IND vs AFG Asia Cup: ಕುಲದೀಪ್, ದುಬೆ ದಾಳಿಗೆ ಧೂಳೀಪಟವಾದ ಯುಎಇ! ಕೇವಲ 57ಕ್ಕೆ ಸರ್ವಪತನ | Kuldeep Yadav Shines as India Dominates UAE in Asia Cup 2025 | ಕ್ರೀಡೆ

IND vs AFG Asia Cup: ಕುಲದೀಪ್, ದುಬೆ ದಾಳಿಗೆ ಧೂಳೀಪಟವಾದ ಯುಎಇ! ಕೇವಲ 57ಕ್ಕೆ ಸರ್ವಪತನ | Kuldeep Yadav Shines as India Dominates UAE in Asia Cup 2025 | ಕ್ರೀಡೆ

Last Updated:

ಏಷ್ಯಾಕಪ್​​ 2025ರ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಅತಿಥೇಯ ಯುಎಇ ತಂಡದ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡ ಭಾರತೀಯ ಬೌಲಿಂಗ್ ದಾಳಿಗೆ ಉತ್ತರಿಸಲಾಗದೆ ಕೇವಲ 57 ರನ್​ಗಳಿಗೆ ಆಲೌಟ್ ಆಯಿತು.

ಯುಎಇ vs ಭಾರತಯುಎಇ vs ಭಾರತ
ಯುಎಇ vs ಭಾರತ

ಏಷ್ಯಾಕಪ್​​ 2025ರ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಅತಿಥೇಯ ಯುಎಇ ತಂಡದ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡ ಭಾರತೀಯ ಬೌಲಿಂಗ್ ದಾಳಿಗೆ ಉತ್ತರಿಸಲಾಗದೆ ಕೇವಲ 57 ರನ್​ಗಳಿಗೆ ಆಲೌಟ್ ಆಯಿತು.

ಟಾಸ್​ ಗೆದ್ದ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಮೊದಲ ಎರಡು ಓವರ್​ ಉತ್ತಮವಾಗಿ ಆಡಿದ ಅತಿಥೇಯ ತಂಡ 4ನೇ ಓವರ್​​ ಮೊದಲ ವಿಕೆಟ್ ಕಳೆದುಕೊಂಡಿತು. 17 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 22 ರನ್​ಗಳಿಸಿದ್ದ ಅಲಿಶಾನ್ ಶರಫು ಕ್ಲೀನ್ ಬೌಲ್ಡ್ ಆದರು, ಆ ನಂತರ ಯುಎಇ ಎಲ್ಲೂ ಚೇತರಿಸಿಕೊಳ್ಳಲು ಟೀಮ್ ಇಂಡಿಯಾ ಅವಕಾಶ ಕೊಡಲಿಲ್ಲ. ವರುಣ್ ಚಕ್ರವರ್ತಿ ತಮ್ಮ ಮೊದಲ ಓವರ್​​ನಲ್ಲೇ 2 ರನ್​ಗಳಿಸಿದ್ದ ಮೊಹಮ್ಮದ್ ಜೊಹೈಬ್ ವಿಕೆಟ್ ಪಡೆದರು. ಆ ನಂತರ ಒಂದೇ ಓವರ್​​ನಲ್ಲಿ 3 ವಿಕೆಟ್ ಪಡೆದರು. ರಾಹುಲ್ ಚೊಪ್ರಾ (3) ಶುಭ್​ಮನ್ ಗಿಲ್​ಗೆ ಕ್ಯಾಚ್ ನೀಡಿದರೆ, 3ನೇ ಯುಎಇ ಕ್ಯಾಪ್ಟನ್​ ಮೊಹಮ್ಮದ್ ವಸೀಮ್ (19) 4ನೇ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆದರು ಹಾಗೂ ಕೊನೆಯ ಎಸೆತದಲ್ಲಿ ಹರ್ಷಿತ್ ಕೌಶಿಕ್ ಕ್ಲೀನ್ ಬೌಲ್ಡ್​ ಆದರು.

47ಕ್ಕೆ 2 ವಿಕೆಟ್ ಇದ್ದ ಯುಎಇ 50ಕ್ಕೆ 5 ವಿಕೆಟ್ ಕಳೆದುಕೊಂಡಿತು. ನಂತರ ಬೌಲಿಂಗ್​​ಗಿಳಿದ ಶಿವಂ ದುಬೆ ತಮ್ಮ ಮೊದಲ ಓವರ್​​ನಲ್ಲೇ ಆಸಿಫ್ ಖಾನ್(2) ವಿಕೆಟ್ ಪಡೆದರು. ನಂತರ ಬಂದ ಸಿಮ್ರನ್​ಜಿತ್ ಸಿಂಗ್ ಅಕ್ಷರ್ ಪಟೇಲ್​​ ಬೌಲಿಂಗ್​​ನಲ್ಲಿ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ದರು. 13ನೇ ಓವರ್​​ನಲ್ಲಿ ದುಬೆ 1 ರನ್​ಗಳಿಸಿದ್ದ ಧ್ರುವ್ ಪರಾಶರ್ ಹಾಗೂ ಖಾತೆ ತೆರೆಯದ ಜುನೈದ್ ಸಿದ್ದಿಕ್ ವಿಕೆಟ್ ಪಡೆದರು. 14ನೇ ಓವರ್​ನ ಮೊದಲ ಎಸೆತದಲ್ಲೇ ಕುಲದೀಪ್ ಹೈದರ್ ಅಲಿ ವಿಕೆಟ್ ಪಡೆಯುವ ಮೂಲಕ ಯುಎಇ ತಂಡದ ಇನ್ನಿಂಗ್ಸ್​ಗೆ ಅಂತ್ಯವಾಡಿದರು. 13.1 ಓವರ್​ಗಳಲ್ಲಿ ಯುಎಇ ಕೇವಲ 57 ರನ್​ಗಳಿಸಿತು.

ಭಾರತದ ಪರ ಕುಲದೀಪ್ ಯಾದವ್ 7ರನ್​ಗಳಿಗೆ 4 ವಿಕೆಟ್ ಪಡೆದರೆ, ಶಿವಂ ದುಬೆ 4ಕ್ಕೆ3, ಅಕ್ಷರ್ ಪಟೇಲ್ 13ಕ್ಕೆ1, ಬುಮ್ರಾ 19ಕ್ಕೆ1, ವರುಣ್ ಚಕ್ರವರ್ತಿ 4ಕ್ಕೆ 1 ವಿಕೆಟ್ ಪಡೆದರು.