IND vs AUS: ಆಸ್ಟ್ರೇಲಿಯಾದಲ್ಲಿ ರೋ-ಕೋ ವೃತ್ತಿ ಜೀವನದ ಕೊನೆಯ ಪಂದ್ಯ! ಆಸೀಸ್ ಅಭಿಮಾನಿಗಳ ಮುಂದೆ ರೋಹಿತ್​-ಕೊಹ್ಲಿ ಭಾವುಕ ನುಡಿ | ಕ್ರೀಡೆ

IND vs AUS: ಆಸ್ಟ್ರೇಲಿಯಾದಲ್ಲಿ ರೋ-ಕೋ ವೃತ್ತಿ ಜೀವನದ ಕೊನೆಯ ಪಂದ್ಯ! ಆಸೀಸ್ ಅಭಿಮಾನಿಗಳ ಮುಂದೆ ರೋಹಿತ್​-ಕೊಹ್ಲಿ ಭಾವುಕ ನುಡಿ | ಕ್ರೀಡೆ

Last Updated:

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಂತಿಮವಾಗಿ ಆಸ್ಟ್ರೇಲಿಯಾಕ್ಕೆ ವಿದಾಯ ಹೇಳಿದರು, ಏಕೆಂದರೆ ಟೀಮ್ ಇಂಡಿಯಾ ಇನ್ನು ಮೂರು ನಾಲ್ಕು ವರ್ಷಗಳ ಕಾಲ ಆಸ್ಟ್ರೇಲಿಯಾದಲ್ಲಿ ಯಾವುದೇ ಏಕದಿನ ಸರಣಿಯನ್ನು ಆಡುವುದಿಲ್ಲ. ಹಾಗಾಗಿ ಇಬ್ಬರೂ ಆಸ್ಟ್ರೇಲಿಯಾಕ್ಕೆ ವಿದಾಯ ಹೇಳಿದ್ದಾರೆ.

ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ( Rohit Sharma and Virat Kohli) ಕೊನೆಯ ಏಕದಿನ ಪಂದ್ಯದಲ್ಲಿ (ODI Match) ಭರ್ಜರಿ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನ ರಂಜಿಸಿ ಆಸ್ಟ್ರೇಲಿಯಾಕ್ಕೆ ವಿದಾಯ ಹೇಳಿದ್ದಾರೆ. ಇದು ಬಹುಶಃ ತಮ್ಮ ಕೊನೆಯ ಅಂತರರಾಷ್ಟ್ರೀಯ ಪ್ರವಾಸ ಎಂದು ರೋಹಿತ್ ಮತ್ತು ವಿರಾಟ್ ಒಪ್ಪಿಕೊಂಡಿದ್ದಾರೆ. ಇಬ್ಬರೂ 2027 ರ ವಿಶ್ವಕಪ್‌ನಲ್ಲಿ (2027 World Cup) ಆಡಲು ಬಯಸುತ್ತಾರೆ, ಆದರೆ ಈ ಅವಧಿಯಲ್ಲಿ ಆಸ್ಟ್ರೇಲಿಯಾದಲ್ಲಿ ಯಾವುದೇ ಏಕದಿನ ಸರಣಿಯನ್ನು ನಿಗದಿಪಡಿಸಲಾಗಿಲ್ಲ, ಏಕೆಂದರೆ ವಿರಾಟ್ ಮತ್ತು ರೋಹಿತ್ ಪ್ರಸ್ತುತ ಆಡುವ ಸ್ವರೂಪ ಇದೊಂದೆ ಆಗಿರುವುದರಿಂದ ವಿರಾಟ್ ಮತ್ತು ರೋಹಿತ್ ಕೊನೆಯ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮುಗಿಸಿದ್ದಾರೆ. ಅಂತಿಮ ಪಂದ್ಯದಲ್ಲಿ ಇಬ್ಬರೂ ಅದ್ಭುತ ಬ್ಯಾಟಿಂಗ್ ಮಾಡಿದರು ಮತ್ತು ಪಂದ್ಯದ ನಂತರ ಆಸ್ಟ್ರೇಲಿಯಾ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು.

