗಿದೆ.
ಇನ್ನೂ ಇದ್ದಾವೆ ಹಳೆಯ ಜನರ ವಿಶೇಷ ನೈಸರ್ಗಿಕ ಮಾರ್ಜಕಗಳು
ಚರ್ಮರೋಗಗಳ ನಿವಾರಣೆ ಸೇರಿದಂತೆ ಹಲವು ಸಮಸ್ಯೆಗಳನ್ನು ನಿವಾರಿಸುವ ಆರ್ಗಾನಿಕ್ ಶಾಂಪೂ ಇದು. ಈ ಶ್ಯಾಂಪೂ ನೈಸರ್ಗಿಕವಾಗಿ ಸಿಗದ ಸಮಯದಲ್ಲಿ ಹಳ್ಳಿ ಜನ ಎರಪ್ಪೆ ಮರದ ಗೊಂಪು, ಬೆಳ್ಳಂಟೆ ಗೊಂಪು, ಸೀಗೆ, ಬಾಗೆ, ಕಡ್ಲೆ ಹುಡಿ ಮೊದಲಾದ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನೇ ಬಳಸುತ್ತಿದ್ದರು. ಹಳ್ಳಿ ಕಡೆ ಇಂತಹ ಹಲವು ರೀತಿಯ ನೊರೆ ಇರುವ ಸಸಿಗಳಿದ್ದು, ಸಾಬೂನು, ಶ್ಯಾಂಪೂ ಇಲ್ಲದೆಯೇ, ಇವುಗಳನ್ನೇ ಸಂಗ್ರಹಿಸಿ ಉಪಯೋಗಿಸುವ ಜನ ಇಂದಿಗೂ ಇದ್ದಾರೆ. ಸಾಮಾನ್ಯವಾಗಿ ತೋಟ ಮಧ್ಯೆ ಈ ಬಿಟ್ಟರ್ ಜಿಂಜರ್ ಬೆಳೆಯುತ್ತಿದ್ದು, ಇದಕ್ಕೆ ಯಾವುದೇ ರೀತಿಯ ನಿರ್ವಹಣೆಯ ಅಗತ್ಯವೂ ಇಲ್ಲ. ತನ್ನ ಸಮಯ ಬಂದಾಗ ಬೆಳೆದು ನಿಲ್ಲುತ್ತೆ, ಸಮಯ ಕಳೆದಾಗ ಬಾಡಿ ಹೋಗುತ್ತೆ.
Disclaimer
ಇಲ್ಲಿ ಔಷಧಿ ಮತ್ತು ಚಿಕಿತ್ಸೆಯ ಕುರಿತಾಗಿ ನೀಡಿರುವ ಎಲ್ಲಾ ಮಾಹಿತಿ ತಜ್ಞರನ್ನು ಸಂಪರ್ಕಿಸಿದ ನಂತರವೇ ನೀಡಲಾಗಿದೆ. ಇದು ಕೇವಲ ಸಾಮಾನ್ಯ ಮಾಹಿತಿಯಾಗಿದ್ದು ವ್ಯಕ್ತಿಗತವಾದ ಸಲಹೆ ಅಲ್ಲ. ಆದ್ದರಿಂದ ಇವುಗಳನ್ನು ಬಳಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ. ಲೋಕಲ್ 18 ಈ ಮಾಹಿತಿಯ ಬಳಕೆಯಿಂದ ಉಂಟಾದ ಯಾವುದೇ ಹಾನಿ/ನಷ್ಟಕ್ಕೆ ಜವಾಬ್ದಾರರಲ್ಲ.
Dakshina Kannada,Karnataka
September 04, 2025 7:38 AM IST