IND U19 vs ENG U19: ವೈಭವ್​ ವಿಶ್ವದಾಖಲೆ, ವಿಹಾನ್ ಶತಕದಬ್ಬರಕ್ಕೆ ಇಂಗ್ಲೆಂಡ್ ಧೂಳೀಪಟ! ಬೃಹತ್ ಮೊತ್ತ ದಾಖಲಿಸಿದ ಯಂಗ್ ಇಂಡಿಯಾ | vaibhav suryavanshi and vihaan malhotra century power india u19 set 364 target to england u19

IND U19 vs ENG U19: ವೈಭವ್​ ವಿಶ್ವದಾಖಲೆ, ವಿಹಾನ್ ಶತಕದಬ್ಬರಕ್ಕೆ ಇಂಗ್ಲೆಂಡ್ ಧೂಳೀಪಟ! ಬೃಹತ್ ಮೊತ್ತ ದಾಖಲಿಸಿದ ಯಂಗ್ ಇಂಡಿಯಾ | vaibhav suryavanshi and vihaan malhotra century power india u19 set 364 target to england u19

Last Updated:

ಯುವ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಮತ್ತೊಮ್ಮೆ ಇಂಗ್ಲೆಂಡ್ ನೆಲದಲ್ಲಿ ವೀರೋಚಿತ ಬ್ಯಾಟಿಂಗ್ ಪ್ರದರ್ಶಿಸಿದರು, ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ನಂತರ ಕೇವಲ 52 ಎಸೆತಗಳಲ್ಲಿ ಶತಕ ಪೂರೈಸಿದರು.

ವಿಹಾನ್ ಮೆಲ್ಹೋತ್ರ ಮತ್ತು ವೈಭವ್ ಸೂರ್ಯವಂಶಿವಿಹಾನ್ ಮೆಲ್ಹೋತ್ರ ಮತ್ತು ವೈಭವ್ ಸೂರ್ಯವಂಶಿ
ವಿಹಾನ್ ಮೆಲ್ಹೋತ್ರ ಮತ್ತು ವೈಭವ್ ಸೂರ್ಯವಂಶಿ

ಭಾರತ ಅಂಡರ್ 19 ತಂಡವು (India U19) ಇಂಗ್ಲಿಷ್ ನೆಲದಲ್ಲಿ ತನ್ನ ಪ್ರಾಬಲ್ಯಯುವ ಪ್ರದರ್ಶನ ತೋರಿದೆ. ಆತಿಥೇಯ ಅಂಡರ್-19 ತಂಡದ ವಿರುದ್ಧದ ಐದು ಪಂದ್ಯಗಳ ಯೂತ್ ಏಕದಿನ ಸರಣಿಯಲ್ಲಿ (Youth ODI) ಈಗಾಗಲೇ 2-1 ಮುನ್ನಡೆಯಲ್ಲಿರುವ ಭಾರತ, ನಾಲ್ಕನೇ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ 363ರನ್​ಗಳ ಬೃಹತ್ ಸ್ಕೋರ್ ಗಳಿಸಿತು. ಶನಿವಾರ ವೋರ್ಸೆಸ್ಟರ್‌ನಲ್ಲಿ ನಡೆದ ಯೂತ್ ಏಕದಿನ ಪಂದ್ಯದಲ್ಲಿ ಟಾಸ್ ಸೋತ ಭಾರತೀಯ ಅಂಡರ್ -19 ತಂಡ ಮೊದಲು ಬ್ಯಾಟಿಂಗ್ ಮಾಡಿತು. ಆದರೆ, ಭಾರತ ತಂಡ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ಆರಂಭಿಕ ಆಟಗಾರ ಆಯುಷ್ ಕೇವಲ 14 ಎಸೆತಗಳನ್ನು ಎದುರಿಸಿ ಕೇವಲ ಐದು ರನ್ ಗಳಿಸಿ ಔಟಾದರು.

ಯೂತ್ ಏಕದಿನದಲ್ಲಿ ವೇಗದ ಶತಕ

ಇಂಗ್ಲೆಂಡ್ ತಂಡ ಆರಂಭದಲ್ಲೇ ಆಯುಷ್ ಮ್ಹಾತ್ರೆ ವಿಕೆಟ್ ಮೂಲಕ ಮೊದಲ ವಿಕೆಟ್ ಪಡೆದಿದ್ದಕ್ಕಾಗಿ ಸಂಭ್ರಮಿಸಿತ್ತು. ಭಾರತದ ಯುವ ವೇಗಿ ವೈಭವ್ ಸೂರ್ಯವಂಶಿ ಆ ಸಂತೋಷವನ್ನು ಶೀಘ್ರದಲ್ಲೇ ಹಾಳು ಮಾಡಿದರು. ಈ ಆರಂಭಿಕ ಬ್ಯಾಟ್ಸ್‌ಮನ್ ಮತ್ತೊಮ್ಮೆ ವೀರೋಚಿತ ಬ್ಯಾಟಿಂಗ್ ಪ್ರದರ್ಶಿಸಿದರು, ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ನಂತರ ಕೇವಲ 52 ಎಸೆತಗಳಲ್ಲಿ ಶತಕ ಪೂರೈಸಿದರು. ಅಮೋಘ ಫಾರ್ಮ್​​ನಲ್ಲಿರುವ ಈ ಹದಿನಾಲ್ಕು ವರ್ಷದ ಯುವ ಆಟಗಾರ ಅವರು ಯೂತ್ ಏಕದಿನ ಪಂದ್ಯಗಳಲ್ಲಿ ಅತ್ಯಂತ ವೇಗದ ಶತಕವನ್ನು ದಾಖಲಿಸಿದ ವಿಶ್ವದಾಖಲೆಯನ್ನ ಸ್ಥಾಪಿಸಿದರು. ಈ ಪಂದ್ಯದಲ್ಲಿ ವೈಭವ್ ಒಟ್ಟು 78 ಎಸೆತಗಳನ್ನು ಎದುರಿಸಿ 143 ರನ್ ಗಳಿಸಿದರು. ಅವರ ಇನ್ನಿಂಗ್ಸ್​​ನಲ್ಲಿ 13 ಬೌಂಡರಿ ಮತ್ತು 10 ಭರ್ಜರಿ ಸಿಕ್ಸರ್ ಗಳು ಸೇರಿದ್ದವು ಎಂಬುದು ಗಮನಾರ್ಹ.

