ICC T20 Rank: ಶತಕದ ಬೆನ್ನಲ್ಲೇ ಬ್ಯಾಟಿಂಗ್ ರ್ಯಾಂಕಿಂಗ್​​​ನಲ್ಲಿ ಅದ್ಭುತ ಸಾಧನೆ ಮಾಡಿದ ಸ್ಮೃತಿ ಮಂಧಾನ | Smriti Mandhana Climbs ICC T20I Rankings: India’s Star Batter Makes Her Mark

ICC T20 Rank: ಶತಕದ ಬೆನ್ನಲ್ಲೇ ಬ್ಯಾಟಿಂಗ್ ರ್ಯಾಂಕಿಂಗ್​​​ನಲ್ಲಿ ಅದ್ಭುತ ಸಾಧನೆ ಮಾಡಿದ ಸ್ಮೃತಿ ಮಂಧಾನ | Smriti Mandhana Climbs ICC T20I Rankings: India’s Star Batter Makes Her Mark

Last Updated:

ಮಂಧಾನ ಮತ್ತು ಎರಡನೇ ಸ್ಥಾನದಲ್ಲಿರುವ ಹೇಲಿ ಮ್ಯಾಥ್ಯೂಸ್ (774) ನಡುವೆ ಕೇವಲ ಮೂರು ರೇಟಿಂಗ್ ಅಂಕಗಳ ಅಂತರವಿದೆ. ಈಗಾಗಲೇ ಏಕದಿನ ಕ್ರಿಕೆಟ್‌ನಲ್ಲಿ ಅಗ್ರ ಶ್ರೇಯಾಂಕದ ಬ್ಯಾಟರ್ ಆಗಿರುವ ಮಂಧಾನ, ಇಂಗ್ಲೆಂಡ್ ಸರಣಿಯುದ್ದಕ್ಕೂ ತನ್ನ ಫಾರ್ಮ್ ಅನ್ನು ಮುಂದುವರಿಸಿದರೆ ಟಿ20 ಕ್ರಿಕೆಟ್‌ನಲ್ಲಿ ನಂಬರ್ ಒನ್ ಸ್ಥಾನವನ್ನು ತಲುಪಲಿದ್ದಾರೆ.

ಸ್ಮೃತಿ ಮಂಧಾನಸ್ಮೃತಿ ಮಂಧಾನ
ಸ್ಮೃತಿ ಮಂಧಾನ

ಮಂಗಳವಾರ ಐಸಿಸಿ ಮಹಿಳಾ ಟಿ20 (ICC women T20) ಶ್ರೇಯಾಂಕ ಬಿಡುಗಡೆಯಾಗಿದ್ದು, ಟೀಮ್ ಇಂಡಿಯಾದ ಹಂಗಾಮಿ ನಾಯಕಿ ಸ್ಮೃತಿ ಮಂಧಾನ (Smriti Mandhana) ಭಾರೀ ಏರಿಕೆ ಕಂಡಿದ್ದಾರೆ. ಎರಡು ದಿನಗಳ ಹಿಂದೆ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ದಾಖಲೆಯ ಶತಕ ಬಾರಿಸಿದ್ದ ಮಂಧಾನ, ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ ಪಾಯಿಂಟ್‌ಗಳನ್ನು (771) ಗಳಿಸಿದ್ದಲ್ಲದೆ, ಒಂದು ಸ್ಥಾನ ಮೇಲೇರಿ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಇದು ಮಂಧಾನ ಅವರ ವೃತ್ತಿಜೀವನದ ಅತ್ಯುತ್ತಮ ಟಿ20 ಶ್ರೇಯಾಂಕವಾಗಿದೆ. ಪ್ರಸ್ತುತ, ಮಂಧಾನ ಮತ್ತು ಅಗ್ರ ಶ್ರೇಯಾಂಕಿತೆ ಬೆತ್ ಮೂನಿ (794) ನಡುವೆ ಕೇವಲ 23 ಅಂಕಗಳ ಅಂತರವಿದೆ.

ನಂಬರ್ 1 ಸ್ಥಾನಗಳಿಸುವ ಸಾಧ್ಯತೆ

ಮಂಧಾನ ಮತ್ತು ಎರಡನೇ ಸ್ಥಾನದಲ್ಲಿರುವ ಹೇಲಿ ಮ್ಯಾಥ್ಯೂಸ್ (774) ನಡುವೆ ಕೇವಲ ಮೂರು ರೇಟಿಂಗ್ ಅಂಕಗಳ ಅಂತರವಿದೆ. ಈಗಾಗಲೇ ಏಕದಿನ ಕ್ರಿಕೆಟ್‌ನಲ್ಲಿ ಅಗ್ರ ಶ್ರೇಯಾಂಕದ ಬ್ಯಾಟರ್ ಆಗಿರುವ ಮಂಧಾನ, ಇಂಗ್ಲೆಂಡ್ ಸರಣಿಯುದ್ದಕ್ಕೂ ತನ್ನ ಫಾರ್ಮ್ ಅನ್ನು ಮುಂದುವರಿಸಿದರೆ ಟಿ20 ಕ್ರಿಕೆಟ್‌ನಲ್ಲಿ ನಂಬರ್ ಒನ್ ಸ್ಥಾನವನ್ನು ತಲುಪಲಿದ್ದಾರೆ.

