Last Updated:
ಈ ಪಂದ್ಯಾವಳಿಯಲ್ಲಿ 7 ಪಂದ್ಯಗಳನ್ನು ಆಡಿದ ಅಭಿಷೇಕ್ ಶರ್ಮಾ, 200 ಸ್ಟ್ರೈಕ್ ರೇಟ್ ಮತ್ತು 44.58 ರ ಸರಾಸರಿಯಲ್ಲಿ 314 ರನ್ ಗಳಿಸಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಪಡೆದರು. ಮಂಧಾನ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 3 ಏಕದಿನ ಪಂದ್ಯಗಳಲ್ಲಿ 2 ಶತಕ, 1 ಅರ್ಧಶತಕ ಸಿಡಿಸಿದ್ದರು.
ಟೀಮ್ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma) ಮತ್ತು ಭಾರತೀಯ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂಧಾನ (Smriti Mandhana) ಐಸಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಈ ಇಬ್ಬರು ಆಟಗಾರ್ತಿಯರಿಗೆ ಐಸಿಸಿ ತಿಂಗಳ ಆಟಗಾರ್ತಿ ಪ್ರಶಸ್ತಿಯನ್ನು ನೀಡಲಾಯಿತು. ದುಬೈನಲ್ಲಿ ನಡೆದ ಏಷ್ಯಾ ಕಪ್ 2025 (Asia Cup 2025) ಪಂದ್ಯಾವಳಿಯಲ್ಲಿ ಅಭಿಷೇಕ್ ಶರ್ಮಾ ವಿಧ್ವಂಸಕಾರಿ ಬ್ಯಾಟಿಂಗ್ ಪ್ರದರ್ಶನ ತೋರಿ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಈ ಪಂದ್ಯಾವಳಿಯಲ್ಲಿ 7 ಪಂದ್ಯಗಳನ್ನು ಆಡಿದ ಅಭಿಷೇಕ್ ಶರ್ಮಾ, 200 ಸ್ಟ್ರೈಕ್ ರೇಟ್ ಮತ್ತು 44.58 ರ ಸರಾಸರಿಯಲ್ಲಿ 314 ರನ್ ಗಳಿಸಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಪಡೆದರು. ಅವರ ಈ ಅದ್ಭುತ ಪ್ರದರ್ಶನವು ಈ ಪಂದ್ಯಾವಳಿಯಲ್ಲಿ ಟೀಮ್ ಇಂಡಿಯಾ ಏಕಪಕ್ಷೀಯ ಗೆಲುವುಗಳನ್ನು ದಾಖಲಿಸಲು ಮತ್ತು ಚಾಂಪಿಯನ್ ಆಗಲು ನೆರವಾಗಿತ್ತು. ಐಸಿಸಿ ಟಿ20 ಶ್ರೇಯಾಂಕದಲ್ಲಿ ಅಗ್ರ ರೇಟಿಂಗ್ ಅಂಕಗಳನ್ನು ಹೊಂದಿರುವ ಅಭಿಷೇಕ್ ಶರ್ಮಾ, ವಿಶ್ವದ ನಂಬರ್ ಒನ್ ಟಿ 20 ಬ್ಯಾಟ್ಸ್‌ಮನ್ ಆಗಿ ಮುಂದುವರೆದಿದ್ದಾರೆ.
