Last Updated:
ಅಡಿಲೇಡ್ ಓವಲ್‌ನಲ್ಲಿ ಗುರುವಾರ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ ಆಗುತ್ತಾ?. ಅಡಿಲೇಡ್ ಪಿಚ್, ಹವಾಮಾನ ಹೇಗಿದೆ? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಪರ್ತ್‌ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಮೊದಲ ಏಕದಿನ (ODI) ಪಂದ್ಯವು ಮಳೆ (Rain)ಯಿಂದಾಗಿ ನಾಲ್ಕು ಬಾರಿ ಸ್ಥಗಿತಗೊಂಡಿತ್ತು. ಮಳೆಯಿಂದಾಗಿ ಪಂದ್ಯವನ್ನು ತಲಾ 26 ಓವರ್‌ಗಳಿಗೆ ಇಳಿಸಲಾಯಿತು. ಈ ಪಂದ್ಯದಲ್ಲಿ ಭಾರತವನ್ನು ಆಸ್ಟ್ರೇಲಿಯಾ ಸೋಲಿಸಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿತ್ತು. ಉಭಯ ತಂಡಗಳು ಈಗ ಗುರುವಾರ ಅಡಿಲೇಡ್ (Adelaide)ನಲ್ಲಿ ಮುಖಾಮುಖಿಯಾಗಲಿವೆ. ಮಳೆ ಮತ್ತೊಮ್ಮೆ ಪಂದ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆಯೇ? ಅಥವಾ ಅಭಿಮಾನಿಗಳು ಪೂರ್ಣ 50 ಓವರ್‌ಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆಯೇ? ಎಂಬ ಆತಂಕ ಎದುರಾಗಿದೆ.
ಸರಣಿಯನ್ನು ಉಳಿಸಿಕೊಳ್ಳಲು ಭಾರತಕ್ಕೆ ಎರಡನೇ ಏಕದಿನ ಪಂದ್ಯವನ್ನು ಗೆಲ್ಲುವುದು ಬಹಳ ಮುಖ್ಯ. ಅಡಿಲೇಡ್ ಓವಲ್‌ನಲ್ಲಿ ಮಳೆ ಆಟಕ್ಕೆ ಅಡ್ಡಿಯಾಗಬಾರದು ಎಂದು ಶುಭಮನ್ ಗಿಲ್ ನೇತೃತ್ವದ ಭಾರತ ತಂಡ ಪ್ರಾರ್ಥನೆ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಅಡಿಲೇಡ್ ಪಿಚ್, ಹವಾಮಾನ ಹೇಗಿದೆ? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯ ಅಡಿಲೇಡ್ ಓವಲ್‌ನಲ್ಲಿ ಗುರುವಾರ ನಡೆಯಲಿದೆ. ಈ ಪಂದ್ಯವನ್ನು ಪೂರ್ಣ 50 ಓವರ್‌ಗಳು ಆಡಬಹುದು. ಒಳ್ಳೆಯ ಸುದ್ದಿ ಏನೆಂದರೆ ಅಡಿಲೇಡ್‌ನಲ್ಲಿ ಮಳೆ ಅಸಂಭವವಾಗಿದೆ. ಪಂದ್ಯದ ಹಿಂದಿನ ದಿನ ಬುಧವಾರ ಮಳೆಯಾಗುವ ಸಾಧ್ಯತೆ ಇದ್ದರೂ, ಪಂದ್ಯದ ದಿನದಂದು ಮಳೆಯಾಗುವ ಮುನ್ಸೂಚನೆ ಕೇವಲ 20 ರಷ್ಟಿದೆ. ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಕಡಿಮೆ.
ಅಡಿಲೇಡ್ ಓವಲ್ ಪಿಚ್ ಆಸ್ಟ್ರೇಲಿಯಾದಲ್ಲಿ ಬ್ಯಾಟಿಂಗ್‌ಗೆ ಅತ್ಯುತ್ತಮವಾದದ್ದು. ಇದು ಸ್ವಲ್ಪ ಬೌನ್ಸ್ ಹೊಂದಿರುವ ಫ್ಲಾಟ್ ಪಿಚ್ ಆಗಿದ್ದು, ಬ್ಯಾಟರ್ಸ್ಗೆ ಬ್ಯಾಟಿಂಗ್ ಮಾಡಲು ಸಹಾಯಕವಾಗಿದೆ. ಅಡಿಲೇಡ್ ಕೂಡ ಸ್ಪಿನ್ನರ್‌ಗಳಿಗೆ ಅನುಕೂಲಕರವಾದ ಪಿಚ್ ಅನ್ನು ಹೊಂದಿದೆ. ಭಾರತವು ಉತ್ತಮ ಸ್ಪಿನ್ ದಾಳಿಯನ್ನು ಹೊಂದಿದೆ. ಹೀಗಾಗಿ ಸರಣಿಯನ್ನು ಸಮಬಲ ಮಾಡಿಕೊಳ್ಳಲು ಭಾರತ ಸ್ಪಿನ್ ತಂತ್ರವನ್ನು ಬಳಸಿಕೊಳ್ಳಬಹುದು. ಟಾಸ್ ಗೆದ್ದ ತಂಡದ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಳ್ಳಬಹುದು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 26 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗೆ 136 ರನ್ ಗಳಿಸಿತು. ಆದರೆ ಡಕ್‌ವರ್ತ್-ಲೂಯಿಸ್ ವಿಧಾನದಡಿಯಲ್ಲಿ ಆಸ್ಟ್ರೇಲಿಯಾಕ್ಕೆ ಗೆಲ್ಲಲು 131 ರನ್‌ಗಳ ಪರಿಷ್ಕೃತ ಗುರಿಯನ್ನು ನಿಗದಿಪಡಿಸಲಾಯಿತು. ನಾಯಕ ಮಿಚೆಲ್ ಮಾರ್ಷ್ ಅವರ ಅದ್ಭುತ ಇನ್ನಿಂಗ್ಸ್‌ನಿಂದಾಗಿ, ಆಸ್ಟ್ರೇಲಿಯಾ 21.1 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 131 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು.
October 22, 2025 8:12 PM IST