Last Updated:
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಭಾರತೀಯ ವೇಗದ ಬೌಲರ್ ರೋಮಾಂಚನ ಪ್ರದರ್ಶನ ನೀಡಿದರು. ವಿಶೇಷವಾಗಿ ಓವಲ್ ಟೆಸ್ಟ್‌ನಲ್ಲಿ, ಸಿರಾಜ್ ಟೀಮ್ ಇಂಡಿಯಾದ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮ ಟೆಸ್ಟ್‌ನಲ್ಲಿ, ಸಿರಾಜ್ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿ ಭಾರತಕ್ಕೆ ಮರೆಯಲಾಗದ ಗೆಲುವು ತಂದುಕೊಟ್ಟರು. ಒಟ್ಟಾರೆಯಾಗಿ, ಈ ಸರಣಿಯಲ್ಲಿ ಸಿರಾಜ್ 23 ವಿಕೆಟ್‌ಗಳನ್ನು ಕಬಳಿಸಿದ್ದು, ಇದರಲ್ಲಿ ಎರಡು ಐದು ವಿಕೆಟ್ ಗೊಂಚಲುಗಳು ಸೇರಿವೆ.
ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ (Anderson-Tendulkar Trophy) ಅದ್ಭುತ ಪ್ರದರ್ಶನ ನೀಡಿದ ಟೀಮ್ ಇಂಡಿಯಾದ ಸ್ಟಾರ್ ಪೇಸರ್ ಮೊಹಮ್ಮದ್ ಸಿರಾಜ್ (Mohammed Siraj) ಈಗ ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ (Bowling Ranking) ತಮ್ಮ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವನ್ನು ಸಾಧಿಸಿದ್ದಾರೆ. ಸಿರಾಜ್ 674 ರೇಟಿಂಗ್ ಅಂಕಗಳೊಂದಿಗೆ 12 ಸ್ಥಾನಗಳ ಜಿಗಿತವನ್ನು ಸಾಧಿಸಿದ್ದಾರೆ. ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಹೈದರಾಬಾದಿನ ಈ ಸ್ಟಾರ್ ಬೌಲರ್ ಮೊದಲ ಬಾರಿಗೆ ಅಗ್ರ 15 ರಲ್ಲಿ ಸ್ಥಾನ ಪಡೆದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಭಾರತೀಯ ವೇಗದ ಬೌಲರ್ ರೋಮಾಂಚನ ಪ್ರದರ್ಶನ ನೀಡಿದರು. ವಿಶೇಷವಾಗಿ ಓವಲ್ ಟೆಸ್ಟ್‌ನಲ್ಲಿ, ಸಿರಾಜ್ ಟೀಮ್ ಇಂಡಿಯಾದ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮ ಟೆಸ್ಟ್‌ನಲ್ಲಿ, ಸಿರಾಜ್ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿ ಭಾರತಕ್ಕೆ ಮರೆಯಲಾಗದ ಗೆಲುವು ತಂದುಕೊಟ್ಟರು. ಒಟ್ಟಾರೆಯಾಗಿ, ಈ ಸರಣಿಯಲ್ಲಿ ಸಿರಾಜ್ 23 ವಿಕೆಟ್‌ಗಳನ್ನು ಕಬಳಿಸಿದ್ದು, ಇದರಲ್ಲಿ ಎರಡು ಐದು ವಿಕೆಟ್ ಗೊಂಚಲುಗಳು ಸೇರಿವೆ.