ಮೆಲ್ಹೋತ್ರ ಶತಕ

ಸತತ ನಾಲ್ಕನೇ ಪಂದ್ಯದಲ್ಲಿ ವೈಭವ್ ಸುನಾಮಿ ಇನ್ನಿಂಗ್ಸ್ ಮೂಲಕ ಮಿಂಚಿದರೆ, ಒನ್ ಡೌನ್ ಬ್ಯಾಟರ್ ವಿಹಾನ್ ಮಲ್ಹೋತ್ರಾ ಕೂಡ ಶತಕ ಬಾರಿಸಿ ಗಮನ ಸೆಳೆದರು. ವಿಹಾನ್ 121 ಎಸೆತಗಳಲ್ಲಿ 15 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 129 ರನ್ ಗಳಿಸಿದರು. ಆದರೆ, ಇಬ್ಬರೂ ಔಟಾದ ನಂತರ, ಭಾರತದ ಇನ್ನಿಂಗ್ಸ್ ನಿಧಾನವಾಯಿತು.

ಮಧ್ಯಮ ಕ್ರಮಾಂಕ ಸಂಪೂರ್ಣ ವಿಫಲ

ಇತರರಲ್ಲಿ, ನಾಯಕ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಅಭಿಗ್ಯಾನ್ ಕುಂಡು 23 ರನ್‌, ರಾಹುಲ್ ಕುಮಾರ್ (0), ಹರ್ವಂಶ್ ಪಂಗಲಿಯಾ (0), ಮತ್ತು ಕನಿಷ್ಕ್ ಚೌಹಾಣ್ (2) ಸಂಪೂರ್ಣವಾಗಿ ವಿಫಲರಾದರು. ಬಾಲಂಗೋಚಿಗಳಾದ ಆರ್.ಎಸ್. ಅಂಬರೀಶ್ (9) ಮತ್ತು ದೀಪೇಶ್ ದೇವೇಂದ್ರನ್ (3), ಯುಧಾಜಿತ್ ಗುಹಾ 15 ಮತ್ತು ನಮನ್ ಪುಷ್ಪಕ್ ಎರಡು ರನ್ ಗಳಿಸಿ ಕೊನೆಯವರೆಗೂ ಅಜೇಯರಾಗಿ ಉಳಿದರು.

ಪರಿಣಾಮವಾಗಿ, ಭಾರತ ತಂಡವು ನಿಗದಿತ 50 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳ ನಷ್ಟಕ್ಕೆ 363 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಇಂಗ್ಲೆಂಡ್ ಅಂಡರ್-19 ಬೌಲರ್‌ಗಳಲ್ಲಿ, ಜ್ಯಾಕ್ ಹೋಮ್ ನಾಲ್ಕು ವಿಕೆಟ್‌ಗಳೊಂದಿಗೆ ಟಾಪ್ ಬೌಲರ್​ ಎನಿಸಿಕೊಂಡರು. ಸೆಬಾಸ್ಟಿಯನ್ ಮಾರ್ಗನ್ ಮೂರು ವಿಕೆಟ್‌ಗಳನ್ನು ಪಡೆದರು. ಇತರರಲ್ಲಿ, ಬೆನ್ ಮೇಸ್ ಮತ್ತು ಜೇಮ್ಸ್ ಮಿಂಟೊ ತಲಾ ಒಂದು ವಿಕೆಟ್ ಪಡೆದರು.

ಸರಣಿ ಗೆಲ್ಲುವ ಅವಕಾಶ

ಭಾರತ ಮೊದಲ ಯೂತ್ ಏಕದಿನ ಪಂದ್ಯವನ್ನು ಆರು ವಿಕೆಟ್‌ಗಳಿಂದ ಗೆದ್ದರೆ, ಇಂಗ್ಲೆಂಡ್ ಎರಡನೇ ಪಂದ್ಯವನ್ನು ಒಂದು ವಿಕೆಟ್‌ನಿಂದ ಗೆದ್ದಿತು. ಸರಣಿಯ ಭಾರತ ಮೂರನೇ ಏಕದಿನ ಪಂದ್ಯವನ್ನು ನಾಲ್ಕು ವಿಕೆಟ್‌ಗಳಿಂದ ಗೆದ್ದು ಸರಣಿಯಲ್ಲಿ 2-1 ಮುನ್ನಡೆಯಲ್ಲಿದೆ. ನಿರ್ಣಾಯಕ ನಾಲ್ಕನೇ ಪಂದ್ಯವನ್ನು ಗೆದ್ದು, ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿಯನ್ನು ವಶಪಡಿಸಿಕೊಳ್ಳುವ ದೃಢಸಂಕಲ್ಪದಲ್ಲಿದೆ.