Last Updated:
ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ 2025 ರ ಫೈನಲ್ ಪಂದ್ಯದಲ್ಲಿ ಹ್ಯಾರಿಸ್ ರೌಫ್ ಅವರನ್ನು ಔಟ್ ಮಾಡಿದ ನಂತರ ಜಸ್ಪ್ರೀತ್ ಬುಮ್ರಾ ವಿಶಿಷ್ಟ ಸಂಭ್ರಮಾಚರಣೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Asia Cup 2025: ಏಷ್ಯಾ ಕಪ್ 2025 ರ ಫೈನಲ್‌ನಲ್ಲಿ (Asia Cup Final) ಪಾಕಿಸ್ತಾನ ತಂಡವು ಸೋಲಿನ ಭೀತಿಯಲ್ಲಿ ಸಿಲುಕಿದೆ. ಪ್ರತಿ ಚೆಂಡು ಕೂಡ ಪಂದ್ಯದ ರೋಚಕತೆಯನ್ನು ಹುಟ್ಟು ಹಾಕುತ್ತಿದೆ. ಮೈದಾನವೂ ಬಿಸಿಯಾದ ವಾತಾವರಣಕ್ಕೂ ಸುದ್ದಿಯಾಗುತ್ತಿದೆ. ಈ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರನ್ನು ಔಟ್ ಮಾಡಿದ ನಂತರ ಭಾರತದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಅವರ ವಿಶಿಷ್ಟ ಸಂಭ್ರಮಾಚರಣೆ ಎಲ್ಲರ ಗಮನ ಸೆಳೆದಿದೆ.
ಹ್ಯಾರಿಸ್ ರೌಫ್ ವಿಕೆಟ್ ಪಡೆದ ನಂತರ ಜಸ್ಪ್ರೀತ್ ಬುಮ್ರಾ ಮಾಡಿದ ಸಂಭ್ರಮಾಚರಣೆ ಟೀಮ್ ಇಂಡಿಯಾ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಪಾಕಿಸ್ತಾನ ತಂಡದ ಇನ್ನಿಂಗ್ಸ್ನ 18ನೇ ಓವರ್ನಲ್ಲಿ ಹ್ಯಾರಿಸ್ ರೌಫ್ ಅವರನ್ನು ಬುಮ್ರಾ ಕ್ಲೀನ್ ಬೌಲ್ಡ್ ಮಾಡಿದರು. ಈ ವೇಳೆ ಬುಮ್ರಾ ಫೈಟರ್ ಜೆಟ್ ಹೊಡೆದುರುಳಸಿದಂತೆ ಸನ್ನೆ ಮಾಡಿ ಸಂಭ್ರಮಿಸಿದರು.
ಏಷ್ಯಾಕಪ್ ಸೂಪರ್ 4 ರ ಪಂದ್ಯದ ವೇಳೆ ಹ್ಯಾರಿಸ್ ರೌಫ್ ಕೂಡ ಬೌಂಡರಿ ಲೈನ್‌ನಲ್ಲಿ ನಿಂತು ಇದೇ ರೀತಿಯ ಸನ್ನೆ ಮಾಡಿದ್ದರು. ಇದಾದ ನಂತರ ರೌಫ್ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ, ಐಸಿಸಿ ಕೂಡ ದಂಡ ವಿಧಿಸಿತ್ತು. ಈಗ ರೌಫ್ಗೆ ಕೌಂಟರ್ ಕೊಡುವ ರೀತಿಯಲ್ಲಿ ಬುಮ್ರಾ ಕೂಡ ಫೈಟರ್ ಜೆಟ್ ಹೊಡೆದುರುಳಿಸಿದಂತೆ ಸನ್ನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
September 28, 2025 11:24 PM IST