ಓವಲ್ ಟೆಸ್ಟ್‌ನಲ್ಲಿ ಸಿರಾಜ್ ಜೊತೆಗೆ ಪಂದ್ಯ ಗೆಲ್ಲುವ ಪ್ರದರ್ಶನ ನೀಡಿದ ಫಾರ್ಸಿ ಕೃಷ್ಣ ಕೂಡ ತಮ್ಮ ಶ್ರೇಯಾಂಕವನ್ನು ಸುಧಾರಿಸಿಕೊಂಡಿದ್ದಾರೆ. ಪ್ರಸಿದ್ಧ್ 25 ಸ್ಥಾನಗಳ ಜಿಗಿತದೊಂದಿಗೆ 59 ನೇ ಸ್ಥಾನಕ್ಕೆ ತಲುಪಿದ್ದಾರೆ. ಪ್ರಸಿದ್ಧ್ ಐದನೇ ಟೆಸ್ಟ್‌ನಲ್ಲಿ ಒಟ್ಟು ಎಂಟು ವಿಕೆಟ್‌ಗಳನ್ನು ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಪ್ರಕ್ರಿಯೆಯಲ್ಲಿ ಕೃಷ್ಣ ತಮ್ಮ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವನ್ನು ಸಾಧಿಸಿದ್ದಾರೆ. ಇನ್ನೂ ಬೌಲರ್‌ಗಳ ಶ್ರೇಯಾಂಕದಲ್ಲಿ, ಟೀಮ್ ಇಂಡಿಯಾದ ವೇಗಿ ಜಸ್ಪ್ರಿತ್ ಬುಮ್ರಾ (889) ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಕಗಿಸೊ ರಬಾಡ ಎರಡನೇ ಸ್ಥಾನದಲ್ಲಿದ್ದಾರೆ.
ಕ್ಯಾಪ್ಟನ್ ಪ್ಯಾಟ್ ಕಮಿನ್ಸ್, ಮ್ಯಾಟ್ ಹೆನ್ರಿ, ಜೋಶ್ ಹ್ಯಾಜಲ್ವುಡ್, ನೊಮನ್ ಅಲಿ, ಸ್ಕಾಟ್ ಬೋಲ್ಯಾಂಡ್, ನೇಥನ್ ಲಿಯಾನ್, ಮಾರ್ಕೊ ಜಾನ್ಸನ್ ಹಾಗೂ ಮಿಚೆಲ್ ಸ್ಟಾರ್ಕ್ ಟಾಪ್ 10ರಲ್ಲಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಓಪನರ್ ಯಶಸ್ವಿ ಜೈಸ್ವಾಲ್ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಅಗ್ರ 5ಕ್ಕೆ ಮರಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನಲ್ಲಿ ಜೈಸ್ವಾಲ್ ಅದ್ಭುತ ಶತಕದೊಂದಿಗೆ ಮಿಂಚಿದರು. ಅದೇ ರೀತಿ, ಈ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ವಿಫಲರಾದ ಶುಭ್ಮನ್ ಗಿಲ್ ನಾಲ್ಕು ಸ್ಥಾನಗಳನ್ನು ಕುಸಿದು 13ನೇ ಸ್ಥಾನಕ್ಕೆ ತಲುಪಿದ್ದಾರೆ.
ಆಲ್ರೌಂಡರ್ ಶ್ರೇಯಾಂಕದಲ್ಲಿ ಭಾರತದ ರವೀಂದ್ರ ಜಡೇಜಾ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಜಡೇಜಾ (405) 2ನೇ ಸ್ಥಾನದಲ್ಲಿರುವ ಬಾಂಗ್ಲಾದೇಶದ ಮೆಹೆದಿ ಹಸನ್ ಮಿರಾಜ್ಗಿಂತ (305) ಬರೋಬ್ಬರಿ 100 ಅಂಕ ಮುಂದಿದ್ದಾರೆ.
August 06, 2025 4:16 PM IST
ICC Test Ranking: ಭಾರತಕ್ಕೆ ರೋಚಕ ಜಯ ತಂದುಕೊಟ್ಟಿದ್ದ ಪ್ರಸಿದ್ಧ್-ಸಿರಾಜ್ ಶ್ರೇಯಾಂಕದಲ್ಲಿ ಭಾರೀ ಏರಿಕೆ! ವೃತ್ತಿಜೀವನದಲ್ಲೇ ಶ್ರೇಷ್ಠ ಸಾಧನೆ