IND vs AUS: ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮಿಂಚಿದ್ದ ಭಾರತದ ಟಾಪ್ ಬ್ಯಾಟರ್​-ಬೌಲರ್​ ಈ ಬಾರಿ ತಂಡದಲ್ಲೇ ಇಲ್ಲ! ಯಾರ್ಯಾರು ಗೊತ್ತಾ? | Pandya, Shami Snubbed: India’s Squad Shake-Up for Australia Tour Raises Eyebrows | ಕ್ರೀಡೆ

IND vs AUS: ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮಿಂಚಿದ್ದ ಭಾರತದ ಟಾಪ್ ಬ್ಯಾಟರ್​-ಬೌಲರ್​ ಈ ಬಾರಿ ತಂಡದಲ್ಲೇ ಇಲ್ಲ! ಯಾರ್ಯಾರು ಗೊತ್ತಾ? | Pandya, Shami Snubbed: India’s Squad Shake-Up for Australia Tour Raises Eyebrows | ಕ್ರೀಡೆ

Last Updated:

ಭಾನುವಾರದಿಂದ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಆಡಲು ಭಾರತ ತಂಡ ಸಿದ್ಧವಾಗಿದೆ. ಈ ಬಾರಿ ತಂಡದಲ್ಲಿ ಗಮನಾರ್ಹ ಬದಲಾವಣೆಗಳಿವೆ. ಕಳೆದ ಪ್ರವಾಸದಲ್ಲಿ ಗರಿಷ್ಠ ಸ್ಕೋರ್ ಮಾಡಿದ್ದ ಬ್ಯಾಟರ್, ವಿಕೆಟ್ ಪಡೆದಿದ್ದ ಬೌಲರ್​ ಭಾರತ ತಂಡದಲ್ಲಿ ಚಾನ್ಸ್ ಪಡೆದಿಲ್ಲ.

ಭಾರತ ತಂಡಭಾರತ ತಂಡ
ಭಾರತ ತಂಡ

ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಏಕದಿನ ಸರಣಿ (ODI Series) ಭಾನುವಾರ ಪ್ರಾರಂಭವಾಗಲಿದೆ. ಮೊದಲ ಪಂದ್ಯ ಭಾನುವಾರ (ಅಕ್ಟೋಬರ್ 19) ಪರ್ತ್‌ನಲ್ಲಿ ನಡೆಯಲಿದ್ದು, ಇದಕ್ಕಾಗಿ ಎರಡೂ ತಂಡಗಳು ಸಿದ್ಧತೆ ನಡೆಸುತ್ತಿವೆ. ಈ ಬಾರಿ ಶುಭ್​ಮನ್ ಗಿಲ್ ಭಾರತೀಯ ತಂಡವನ್ನು ಮುನ್ನಡೆಸಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ರೋಹಿತ್ ಶರ್ಮಾ ಬದಲಿಗೆ ಶುಭ್​ಮನ್ ಗಿಲ್ (Shubman Gill) ಅವರನ್ನು ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಕೊನೆಯ ಬಾರಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಮಾಡಿದಾಗ ವಿರಾಟ್ ಕೊಹ್ಲಿ (Virat Kohli) ನಾಯಕರಾಗಿದ್ದರು,ಆ್ಯರನ್ ಫಿಂಚ್ ಆಸ್ಟ್ರೇಲಿಯಾವನ್ನು ಮುನ್ನಡೆಸಿದ್ದರು. ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ಮೊಹಮ್ಮದ್ ಶಮಿ ಕಳೆದ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು, ಆದರೆ ಈ ಬಾರಿ ಅವರು ತಂಡದ ಭಾಗವಾಗಿಲ್ಲ.

ಕಳೆದ ಪ್ರವಾಸದಲ್ಲಿ ಮಿಂಚಿದ್ದ ಆಟಗಾರರು ಯಾರು ಇಲ್ಲ

2021-21ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಮೂರು ಪಂದ್ಯಗಳ ರೋಮಾಂಚಕ ಏಕದಿನ ಸರಣಿಯಲ್ಲಿ, ಆತಿಥೇಯ ಆಸ್ಟ್ರೇಲಿಯಾ 2-1 ಅಂತರದಲ್ಲಿ ಜಯಗಳಿಸಿತು. ಆಸ್ಟ್ರೇಲಿಯಾದ ನಾಯಕ ಆ್ಯರನ್ ಫಿಂಚ್ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ, ಅತಿ ಹೆಚ್ಚು ರನ್ ಗಳಿಸಿದ್ದರು. ಸ್ಪಿನ್ನರ್ ಆ್ಯಡಮ್ ಜಂಪಾ ಬ್ಯಾಟಿಂಗ್‌ನಲ್ಲಿ ಪ್ರಮುಖ ವಿಕೆಟ್ ಪಡೆದ ಬೌಲರ್ ಆಗಿದ್ದರು. ಹಾರ್ದಿಕ್ ಪಾಂಡ್ಯ ಭಾರತ ಪರ ಅತಿ ಹೆಚ್ಚು ರನ್ ಗಳಿಸಿದರೆ, ಮೊಹಮ್ಮದ್ ಶಮಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ ಆಗಿದ್ದರು.