ಇದು ನಮ್ಮ ಕೊನೆಯ ಪ್ರವಾಸ ಎಂದ ಹಿಟ್​ಮ್ಯಾನ್

ಸಿಡ್ನಿಯಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಗಳಿಸಿದರೆ, ವಿರಾಟ್ ಕೊಹ್ಲಿ ಅಜೇಯ ಅರ್ಧಶತಕದೊಂದಿಗೆ ಫಾರ್ಮ್​ಗೆ ಮರಳಿದರು. ಪಂದ್ಯದ ನಂತರ, ರೋಹಿತ್, “ನಾನು ಇಲ್ಲಿಗೆ ಬರುವುದನ್ನು ಯಾವಾಗಲೂ ಇಷ್ಟಪಡುತ್ತೇನೆ ಮತ್ತು ಇಲ್ಲಿ (ಸಿಡ್ನಿ) ಕ್ರಿಕೆಟ್ ಆಡುವುದನ್ನು ನಿಜವಾಗಿಯೂ ಆನಂದಿಸುತ್ತೇನೆ. ಇದು 2008 ರ (ಆಸ್ಟ್ರೇಲಿಯಾಕ್ಕೆ ಅವರ ಮೊದಲ ಪ್ರವಾಸ) ನೆನಪುಗಳನ್ನು ತಂದಿತು, ಅದು ತುಂಬಾ ಮೋಜಿನ ಸಂಗತಿಯಾಗಿತ್ತು. ಆದರೆ ನಾವು ಕ್ರಿಕೆಟಿಗರಾಗಿ ಮತ್ತೆ ಇಲ್ಲಿಗೆ ಹಿಂತಿರುಗುತ್ತೇವೆಯೇ ಎಂದು ನನಗೆ ತಿಳಿದಿಲ್ಲ, ಆದರೆ ನಾನು ಪ್ರತಿ ಕ್ಷಣವನ್ನು ಸಂಪೂರ್ಣವಾಗಿ ಆನಂದಿಸಿದ್ದೇನೆ. ಇಷ್ಟು ವರ್ಷಗಳಲ್ಲಿ ನಾವು ಪಡೆದ ಎಲ್ಲಾ ಪ್ರಶಂಸೆಯ ಹೊರತಾಗಿಯೂ, ನಾವು ಕ್ರಿಕೆಟ್ ಆಡುವುದನ್ನು ಸಂಪೂರ್ಣವಾಗಿ ಆನಂದಿಸಿದ್ದೇವೆ. ಕಳೆದ 15 ವರ್ಷಗಳಲ್ಲಿ ಏನಾಯಿತು ಎಂಬುದನ್ನು ಮರೆತುಬಿಡಿ, ನಾನು ಯಾವಾಗಲೂ ಇಲ್ಲಿ ಆಡಲು ಇಷ್ಟಪಡುತ್ತೇನೆ, ಮತ್ತು ವಿರಾಟ್ ಕೂಡ ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಥ್ಯಾಂಕ್ಯೂ ಆಸ್ಟ್ರೇಲಿಯಾ ” ಎಂದು ತಿಳಿಸಿದರು.

ಡಬಲ್ ಡಕ್ ನಂತರ ಅರ್ಧಶತಕ ಸಿಡಿಸಿದ ಕೊಹ್ಲಿ

ಸತತ 2 ಡಕ್​ಗಳ ನಂತರ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿ ಅದ್ಭುತ ಕಮ್​ಬ್ಯಾಕ್ ಮಾಡಿದರು. ವಿರಾಟ್ 81 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 74 ರನ್​ಗಳಿಸಿದರು. ಈ ಬಗ್ಗೆ ಮಾತನಾಡಿದ ಕೊಹ್ಲಿ, ” ನೀವು ಬಹಳ ಸಮಯದಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿರಬಹುದು, ಆದರೆ ಆಟವು ನಿಮಗೆ ದಾರಿ ತೋರಿಸುತ್ತದೆ ಎಂದರು. ಕೆಲವು ದಿನಗಳಲ್ಲಿ, ನಾನು 37 ವರ್ಷ ವಯಸ್ಸಿನವನಾಗುತ್ತೇನೆ, ಆದರೆ ಗುರಿಗಳನ್ನು ಬೆನ್ನಟ್ಟುವುದು ಯಾವಾಗಲೂ ನನ್ನ ಅತ್ಯುತ್ತಮ ಫಾರ್ಮ್ ಆಗಿದೆ ಎಂದು ಚೇಸಿಂಗ್ ವೇಳೆ ತಮಗೆ ಯಾವುದೇ ಒತ್ತಡ ಇರುವುದಿಲ್ಲ ಎಂದು ಹೇಳಿದರು.

ರೋಹಿತ್ ಜೊತೆ ಜೊತೆಯಾಟ

ರೋಹಿತ್ ಜೊತೆ ಮ್ಯಾಚ್​ ವಿನ್ನಿಂಗ್ ಜೊತೆಯಾಟ ಹೊಂದಿರುವುದು ಸಂತೋಷಕರವಾಗಿತ್ತು. ಆರಂಭದಿಂದಲೂ, ನಾವು ಪರಿಸ್ಥಿತಿಯನ್ನು ಚೆನ್ನಾಗಿ ರೀಡ್ ಮಾಡಿದೆವು ಎಂದು ನಾನು ಭಾವಿಸುತ್ತೇನೆ, ನಾವು ಯಾವಾಗಲೂ (ಜೋಡಿಯಾಗಿ) ಉತ್ತಮವಾಗಿ ಪ್ರದರ್ಶನ ನೀಡಿದ್ದೇವೆ. ನಾವು ಬಹುಶಃ ಈಗ ಅತ್ಯಂತ ಅನುಭವಿ ಜೋಡಿಯಾಗಿದ್ದೇವೆ, ಆದರೆ ನಾವು ಯುವಕರಾಗಿದ್ದ ಸಂದರ್ಭದಿಂದಲೂ ದೊಡ್ಡ ಜೊತೆಯಾಟದ ಮೂಲಕ ನಾವು ಅವರಿಂದ ಪಂದ್ಯವನ್ನ ಹೇಗೆ ಕಸಿದುಕೊಳ್ಳಬಹುದು ಎಂಬುದನ್ನ ಚೆನ್ನಾಗಿ ತಿಳಿದಿದ್ದೇವೆ ಎಂದರು.