Last Updated:
ಮಂಗಳೂರು ಮುಕ್ಕ ಶ್ರೀನಿವಾಸ ವಿಶ್ವವಿದ್ಯಾಲಯದ ವಿಶಾಖ್ ಮೆಂಡನ್ ಮತ್ತು ಅರವಿಂದ್ ವಿಲ್ಸನ್ 15 ಕಿ.ಮೀ. ಮನುಷ್ಯ ಸಾಗಿಸುವ ಡ್ರೋನ್ 5 ತಿಂಗಳಲ್ಲಿ ಅಭಿವೃದ್ಧಿಪಡಿಸಿದ್ದಾರೆ.
ಮಂಗಳೂರು: ಹೀಗೆ ಹಾರುತ್ತಿರುವ ಈ ಬೃಹತ್ ಗಾತ್ರದ (Big Size) ಡ್ರೋನ್ ಒಮ್ಮೆ ನೋಡಿ. ಇದು ಅಂತಿಂಥ ಡ್ರೋನ್ (Drone) ಅಲ್ಲ, ಮನುಕುಲಕ್ಕೆ ಮುಂದೆ ಮಹದುಪಕಾರಿಯಾಗಬಲ್ಲ ಡ್ರೋನ್! ಹೌದು ಈ ಡ್ರೋನ್ ನ ವಿಶೇಷತೆ ಇದೆಯಲ್ಲ ಅದು ನೀವು ಊಹಿಸಲು (Guess) ಅಸಾಧ್ಯವಾದದ್ದು, ಪ್ಯಾರಾ ಗ್ಲೈಡಿಂಗ್ (Para Gliding) ಮಾದರಿಯ ಈ ಉಪಕರಣ ವಸ್ತುಗಳನ್ನಲ್ಲ, ಮನುಷ್ಯರನ್ನೇ ಸಾಗಿಸುತ್ತದೆ!
ಮಂಗಳೂರಿನ ಮುಕ್ಕ ಶ್ರೀನಿವಾಸ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಈ ಡ್ರೋನ್ ಆವಿಷ್ಕರಿಸಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ವಿಶ್ವಾಸ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ವಿಶಾಖ್ ಮೆಂಡನ್ ಹಾಗೂ ರೊಬೊಟಿಕ್ಸ್ ಮತ್ತು ವಿಮಾನ ನಿರ್ವಹಣಾ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಅರವಿಂದ್ ವಿಲ್ಸನ್ ಈ ಡ್ರೋನ್ ಅಭಿವೃದ್ಧಿಪಡಿಸಿದ್ದಾರೆ.
ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಅಗತ್ಯ ಸಹಾಯ ತಲುಪಲು ಅಸಾಧ್ಯವಾದ ಪ್ರದೇಶಗಳಲ್ಲಿ ಸಿಲುಕಿದವರನ್ನು ರಕ್ಷಿಸಲು ಬಳಸಲು, ತುರ್ತು ಪರಿಸ್ಥಿತಿ ಅಥವಾ ಅಪಘಾತದ ಸಂದರ್ಭ, ವೈದ್ಯಕೀಯ ಸಿಬ್ಬಂದಿ, ಔಷಧಿ ಮತ್ತು ಅಗತ್ಯ ವಸ್ತುಗಳನ್ನು ತಲುಪಲು ಕಷ್ಟವಾದ ಪ್ರದೇಶಗಳಿಗೆ ಶೀಘ್ರ ಸಾಗಿಸಲು ಈ ಡ್ರೋನ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ.
ಈ ಡ್ರೋನ್ ಓರ್ವ ವ್ಯಕ್ತಿಯನ್ನು 15 ಕಿ.ಮೀ.ವರೆಗೆ ಸಾಗಿಸುವ ಸಾಮರ್ಥ್ಯ ಹೊಂದಿದೆ. 120 ಕೆಜಿ ತೂಕವಿರುವ ಈ ಡ್ರೋನ್ 80 ಕೆಜಿ ತೂಕವನ್ನು ಸಾಗಿಸುವಷ್ಟು ಶಕ್ತವಿದೆ. 2 ಕಿಲೋ ವ್ಯಾಟ್ ಪವರ್ ಇರುವ ಈ ಡ್ರೋನ್ನಲ್ಲಿ 8 ಮೋಟರ್ ಅಳವಡಿಸಲಾಗಿದ್ದು, ತಲಾ 22 ವೋಲ್ಟ್ನ 6 ಲೀಥಿಯಂ ಬ್ಯಾಟರಿ ಫಿಕ್ಸ್ ಮಾಡಲಾಗಿದೆ. ಆರು ಲಕ್ಷ ರೂಪಾಯಿ ಖರ್ಚು ಆಗಿದೆ. ಈ ಹಣವನ್ನು ಶ್ರೀನಿವಾಸ್ ಮ್ಯಾನೇಜ್ಮೆಂಟ್ ನೀಡಿದೆ.
ಕೇವಲ 5 ತಿಂಗಳಲ್ಲಿ ಡ್ರೋನ್ ತಯಾರಿಸಿದ ಹುಡುಗರು!
Mangalore,Dakshina Kannada,Karnataka
August 29, 2025 11:56 AM IST