IND vs AUS: ಆತನಿಂದಲೇ ಟೀಮ್ ಇಂಡಿಯಾಗೆ ಹೀನಾಯ ಸೋಲು! 2ನೇ ಟಿ20 ಪಂದ್ಯದ ಸೋಲಿಗೆ ಕ್ಯಾಪ್ಟನ್ ಸೂರ್ಯಕುಮಾರ್ ಕೊಟ್ಟ ಕಾರಣ ಇಲ್ಲಿದೆ | ಕ್ರೀಡೆ

IND vs AUS: ಆತನಿಂದಲೇ ಟೀಮ್ ಇಂಡಿಯಾಗೆ ಹೀನಾಯ ಸೋಲು! 2ನೇ ಟಿ20 ಪಂದ್ಯದ ಸೋಲಿಗೆ ಕ್ಯಾಪ್ಟನ್ ಸೂರ್ಯಕುಮಾರ್ ಕೊಟ್ಟ ಕಾರಣ ಇಲ್ಲಿದೆ | ಕ್ರೀಡೆ

Last Updated:


ಪಂದ್ಯದ ನಂತರ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, ಟೀಮ್ ಇಂಡಿಯಾದ ಸೋಲಿಗೆ ಯಾವುದೇ ಒಬ್ಬ ಆಟಗಾರ ಕಾರಣನಲ್ಲ. ಆದರೆ ತನ್ನನ್ನೂ ಒಳಗೊಂಡಂತೆ ಅಗ್ರ ನಾಲ್ಕು ಬ್ಯಾಟ್ಸ್‌ಮನ್‌ಗಳು ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದು ನಮ್ಮ ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು ಎಂದು ತಿಳಿಸಿದ್ದಾರೆ.

ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್

ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯಾ (India vs Australia) ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ (Team India) 4 ವಿಕೆಟ್​ಗಳಿಂದ ಸೋಲು ಕಂಡಿದೆ. ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ತಂಡ ಕೇವಲ 125 ರನ್​ಗಳಿಸಲು ಮಾತ್ರ ಸಫಲವಾಯಿತು. 126 ರನ್​ಗಳ ಸಾಧಾರಣ ಗುರಿಯನ್ನ ಆಸ್ಟ್ರೇಲಿಯಾ 13.2 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆಸ್ಟ್ರೇಲಿಯಾ ಕೂಡ ಸತತ ವಿಕೆಟ್ ಕಳೆದುಕೊಂಡಿತಾದರೂ ಅಲ್ಪ ಗುರಿ ಇದ್ದಿದ್ದರಿಂದ ಸುಲಭಬಾಗಿ ಗುರಿ ತಲುಪಿತು. ಪಂದ್ಯದ ನಂತರ ಮಾತನಾಡಿದ ಭಾರತ ನಾಯಕ ಭಾರತದ ಸೋಲಿಗೆ ಆರಂಭಿಕರ ವೈಫಲ್ಯ ಹಾಗೂ ಹಾಗೂ ಆಸೀಸ್ ಅನುಭವಿ ಬೌಲರ್​ ಕಾರಣ ಎಂದು ತಿಳಿಸಿದ್ದಾರೆ.

ಆರಂಭದಲ್ಲೇ ಹೊಡೆತ ನೀಡಿ ಹೇಜಲ್​ವುಡ್

ಪಂದ್ಯದ ನಂತರ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, ಟೀಮ್ ಇಂಡಿಯಾದ ಸೋಲಿಗೆ ಯಾವುದೇ ಒಬ್ಬ ಆಟಗಾರ ಕಾರಣನಲ್ಲ. ಆದರೆ ತನ್ನನ್ನೂ ಒಳಗೊಂಡಂತೆ ಅಗ್ರ ನಾಲ್ಕು ಬ್ಯಾಟ್ಸ್‌ಮನ್‌ಗಳು ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದು ನಮ್ಮ ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು ಎಂದು ತಿಳಿಸಿದ್ದಾರೆ. ಪವರ್‌ಪ್ಲೇನಲ್ಲಿ ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ 3 ವಿಕೆಟ್ ಪಡೆದು ಭಾರತಕ್ಕೆ ದೊಡ್ಡ ಹೊಡೆತ ನೀಡಿದರು. ಇವರ ಮಾರಕ ದಾಳಿಯಿಂದ ಭಾರತ ಪವರ್​ ಪ್ಲೇನಲ್ಲೆ 4 ವಿಕೆಟ್ ಕಳೆದುಕೊಂಡು 32 ರನ್​ಗಳಿಸಿತು. ಇದೇ ಭಾರತದ ಸೋಲಿಗೆ ಪ್ರಮುಖ ಕಾರಣವಾಯಿತು ಎಂದರು.

