IND vs AUS: ಏಕದಿನ ಸರಣಿಗೂ ಮುನ್ನ ಭಾರತಕ್ಕೆ ಆಸ್ಟ್ರೇಲಿಯಾ ನಾಯಕ ವಾರ್ನಿಂಗ್! /Australia captain Mitchell Marsh warns India ahead of ODI series | ಕ್ರೀಡೆ

IND vs AUS: ಏಕದಿನ ಸರಣಿಗೂ ಮುನ್ನ ಭಾರತಕ್ಕೆ ಆಸ್ಟ್ರೇಲಿಯಾ ನಾಯಕ ವಾರ್ನಿಂಗ್! /Australia captain Mitchell Marsh warns India ahead of ODI series | ಕ್ರೀಡೆ

Last Updated:

ಅಕ್ಟೋಬರ್ 19 ರಂದು ಪರ್ತ್‌ನಲ್ಲಿ ಬೆಳಿಗ್ಗೆ 9:00 ಗಂಟೆಗೆ ಆರಂಭವಾಗಲಿರುವ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ ವಾರ್ನಿಂಗ್ ಕೊಟ್ಟಿದ್ದಾರೆ.

Australia captain Michelle MarshAustralia captain Michelle Marsh
Australia captain Michelle Marsh

ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಮೊದಲ ಏಕದಿನ ಪಂದ್ಯ (One-day match) ನಾಳೆ ಅಂದರೆ ಅಕ್ಟೋಬರ್ 19 ರಂದು ಪರ್ತ್‌ನಲ್ಲಿ ಬೆಳಿಗ್ಗೆ 9:00 ಗಂಟೆಗೆ ಆರಂಭವಾಗಲಿದೆ. ಉಭಯ ತಂಡಗಳ ನಡುವಿನ ಏಕದಿನ ಸರಣಿ (ODI series) ಆರಂಭಕ್ಕೂ ಮುನ್ನ ಪತ್ರಿಕಾಗೋಷ್ಠಿ ನಡೆಯಿತು. ಇದಕ್ಕೂ ಮೊದಲ ಟೀಮ್ ಇಂಡಿಯಾ (Team India) ನಾಯಕ ಶುಭಮನ್ ಗಿಲ್ (Shubman Gill) ಮತ್ತು ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ (Michelle Marsh) ಏಕದಿನ ಟ್ರೋಫಿಯೊಂದಿಗೆ ಫೋಟೋ ಶೂಟ್ ನಡೆಸಿದರು. ಇದಾದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಸ್ಟ್ರೇಲಿಯಾದ ನಾಯಕ (Australia captain) ಮತ್ತು ಸ್ಫೋಟಕ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಅವರು ಟೀಮ್ ಇಂಡಿಯಾಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಇದಲ್ಲದೆ, ಭಾರತ ವಿರುದ್ಧದ ಪರ್ತ್ ಏಕದಿನ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಮೂಲಕ ಭಾರತ ತಂಡಕ್ಕೆ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮರಳಿದ್ದಾರೆ. ಇದೀಗ ಏಕದಿನ ಸರಣಿಯಲ್ಲಿ ಎಲ್ಲರ ಚಿತ್ತ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪ್ರದರ್ಶನದ ಮೇಲೆ ನೆಟ್ಟಿದೆ. ಇಂತಹ ಸಂದರ್ಭದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಟ್ಟಿ ಹಾಕುವ ಬಗ್ಗೆ ಮಾರ್ಷ್ ತಿಳಿಸಿದ್ದಾರೆ.

ಭಾರತಕ್ಕೆ ವಾರ್ನಿಂಗ್!

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಸ್ಟ್ರೇಲಿಯಾ ನೆಲದಲ್ಲಿ ತಮ್ಮ ಕೊನೆಯ ಸರಣಿಯನ್ನು ಆನಂದಿಸಲಿ ಎಂದು ಮಿಚೆಲ್ ಮಾರ್ಷ್ ಆಶಿಸುತ್ತಿದ್ದಾರೆ. ಈ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಸುಮ್ಮನಿರಿಸಲು ಯೋಜನೆ ರೂಪಿಸಿದ್ದೇವೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಉತ್ತಮವಾಗಿ ಪ್ರದರ್ಶನ ನೀಡಲು ಬಿಡುವುದಿಲ್ಲ ಎಂದು ಮಿಚೆಲ್ ಮಾರ್ಷ್ ಎಚ್ಚರಿಕೆ ನೀಡಿದ್ದಾರೆ.

