Last Updated:
ಭಾರತ ಎ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಅಧಿಕೃತ ಟೆಸ್ಟ್ ಪಂದ್ಯದಲ್ಲಿ ಕಾಂಗರೂ ಪಡೆ ಪ್ರಾಬಲ್ಯ ಸಾಧಿಸಿದೆ. ಭಾರತ ಎ ವಿರುದ್ಧದ ಮೊದಲ ನಾಲ್ಕು ದಿನಗಳ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎ ಬ್ಯಾಟ್ಸ್‌ಮನ್‌ಗಳು 337 ರನ್ ಗಳಿಸಿದ್ದಾರೆ.
ಶ್ರೇಯಸ್ ಅಯ್ಯರ್ (Shreyas Iyer) ನೇತೃತ್ವದ ಭಾರತ ಎ (India A) ತಂಡದ ವಿರುದ್ಧ ಇಂದು (ಸೆಪ್ಟೆಂಬರ್ 16) ಪ್ರಾರಂಭವಾದ ಮೊದಲ ನಾಲ್ಕು ದಿನಗಳ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎ ಬ್ಯಾಟ್ಸ್‌ಮನ್‌ಗಳು ಪ್ರಾಬಲ್ಯ ಸಾಧಿಸಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸೀಸ್ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 73 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 337 ರನ್ ಗಳಿಸಿದೆ. ಬಾರ್ಡರ್ ಗಾವಾಸ್ಕರ್ ಟೂರ್ನಮೆಂಟ್ನಲ್ಲಿ ಕೊಹ್ಲಿ ಜೊತೆ ಕಿರಿಕ್ ಮಾಟಿಕೊಂಡಿದ್ದ ಯುವ ಆರಂಭಿಕ ಬ್ಯಾಟ್ಸ್‌ಮನ್ ಸ್ಯಾಮ್ ಕಾನ್ಸ್ಟಾಸ್ (114 ಎಸೆತಗಳಲ್ಲಿ 109; 10 ಬೌಂಡರಿಗಳು, 3 ಸಿಕ್ಸರ್‌ಗಳು) ಶತಕದೊಂದಿಗೆ ದಾಖಲೆ ಮಿಂಚಿದರು.
ಲಖನೌದ ಏಕಾನಾ ಮೈದಾನದಲ್ಲಿ ನಡೆಯುತ್ತಿರುವ 4 ದಿನಗಳ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭರ್ಜರಿ ಬ್ಯಾಟಿಂಗ್ ಮಾಡಿದ ಭಾರತ ಎ ತಂಡ ಮೊದಲ ವಿಕೆಟ್ಗೆ 198 ರನ್ಗಳಿಸಿತು. ಏಕದಿನ ಮಾದರಿಯಲ್ಲಿ ಬ್ಯಾಟಿಂಗ್ ಮಾಡಿದ ಕಾನ್ಸ್ಟಾಸ್ 122 ಎಸೆತಗಳಲ್ಲಿ ಶತಕ ಬಾರಿಸಿದರು. ಒಟ್ಟಾರೆ 144 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ಗಳ ಸಹಿತ 109 ರನ್ಗಳಿಸಿ ಔಟ್ ಆದರು. ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಕ್ಯಾಂಪ್‌ಬೆಲ್ ಕೆಲ್ಲಾವೇ 97 ಎಸೆತಗಳಲ್ಲಿ 10 ಬೌಂಡರಿಗಳು, 2 ಸಿಕ್ಸರ್‌ಗಳ ನೆರವಿನಿಂದ 88 ರನ್ಗಳಿಸಿ ಶತಕದ ಸಮೀಪದಲ್ಲಿ ಔಟಾದರು.
ಇವರಿಬ್ಬರ ವಿಕೆಟ್ ಪತನದ ನಂತರ ಬಂದ ಬ್ಯಾಟ್ಸ್‌ಮನ್‌ಗಳಾದ ನಾಥನ್ ಮೆಕ್‌ಸ್ವೀನಿ (1) ಮತ್ತು ಆಲಿವರ್ ಪೀಕ್ (2) ಒಂದಂಕಿ ಸ್ಕೋರ್‌ಗಳೊಂದಿಗೆ ನಿರಾಶಾದಾಯಕ ಪ್ರದರ್ಶನ ತೋರಿ ಔಟ್ ಆದರು. ಆದರೆ ಕೂಪರ್ ಕೊನಲಿ 84 ಎಸೆತಗಳಲ್ಲಿ 12 ಬೌಂಡರಿಗಳು 70 ರನ್ಗಳಿಸಿ 3ನೇ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಪ್ರಸ್ತುತ ಲಿಯಾಮ್ ಸ್ಕಾಟ್ 47 ರನ್ ಮತ್ತು ಜೋಶ್ ಫಿಲಿಪ್ 3 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದು 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.
ಚಹಾ ವಿರಾಮದವರೆಗೆ ಯಾವುದೇ ಪರಿಣಾಮ ಬೀರಲು ಸಾಧ್ಯವಾಗದ ಭಾರತೀಯ ಬೌಲರ್‌ಗಳು, ನಂತರ 26 ರನ್‌ಗಳ ಅಂತರದಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆಯುವ ಮೂಲಕ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಿದರು.
ಆಸ್ಟ್ರೇಲಿಯಾ-ಎ ತಂಡವು ಎರಡು ಅನಧಿಕೃತ ಟೆಸ್ಟ್ ಪಂದ್ಯಗಳು (ನಾಲ್ಕು ದಿನಗಳ ಪಂದ್ಯಗಳು) ಮತ್ತು ಮೂರು ಅನಧಿಕೃತ ಏಕದಿನ ಪಂದ್ಯಗಳಿಗಾಗಿ ಭಾರತ ಪ್ರವಾಸ ಮಾಡಲಿದೆ. ಈ ಪ್ರವಾಸದ ಭಾಗವಾಗಿ, ಮೊದಲ ಟೆಸ್ಟ್ ಇಂದು ಪ್ರಾರಂಭವಾಗಿದೆ. ಎರಡನೇ ಟೆಸ್ಟ್ ಕೂಡ ಸೆಪ್ಟೆಂಬರ್ 23-26 ರಿಂದ ಎಕಾನಾ ಕ್ರೀಡಾಂಗಣದಲ್ಲಿಯೇ ನಡೆಯಲಿದೆ. ಅದರ ನಂತರ, ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 3 ಮತ್ತು 5 ರಂದು ಕಾನ್ಪುರದಲ್ಲಿ ಏಕದಿನ ಪಂದ್ಯಗಳು ನಡೆಯಲಿವೆ.
September 16, 2025 7:12 PM IST
IND vs AUS: ಕೊಹ್ಲಿ ಜೊತೆ ಕಿರಿಕ್ ಮಾಡಿಕೊಂಡಿದ್ದ 19ರ ಆಸೀಸ್ ಯುವಕನಿಂದ ಭರ್ಜರಿ ಬ್ಯಾಟಿಂಗ್! ಮೊದಲ ಭಾರತ ಪ್ರವಾಸದಲ್ಲೇ ಶತಕ ಸಿಡಿಸಿ ಅಬ್ಬರ