ಅದ್ಭುತ ಬೌಲಿಂಗ್ ಮಾಡಿದ ಹೇಜಲ್​ವುಡ್

” ಹೇಜಲ್​ವುಡ್ ಅದ್ಭುತವಾಗಿ ಬೌಲಿಂಗ್ ಮಾಡಿದರು. ಪವರ್‌ಪ್ಲೇನಲ್ಲಿ ಅವರು ಬೌಲಿಂಗ್ ಮಾಡಿದ ರೀತಿ ಅತ್ಯುತ್ತಮವಾಗಿತ್ತು. ನೀವು ಆರಂಭದಲ್ಲೇ ನಾಲ್ಕು ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡರೆ, ಮತ್ತೆ ಪಂದ್ಯದಲ್ಲಿ ಕಮ್​ಬ್ಯಾಕ್ ಮಾಡುವುದು ತುಂಬಾ ಕಷ್ಟ. ಜೋಶ್​ ನಿಜವಾಗಿಯೂ ಚೆನ್ನಾಗಿ ಬೌಲಿಂಗ್ ಮಾಡಿದರು ” ಎಂದು ಆಸೀಸ್ ಬೌಲರ್​ ಹೊಗಳಿದರು.

ಅಭಿಷೇಕ್ ಶರ್ಮಾ ಬಗ್ಗೆ ಮೆಚ್ಚುಗೆ

ಅಭಿಷೇಕ್ ಶರ್ಮಾ ಏಕಾಂಗಿ ಹೋರಾಟದ ಬಗ್ಗೆ ಮಾತನಾಡುತ್ತಾ, ” ಅಭಿಷೇಕ್ ಪ್ರದರ್ಶನ ಹೊಸತೇನಲ್ಲ, ಅವರು ತಂಡಕ್ಕಾಗಿ ಕೆಲವು ಸಮಯದಿಂದ ಇದೇ ರೀತಿ ಪ್ರದರ್ಶನ ನೀಡುತ್ತಿದ್ದಾರೆ. ಆತನಿಗೆ ಹೇಗೆ ಆಡಬೇಕೆಂದು ತಿಳಿದಿದೆ, ತನ್ನ ಜವಾಬ್ದಾರಿ ಏನೆಂಬುದು ತಿಳಿದಿದೆ. ಒಳ್ಳೆಯ ವಿಷಯವೆಂದರೆ ತಮ್ಮ ಆಟದ ಶೈಲಿಯನ್ನ ಬದಲಾಯಿಸುತ್ತಿಲ್ಲ. ಅದೇ ಅವರಿಗೆ ಯಶಸ್ಸನ್ನು ತಂದುಕೊಡುತ್ತಿದೆ. ಅವರು ಇದೇ ರೀತಿ ಆಡುವುದನ್ನು ಮುಂದುವರಿಸುತ್ತಾರೆ ಮತ್ತು ನಮಗಾಗಿ ಇನ್ನೂ ಅನೇಕ ಇನ್ನಿಂಗ್ಸ್‌ಗಳನ್ನು ಆಡುತ್ತಾರೆ ಎಂದು ಆಶಿಸುತ್ತೇವೆ ” ಎಂದು ತಿಳಿಸಿದರು.

ಮುಂದಿನ ಪಂದ್ಯದಲ್ಲಿ ಪುನರಾಗಮನ

” ನಾವು ಮೊದಲ ಪಂದ್ಯದಲ್ಲಿ ತೋರಿದ ಪ್ರದರ್ಶನವನ್ನ ಮತ್ತೆ ಮರುಕಳಿಸುವಂತೆ ಮಾಡಬೇಕು. ನಾವು ಮೊದಲು ಬ್ಯಾಟಿಂಗ್ ಮಾಡುವಾಗ ಚೆನ್ನಾಗಿ ಬ್ಯಾಟಿಂಗ್ ಮಾಡಿ ಒಳ್ಳೆಯ ಮೊತ್ತ ದಾಖಲಿಸಿ, ನಂತರ ಟೈಟ್ ಬೌಲಿಂಗ್ ಮಾಡಿ ಸ್ಕೋರ್ ಅನ್ನು ರಕ್ಷಿಸಿಕೊಳ್ಳಬೇಕು.” ಈ ಪಂದ್ಯದಲ್ಲಿ ಭಾರತಕ್ಕೆ ಪಂದ್ಯವನ್ನ ರಕ್ಷಿಸಲು ಸಾಕಷ್ಟು ರನ್ ಇರಲಿಲ್ಲ. ಎದುರಾಳಿ ಬೇಗ ಆರು ವಿಕೆಟ್‌ಗಳನ್ನು ಪಡೆದರು, ಹಾಗಾಗಿ ಸ್ಕೋರ್‌ಬೋರ್ಡ್ 125 ಕ್ಕೆ ಸೀಮಿತವಾಗಿತ್ತು. ಪರಿಣಾಮವಾಗಿ, ಬೌಲರ್‌ಗಳು ಆಸ್ಟ್ರೇಲಿಯಾ ತಂಡದ ಬ್ಯಾಟರ್​ಗಳಿಗೆ ಕಷ್ಟಕೊಡಲು ಸಾಧ್ಯವಾಗಲಿಲ್ಲ. ಆದರೂ ಭಾರತದ ಬೌಲರ್​ಗಳು 6 ವಿಕೆಟ್ ಪಡೆಯುವಲ್ಲಿ ಸಫಲರಾದರು. ಸರಣಿಯ ಮೂರನೇ ಪಂದ್ಯ ನವೆಂಬರ್ 2 ರಂದು ಹೋಬಾರ್ಟ್‌ನಲ್ಲಿ ನಡೆಯಲಿದೆ.