ವಿರಾಟ್-ರೋಹಿತ್ ಬಗ್ಗೆ ಬೇಸರ

ಪರ್ತ್ ಏಕದಿನ ಪಂದ್ಯದ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಇದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಪುನರಾಗಮನದ ಸುತ್ತಲಿನ ಉತ್ಸಾಹವನ್ನು ಎತ್ತಿ ತೋರಿಸುತ್ತಿದೆ. ಇದನ್ನು ಸಹಿಸಿಕೊಳ್ಳದ ಆಸ್ಟ್ರೇಲಿಯಾ ನಾಯಕ ಮಾರ್ಷ್ ಬೇಸರ ವ್ಯಕ್ತಪಡಿಸಿದ್ದಾರೆ.

“ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ವಿರುದ್ಧ ಆಡುವ ಸೌಭಾಗ್ಯ ನನಗೆ ಹಲವು ಬಾರಿ ಸಿಕ್ಕಿದೆ. ಅವರು ನಿಸ್ಸಂದೇಹವಾಗಿ ಕ್ರಿಕೆಟ್ ದಂತಕಥೆಗಳು. ವಿರಾಟ್ ಕೊಹ್ಲಿ ವಿಶೇಷವಾಗಿ ವೈಟ್ ಬಾಲ್ ಕ್ರಿಕೆಟ್​ನಲ್ಲಿ ನಾವು ನೋಡಿದ ಅತ್ಯುತ್ತಮ ಚೇಸರ್. ಟಿಕೆಟ್ ಮಾರಾಟ ಏಕೆ ಇಷ್ಟೊಂದು ಹೆಚ್ಚಾಗಿದೆ ಮತ್ತು ಅವರನ್ನು ನೋಡಲು ಇಷ್ಟೊಂದು ಜನರು ಏಕೆ ಬರುತ್ತಿದ್ದಾರೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು. ಇದು ಆಸ್ಟ್ರೇಲಿಯಾ ನೆಲದಲ್ಲಿ ಅವರ ಕೊನೆಯ ಪ್ರವಾಸವಾಗಿದ್ದರೆ, ಅವರು ಈ ಸರಣಿಯನ್ನು ಆನಂದಿಸುತ್ತಾರೆ. ಜನರು ಅವರ ಉತ್ತಮ ಪ್ರದರ್ಶನಗಳನ್ನು ಹೆಚ್ಚು ನೋಡುವುದಿಲ್ಲ ಅಂದುಕೊಂಡಿದ್ದೇನೆ ಎಂದು ಮಾರ್ಷ್ ತಿಳಿಸಿದ್ದಾರೆ.

ಸರಣಿಯನ್ನು ಎದುರು ನೋಡುತ್ತಿರುವ ಮಿಚೆಲ್ ಮಾರ್ಷ್

ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಾರ, ಮೂರು ಪಂದ್ಯಗಳ ಏಕದಿನ ಸರಣಿಯ 1,75,000 ಕ್ಕೂ ಹೆಚ್ಚು ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಕೊಹ್ಲಿ ಮತ್ತು ರೋಹಿತ್ ಅವರನ್ನು ನೋಡಲು ಮೈದಾನಕ್ಕೆ ಜನರು ಹೆಚ್ಚಿನ ಸಂಖ್ಯೆ ಬರುತ್ತಿದ್ದಾರೆ. ಗಾಯಗೊಂಡಿರುವ ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾದ ಏಕದಿನ ತಂಡವನ್ನು ಮುನ್ನಡೆಸುತ್ತಿರುವ ಮಿಚೆಲ್ ಮಾರ್ಷ್ ಸರಣಿಯನ್ನು ಎದುರು ನೋಡುತ್ತಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟೆಸ್ಟ್ ಮತ್ತು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಈಗ 2027 ರ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಏಕದಿನ ಪಂದ್ಯಗಳತ್ತ ಗಮನ ಹರಿಸುತ್ತಿದ್ದಾರೆ.