Last Updated:
ಇಂದು (ಸೆಪ್ಟೆಂಬರ್ 24) ಬ್ರಿಸ್ಬೇನ್‌ನಲ್ಲಿ ನಡೆದ ಪಂದ್ಯದಲ್ಲಿ, ಮೊದಲು ಬ್ಯಾಟ್ ಮಾಡಿದ ಭಾರತ 49.4 ಓವರ್‌ಗಳಲ್ಲಿ 300 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಆಸೀಸ್ ತಂಡ 249 ರನ್ಗಳಿಸಲಷ್ಟೇ ಶಕ್ತವಾಯಿತು.
ಬಹು ಸ್ವರೂಪದ ಸರಣಿಗಾಗಿ (3 ODIಗಳು, 2 ಟೆಸ್ಟ್‌ಗಳು) ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಭಾರತೀಯ U-19 ತಂಡವು ತನ್ನ ಗೆಲುವಿನ ಓಟವನ್ನ ಮುಂದುವರಿಸುತ್ತಿದೆ. ಮೊದಲ ಪಂದ್ಯವನ್ನ 6 ವಿಕೆಟ್‌ಗಳಿಂದ ಗೆದ್ದಿದ್ದ ಭಾರತ ಕಿರಿಯರ ತಂಡ ಇದೀಗ ಎರಡನೇ ಪಂದ್ಯವನ್ನು 51 ರನ್‌ಗಳಿಂದ ಗೆದ್ದು ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿತು.
ಇಂದು (ಸೆಪ್ಟೆಂಬರ್ 24) ಬ್ರಿಸ್ಬೇನ್‌ನಲ್ಲಿ ನಡೆದ ಪಂದ್ಯದಲ್ಲಿ, ಮೊದಲು ಬ್ಯಾಟ್ ಮಾಡಿದ ಭಾರತ 49.4 ಓವರ್‌ಗಳಲ್ಲಿ 300 ರನ್‌ಗಳಿಗೆ ಆಲೌಟ್ ಆಯಿತು. ವೈಭವ್ ಸೂರ್ಯವಂಶಿ (68 ಎಸೆತಗಳಲ್ಲಿ 70; 5 ಬೌಂಡರಿಗಳು, 6 ಸಿಕ್ಸರ್‌ಗಳು) ತಮ್ಮ ವಿದ್ವಂಸಕ ಬ್ಯಾಟಿಂಗ್ ಪ್ರದರ್ಶವನ್ನ ಮುಂದುವರಿಸಿ ಸರಣಿಯನ್ನು ವಶಪಡಿಸಿಕೊಂಡಿತು. ವಿಹಾನ್ ಮಲ್ಹೋತ್ರಾ (70ರನ್, 74 ಎಸೆತಗ, 7 ಬೌಂಡರಿ, 1 ಸಿಕ್ಸರ್) ಮತ್ತು ಅಭಿಗ್ಯಾನ್ ಕುಂಡು (71; 64 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳೊಂದಿಗೆ ಮಿಂಚಿದರು. ನಾಯಕ ಆಯುಷ್ ಮ್ಹಾತ್ರೆ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು.
301 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಯುವ ಆಸ್ಟ್ರೇಲಿಯಾ ತಂಡವು ಭಾರತೀಯ ಬೌಲರ್‌ಗಳ ದಾಳಿಗೆ 47.2 ಓವರ್‌ಗಳಲ್ಲಿ 249 ರನ್‌ಗಳಿಗೆ ಆಲೌಟ್ ಆಯಿತು. ಜೇಡೆನ್ ಡ್ರೇಪರ್ 72 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್ಗಳ ಸಹಿತ 107 ರನ್‌ಗಳ ಮಿಂಚಿನ ಶತಕದ ಹೊರತಾಗಿಯೂ ಆಸೀಸ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಡ್ರೇಪರ್ ತಂಡದಲ್ಲಿ ಬೇರೆ ಆಟಗಾರರ ಸಾಥ್ ಸಿಗಲಿಲ್ಲ. ಆರ್ಯನ್ ಜೆ ಶರ್ಮಾ 38 ರನ್ಗಳಿಸಿ 2ನೇ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಬ್ಯಾಟಿಂಗ್‌ನಲ್ಲಿ ವಿಫಲರಾದ ಭಾರತದ ನಾಯಕ ಆಯುಷ್ ಮಾತ್ರೆ, ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಕೇವಲ 4 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಪಡೆದು ಆಸೀಸ್ ತಂಡವನ್ನು ಆಲೌಟ್ ಆಗುವಂತೆ ಮಾಡಿದರು. ಕನಿಷ್ಕ್ ಚೌಹಾಣ್ 2 ವಿಕೆಟ್, ಕಿಶನ್ ಕುಮಾರ್, ಅಂಬ್ರೀಶ್, ಖಿಲನ್ ಪಟೇಲ್ ಮತ್ತು ವಿಹಾನ್ ಮಲ್ಹೋತ್ರಾ ತಲಾ ಒಂದು ವಿಕೆಟ್ ಪಡೆದರು.
ಈ ಸರಣಿಯ ಮೊದಲ ಪಂದ್ಯವನ್ನು ಭಾರತ 7 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ 225 ರನ್ ಗಳಿಸಿತು. ಭಾರತ ಸುಲಭವಾಗಿ ಗುರಿಯ ಬೆನ್ನುನ್ನಟ್ಟಿತು. ವೇದಾಂತ್ ತ್ರಿವೇದಿ (ಅಜೇಯ 61) ಮತ್ತು ಅಭಿಗ್ಯಾನ್ ಕುಂಡು (ಅಜೇಯ 87) ಅರ್ಧಶತಕಗಳನ್ನು ಗಳಿಸಿದರು. ಆ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 22 ಎಸೆತಗಳಲ್ಲಿ 38 ರನ್ಗಳಿಸಿ ಕೂಡ ಉತ್ತಮ ಪ್ರದರ್ಶನ ನೀಡಿದ್ದರು.
ಈ ಸರಣಿಯ ಔಪಚಾರಿಕ ಮೂರನೇ ಏಕದಿನ ಪಂದ್ಯ ಸೆಪ್ಟೆಂಬರ್ 26 ರಂದು ನಡೆಯಲಿದೆ. ಇದರ ನಂತರ ಸೆಪ್ಟೆಂಬರ್ 30 ರಿಂದ 3ರವರೆಗೆ ಮೊದಲ ಟೆಸ್ಟ್, ಅಕ್ಟೋಬರ್ 7ರಿಂದ 10ರವರೆಗೆ 2ನೇ ಟೆಸ್ಟ್ ನಡೆಯಲಿದೆ.
September 24, 2025 8:51 PM IST