ಟಾಪ್ 10ರಲ್ಲಿರುವ ಏಕೈಕ ಆಟಗಾರ್ತಿ

ಮಂಧಾನ ಹೊರತುಪಡಿಸಿ, ಟಾಪ್ -10 ಟಿ20 ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಬೇರೆ ಯಾವುದೇ ಬ್ಯಾಟರ್​ ಇಲ್ಲ. ಟೀಮ್ ಇಂಡಿಯಾದ ನಿಯಮಿತ ನಾಯಕಿ ಹರ್ಮನ್‌ಪ್ರೀತ್ ಮತ್ತು ಶಫಾಲಿ ವರ್ಮಾ 12 ಮತ್ತು 13 ನೇ ಸ್ಥಾನದಲ್ಲಿದ್ದರೆ, ಜೆಮಿಮಾ ರೊಡ್ರಿಗಸ್ 15ನೇ ಸ್ಥಾನದಲ್ಲಿದ್ದಾರೆ. ರಿಚಾ ಘೋಷ್ 25ನೇ ಸ್ಥಾನದಲ್ಲಿದ್ದಾರೆ ಮತ್ತು ದೀಪ್ತಿ ಶರ್ಮಾ 31 ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅಬ್ಬರದ ಇನ್ನಿಂಗ್ಸ್ (43) ಆಡಿದ ನಂತರ ಹರ್ಲೀನ್ ಡಿಯೋಲ್ ಟಿ20 ಶ್ರೇಯಾಂಕದಲ್ಲಿ ಮತ್ತೆ ಸ್ಥಾನ ಪಡೆದಿದ್ದು, ಅವರು 86ನೇ ಸ್ಥಾನದಲ್ಲಿದ್ದಾರೆ.

ಮೊದಲ ಪಂದ್ಯದಲ್ಲಿ ಭರ್ಜರಿ ಜಯ

ಜೂನ್ 28 ರಂದು ನಾಟಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಭಾರತ 97 ರನ್‌ಗಳ ಭರ್ಜರಿ ಅಂತರದಿಂದ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಮಂಧಾನ 62 ಎಸೆತಗಳಲ್ಲಿ 15 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 112 ರನ್ ಗಳಿಸಿದರು. ಇದು ಮಂಧಾನ ಅವರ ಟಿ20 ಕ್ರಿಕೆಟ್‌ನ ಮೊದಲ ಶತಕವಾಗಿದೆ.

ಈ ಶತಕದೊಂದಿಗೆ, ಅವರು ಮೂರು ಸ್ವರೂಪಗಳಲ್ಲಿ ಶತಕಗಳಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟಿಗ ಎಂಬ ದಾಖಲೆಯನ್ನು ಸ್ಥಾಪಿಸಿದ್ದರು. ಮಂಧಾನ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 14 ಶತಕಗಳನ್ನು ಸಿಡಿಸಿದ್ದಾರೆ, ಇದರಲ್ಲಿ ಟೆಸ್ಟ್‌ನಲ್ಲಿ 2, ಏಕದಿನದಲ್ಲಿ 11 ಮತ್ತು ಟಿ20ಐಗಳಲ್ಲಿ ಒಂದು ಶತಕ ಸೇರಿವೆ. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್​​​ನಲ್ಲಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಈ ಇನ್ನಿಂಗ್ಸ್‌ನಲ್ಲಿ ಮಂಧಾನ ಗಳಿಸಿದ ಸ್ಕೋರ್, ಟಿ20ಐಗಳಲ್ಲಿ ಟೀಮ್ ಇಂಡಿಯಾ ಪರ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ (112) ಆಗಿ ದಾಖಲಾಗಿದೆ. ಇದಕ್ಕೂ ಮೊದಲು ಈ ದಾಖಲೆ ಹರ್ಮನ್ ಪ್ರೀತ್ (103) ಹೆಸರಿನಲ್ಲಿತ್ತು.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟಿ20 ಪಂದ್ಯ ಇಂದು (ಜುಲೈ 1) ನಡೆಯಲಿದೆ. ಈ ಪಂದ್ಯ ಬ್ರಿಸ್ಟಲ್‌ನಲ್ಲಿ ನಡೆಯಲಿದೆ. ಈ ಪಂದ್ಯ ಭಾರತೀಯ ಕಾಲಮಾನ ರಾತ್ರಿ 11 ಗಂಟೆಗೆ ಆರಂಭವಾಗಲಿದೆ.