ಆದರೆ ಹಿಂದಿನ ಸರಣಿಯಲ್ಲಿ ತಮ್ಮ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದ ಎಲ್ಲಾ ಸ್ಟಾರ್ ಆಟಗಾರರು (ಆಡಮ್ ಜಂಪಾ ಹೊರತುಪಡಿಸಿ) ಈ ಬಾರಿ ಸರಣಿಯ ಭಾಗವಾಗಿಲ್ಲ. ಫಿಂಚ್ ನಿವೃತ್ತರಾಗಿದ್ದರೆ, ಹಾರ್ದಿಕ್ ಪಾಂಡ್ಯ ಗಾಯದಿಂದಾಗಿ ಆಡುತ್ತಿಲ್ಲ, ಆದರೆ ಶಮಿ ಫಿಟ್ನೆಸ್ ಸಮಸ್ಯೆಗಳಿಂದಾಗಿ ತಂಡದ ಭಾಗವಾಗಿಲ್ಲ.

ಟಾಪ್ 3 ಸ್ಕೋರರ್​ ಗೈರು

ಹಿಂದಿನ ಸರಣಿಯಲ್ಲಿ, ಆ್ಯರನ್ ಫಿಂಚ್ ಸರಣಿಯಾದ್ಯಂತ ಅದ್ಭುತ ಫಾರ್ಮ್ ಪ್ರದರ್ಶಿಸಿದ್ದರು. ಅವರು ಮೂರು ಪಂದ್ಯಗಳಲ್ಲಿ 249 ರನ್ ಗಳಿಸಿ ಟಾಪ್ ಸ್ಕೋರರ್​ ಆಗಿದ್ದರು. ಫಿಂಚ್ ಮೊದಲ ಏಕದಿನ ಪಂದ್ಯದಲ್ಲಿ 114 ಮತ್ತು ಮೂರನೇ ಏಕದಿನ ಪಂದ್ಯದಲ್ಲಿ 75 ರನ್ ಗಳಿಸುವ ಅದ್ಭುತ ಇನ್ನಿಂಗ್ಸ್ ಆಡಿದರು. ಸ್ಟೀವ್ ಸ್ಮಿತ್ ಮೂರು ಇನ್ನಿಂಗ್ಸ್‌ಗಳಲ್ಲಿ 216 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರು. ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರು. ಅವರು ಮೂರು ಇನ್ನಿಂಗ್ಸ್‌ಗಳಲ್ಲಿ 105 ಸರಾಸರಿಯಲ್ಲಿ 210 ರನ್ ಗಳಿಸಿದ್ದರು, ಇದರಲ್ಲಿ ಎರಡು ಅರ್ಧಶತಕಗಳು ಸೇರಿದ್ದವು.

ಟಾಪ್ 5 ವಿಕೆಟ್ ಟೇಕರ್​ಗಳಲ್ಲಿ ಏಕೈಕ ಬೌಲರ್​ಗೆ ಚಾನ್ಸ್

ಈ ಸರಣಿಯಲ್ಲಿ ಆಸ್ಟ್ರೇಲಿಯಾದ ಲೆಗ್-ಸ್ಪಿನ್ನರ್ ಆಡಮ್ ಜಂಪಾ ಸ್ಪಿನ್​ ಮ್ಯಾಜಿಕ್ ಪ್ರದರ್ಶಿಸಿದ್ದರು. ಸರಣಿಯಲ್ಲಿ 7 ವಿಕೆಟ್‌ ಪಡೆದು ಗರಿಷ್ಠ ವಿಕೆಟ್ ಟೇಕರ್ ಎನಿಸಿಕೊಂಡಿದ್ದರು. ಅವರ ಅತ್ಯುತ್ತಮ ಪ್ರದರ್ಶನವು ಮೊದಲ ODI ನಲ್ಲಿ ಬಂದಿತು, ಆ ಪಂದ್ಯದಲ್ಲಿ ಅವರು 54 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆದಿದ್ದರು. ಇನ್ನು ಆ ಸರಣುಯಲ್ಲಿ ಜೋಶ್ ಹ್ಯಾಜಲ್‌ವುಡ್ 6 ವಿಕೆಟ್‌ಗಳನ್ನು ಪಡೆದಿದ್ದರು. ಭಾರತೀಯ ಬೌಲರ್‌ಗಳಲ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ತಲಾ 4 ವಿಕೆಟ್‌ಗಳನ್ನು ಪಡೆದಿದ್ದರು. ಮುಂಬರುವ ODI ಸರಣಿಯ ಮೊದಲ ಪಂದ್ಯದಿಂದ ಆಡಮ್ ಜಂಪಾ ಅವರನ್ನು ಹೊರಗುಳಿದಿದ್ದಾರೆ. ಎರಡೂ ತಂಡಗಳಲ್ಲಿ ಟಾಪ್ 5 ವಿಕೆಟ್​ ಪಡೆದ ಬೌಲರ್ಗಳಲ್ಲಿ ಹ್ಯಾಜಲ್​ವುಡ್ ಮಾತ್ರ ಈ ಸರಣಿಯನ್ನಾಡುತ್ತಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

IND vs AUS: ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮಿಂಚಿದ್ದ ಭಾರತದ ಟಾಪ್ ಬ್ಯಾಟರ್​-ಬೌಲರ್​ ಈ ಬಾರಿ ತಂಡದಲ್ಲೇ ಇಲ್ಲ! ಯಾರ್ಯಾರು ಗೊತ್ತಾ?