ಈ ಪ್ರದರ್ಶನದೊಂದಿಗೆ, ಅಭಿಷೇಕ್ ಶರ್ಮಾ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅವರ ಜೊತೆಗೆ, ಈ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಕುಲದೀಪ್ ಯಾದವ್ ಕೂಡ ಈ ಪ್ರಶಸ್ತಿಗೆ ಸ್ಪರ್ಧೆಯಲ್ಲಿದ್ದರು. ದ್ವಿಪಕ್ಷೀಯ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಜಿಂಬಾಬ್ವೆ ಆಟಗಾರ ಬ್ರಿಯಾನ್ ಬೆನೆಟ್ ಕೂಡ ಈ ಪ್ರಶಸ್ತಿಯಲ್ಲಿ ಸ್ಪರ್ಧಿಯಾಗಿದ್ದರು. ಆದರೆ ಅಭಿಷೇಕ್ ಶರ್ಮಾ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ಅಭಿಷೇಕ್ ಶರ್ಮಾ ಅವರ ವೃತ್ತಿಜೀವನದಲ್ಲಿ ಇದು ಮೊದಲ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಎಂಬುದು ಗಮನಾರ್ಹ. ಈ ಪ್ರಶಸ್ತಿ ಗೆದ್ದಿದ್ದಕ್ಕೆ ಅಭಿಷೇಕ್ ಶರ್ಮಾ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
‘ಈ ಐಸಿಸಿ ಪ್ರಶಸ್ತಿಯನ್ನು ಗೆದ್ದಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಿರ್ಣಾಯಕ ಪಂದ್ಯಗಳನ್ನು ಗೆದ್ದಿದ್ದಕ್ಕಾಗಿ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸಲು ಇನ್ನೂ ಸಂತೋಷವಾಗಿದೆ. ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿಯೂ ಸಹ ಗೆಲುವು ಸಾಧಿಸಿದ ತಂಡದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಯಿದೆ. “ಟಿ20 ಮಾದರಿಯಲ್ಲಿ ನಮ್ಮ ಇತ್ತೀಚಿನ ಯಶಸ್ಸುಗಳು ನಮ್ಮ ತಂಡದ ಸಂಸ್ಕೃತಿ ಮತ್ತು ಸಕಾರಾತ್ಮಕ ಮನಸ್ಥಿತಿಯ ಪ್ರತಿಬಿಂಬವಾಗಿದೆ” ಎಂದು ಅಭಿಷೇಕ್ ಶರ್ಮಾ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮಂಧಾನ ಅದ್ಭುತ ಪ್ರದರ್ಶನ ನೀಡಿದ್ದರು. ಅವರು ಸತತ ಮೂರು ಪಂದ್ಯಗಳಲ್ಲಿ 58, 117 ಮತ್ತು 125 ರನ್‌ಗಳೊಂದಿಗೆ ತಮ್ಮ ಶಕ್ತಿಯನ್ನು ಪ್ರದರ್ಶಿಸಿದರು. ಅವರು ಮೂರು ಪಂದ್ಯಗಳಲ್ಲಿ 77 ರ ಸರಾಸರಿಯಲ್ಲಿ 308 ರನ್ ಗಳಿಸಿದರು. ಈ ಸರಣಿಯಲ್ಲಿ, ಮಂಧಾನ ಕೇವಲ 50 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ವಿಶ್ವದಾಖಲೆ ಬರೆದಿದ್ದರು. ಮಂಧಾನ ಜೊತೆಗೆ, ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ತಜ್ಮಿನ್ ಬ್ರಿಟ್ಸ್ ಮತ್ತು ಪಾಕಿಸ್ತಾನಿ ಆಟಗಾರ್ತಿ ಸಿದ್ರಾ ಅಮೀನ್ ಈ ಪ್ರಶಸ್ತಿಗಾಗಿ ಸ್ಪರ್ಧೆಯಲ್ಲಿದ್ದರು, ಆದರೆ ಮಂಧಾನ ವಿಜೇತರಾಗಿದ್ದಾರೆ.
ಈ ಪ್ರಶಸ್ತಿ ತನಗೆ ಪ್ರೋತ್ಸಾಹಕವಾಗಿದೆ ಎಂದು ಮಂಧಾನ ಹೇಳಿದರು. ಇಂತಹ ಪ್ರಶಸ್ತಿಗಳು ತನ್ನ ಆಟವನ್ನು ಮತ್ತಷ್ಟು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ತನ್ನ ಗುರಿ ಯಾವಾಗಲೂ ತನ್ನ ಅತ್ಯುತ್ತಮ ಪ್ರದರ್ಶನ ನೀಡುವುದು ಮತ್ತು ತಂಡಕ್ಕೆ ಗೆಲುವುಗಳನ್ನು ತರುವುದು ಎಂದು ಅವರು ಸ್ಷಷ್ಟಪಡಿಸಿದ್ದಾರೆ.
October 16, 2025 7:39 PM IST