ICC ಅಂಪೈರ್ ಹಠಾತ್ ನಿಧನ: ಶೋಕ ಸಾಗರದಲ್ಲಿ ಕ್ರಿಕೆಟ್ ಜಗತ್ತು | International Cricket Umpire Shinwari Passes Away Cricket World in Mourning

ICC ಅಂಪೈರ್ ಹಠಾತ್ ನಿಧನ: ಶೋಕ ಸಾಗರದಲ್ಲಿ ಕ್ರಿಕೆಟ್ ಜಗತ್ತು | International Cricket Umpire Shinwari Passes Away Cricket World in Mourning

Last Updated:

41 ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಅಂಪೈರ್ ನಿಧನರಾದ ನಂತರ ಕ್ರಿಕೆಟ್ ಜಗತ್ತು ಶೋಕದಲ್ಲಿದೆ. ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಪಾತ್ರ ನಿರ್ವಹಿಸಿದ್ದ ಅಂಪೈರ್ ನಿಧನರಾಗಿದ್ದರು.

News18News18
News18

41 ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ (ICC) ಪಂದ್ಯಗಳಲ್ಲಿ ಅಂಪೈರ್  ಆಗಿ ಕಾರ್ಯನಿರ್ವಹಿಸಿದ್ದ ಅಂಪೈರ್ (Umpair) ಒಬ್ಬರು ನಿಧನರಾಗಿದ್ದು, ಸದ್ಯ ಕ್ರಿಕೆಟ್ ಜಗತ್ತು ಶೋಕದಲ್ಲಿದೆ.  ಅಫ್ಘಾನಿಸ್ತಾನ (Afghanistan) ಮೂಲಕ ಬಿಸ್ಮಿಲ್ಲಾ ಜಾನ್ ಶಿನ್ವಾರಿ  (Bismillah John Shinwari) ಆರೋಗ್ಯವು ಇತ್ತೀಚೆಗೆ ಹದಗೆಟ್ಟಿತ್ತು. ಹೀಗಾಗಿ ಅವರು ಕಳೆದ ಕೆಲವು ದಿನಗಳ ಹಿಂದೆ ಪಾಕಿಸ್ತಾನದ (Pakistan) ಪೇಶಾವರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 7ರಂದಯ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯಿಂದ ಶಿನ್ವಾರಿಗೆ ಗೌರವ

ಶಿನ್ವಾರಿ 25 ಏಕದಿನ ಮತ್ತು 21 ಟಿ 20 ಪಂದ್ಯಗಳಲ್ಲಿ ಅಂಪೈರ್ ಆಗಿದ್ದರು. ಅವರು ಡಿಸೆಂಬರ್ 2017 ರಲ್ಲಿ ಶಾರ್ಜಾದಲ್ಲಿ ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ನಡುವಿನ ಏಕದಿನ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಮಂಗಳವಾರ ಶಿನ್ವಾರಿಗೆ ಗೌರವ ಸಲ್ಲಿಸಿತು.

ಇದನ್ನೂ ಓದಿ: Vaibhav Suryavanshi: 29 ಸಿಕ್ಸರ್, 355 ರನ್ಸ್, ವೇಗದ ಶತಕ! 14 ವರ್ಷದ ವೈಭವ್ ಸೂರ್ಯವಂಶಿಯಿಂದ ಹಲವು ದಾಖಲೆ

ಅಂತಾರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಬಿಸ್ಮಿಲ್ಲಾ ಜಾನ್ ಶಿನ್ವಾರಿ (41) ಅವರು ಜುಲೈ 7, 2025 ರಂದು ನಿಧನರಾದರು. ಈ ದುಃಖದ ಸುದ್ದಿಯನ್ನು ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ (ಎಸಿಬಿ) ಜುಲೈ 8 ರಂದು ದೃಢಪಡಿಸಿದೆ. ಇದರಿಂದ ಕ್ರಿಕೆಟ್ ಜಗತ್ತಿನಲ್ಲಿ ಶೋಕದ ಛಾಯೆ ಮೂಡಿದೆ. ಶಿನ್ವಾರಿ ಅವರು ತಮ್ಮ ಕಿರಿಯ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದರು.

ಪಾಕಿಸ್ತಾನದಲ್ಲಿ ನಿಧನ

ಇದುವರೆಗೆ ಅವರು 25 ಏಕದಿನ ಪಂದ್ಯಗಳು (ODI),  21 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅಂಪೈರ್ ಆಗಿ ಸೇವೆ ಸಲ್ಲಿಸಿದ್ದಾರೆ. ಪಾಕಿಸ್ತಾನದ ಪೇಶಾವರದ ಆಸ್ಪತ್ರೆಯಲ್ಲಿ ದೇಹದ ಕೊಬ್ಬು ತೆಗೆಯುವ ಶಸ್ತ್ರಚಿಕಿತ್ಸೆಯ ನಂತರ ಶಿನ್ವಾರಿ ನಿಧನರಾದರು ಎಂದು ವರದಿಯಾಗಿದೆ. ಈ ಘಟನೆಯಿಂದ ಐಸಿಸಿ ಅಧ್ಯಕ್ಷ ಜೇ ಶಾ ಸೇರಿದಂತೆ ಅನೇಕರು ಶಿನ್ವಾರಿ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಅಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯದಲ್ಲಿ ಶಿನ್ವಾರಿ ಅವರ ಅಂತಿಮ ಸಂಸ್ಕಾರ ನಡೆಯಿತು. ಅವರು ಐವರು ಗಂಡುಮಕ್ಕಳು ಮತ್ತು 7 ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಕ್ರಿಕೆಟ್ ಸಮುದಾಯವು ಈ ದಿಢೀರ್ ನಷ್ಟವನ್ನು ತೀವ್ರವಾಗಿ ಶೋಕಿಸುತ್ತಿದೆ.