Last Updated:
IND vs AUS: ಇವತ್ತು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ (MCG) ನಡೀತಿರೋ ಎರಡನೇ T20 ಮ್ಯಾಚ್ನಲ್ಲಿ, ಆಸ್ಟ್ರೇಲಿಯಾದ ಹೊಸ ಕ್ಯಾಪ್ಟನ್ ಮಿಚೆಲ್ ಮಾರ್ಷ್ ಟಾಸ್ ಗೆದ್ದಿದ್ದಾರೆ.
ಟೀಂ ಇಂಡಿಯಾ-ಆಸ್ಟ್ರೇಲಿಯಾ ಮ್ಯಾಚ್ ಅಂದ್ರೆನೇ ಒಂದು ಥರ ಕಿಚ್ಚು! ಇವತ್ತು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ (MCG) ನಡೀತಿರೋ ಎರಡನೇ T20 ಮ್ಯಾಚ್ನಲ್ಲಿ, ಆಸ್ಟ್ರೇಲಿಯಾದ ಹೊಸ ಕ್ಯಾಪ್ಟನ್ ಮಿಚೆಲ್ ಮಾರ್ಷ್ ಟಾಸ್ ಗೆದ್ದಿದ್ದಾರೆ. ಅಂದಹಾಗೆ, ಅವರು ಜಾಸ್ತಿ ಯೋಚನೆ ಮಾಡದೆ, “ನಮ್ಮ ಹುಡುಗರು ಮೊದಲು ಬೌಲಿಂಗ್ ಮಾಡ್ತಾರೆ” ಅಂತ ಹೇಳಿಬಿಟ್ಟಿದ್ದಾರೆ. ಹಾಗಾಗಿ, ನಮ್ಮ ‘ಕ್ಯಾಪ್ಟನ್ ಕೂಲ್’ ಸೂರ್ಯಕುಮಾರ್ ಯಾದವ್ ಅವರ ಪಡೆ ಈಗ ಮೊದಲು ಬ್ಯಾಟ್ ಬೀಸೋಕೆ ರೆಡಿಯಾಗಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ದುಕೊಂಡಿದೆ. ನಮ್ಮ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ. ಎರಡೂ ಟೀಮ್ನಲ್ಲಿ ಇವತ್ತು ಯಾರೆಲ್ಲಾ ಆಡ್ತಿದ್ದಾರೆ ಅನ್ನೋ ಲಿಸ್ಟ್ ಇಲ್ಲಿದೆ ನೋಡಿ.
ಟೀಮ್ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಮ್ಯಾಚ್ ಆಡಿದ ಟೀಮೇ ಇವತ್ತೂ ಆಡುತ್ತಿದೆ.
- ಅಭಿಷೇಕ್ ಶರ್ಮಾ
- ಶುಭಮನ್ ಗಿಲ್
- ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್)
- ತಿಲಕ್ ವರ್ಮಾ
- ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
- ಶಿವಂ ದುಬೆ
- ಅಕ್ಷರ್ ಪಟೇಲ್
- ಹರ್ಷಿತ್ ರಾಣಾ
- ಕುಲದೀಪ್ ಯಾದವ್
- ವರುಣ್ ಚಕ್ರವರ್ತಿ
- ಜಸ್ಪ್ರೀತ್ ಬುಮ್ರಾ
ಆಸ್ಟ್ರೇಲಿಯಾ ಟೀಮ್ನಲ್ಲಿ ಒಂದೇ ಒಂದು ಬದಾಲಾವಣೆ ಆಗಿದೆ. ಫಿಲಿಪೆ (Philippe) ಬದಲಿಗೆ ಮ್ಯಾಥ್ಯೂ ಶಾರ್ಟ್ (Short) ಟೀಮ್ಗೆ ಬಂದಿದ್ದಾರೆ.
- ಮಿಚೆಲ್ ಮಾರ್ಷ್ (ಕ್ಯಾಪ್ಟನ್)
- ಟ್ರಾವಿಸ್ ಹೆಡ್
- ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್
- ಟಿಮ್ ಡೇವಿಡ್
- ಮ್ಯಾಥ್ಯೂ ಶಾರ್ಟ್
- ಮಿಚೆಲ್ ಓವನ್
- ಮಾರ್ಕಸ್ ಸ್ಟೋಯ್ನಿಸ್
- ಕ್ಸೇವಿಯರ್ ಬಾರ್ಟ್ಲೆಟ್
- ನಾಥನ್ ಎಲ್ಲಿಸ್
- ಮ್ಯಾಥ್ಯೂ ಕುಹ್ನೆಮನ್
- ಜೋಶ್ ಹೇಝಲ್ವುಡ್
ಸೂರ್ಯಕುಮಾರ್ ಯಾದವ್ (ಇಂಡಿಯಾ): “ನಾವು ಮೊದಲು ಬ್ಯಾಟಿಂಗ್ ಮಾಡೋಕೆ ಖುಷಿ ಇದೆ. ನಾವು ಇದೇ ತರಹದ ಅಟ್ಯಾಕಿಂಗ್ ಕ್ರಿಕೆಟ್ ಆಡೋಕೆ ಇಷ್ಟಪಡ್ತೀವಿ. ಶುಭಮನ್ ಗಿಲ್ಗೆ ರನ್ ಹೇಗೆ ಹೊಡಿಬೇಕು ಅಂತ ಚೆನ್ನಾಗಿ ಗೊತ್ತು. ಅವನ ಜೊತೆ ಆಡುವಾಗ ವಿಕೆಟ್ಗಳ ಮಧ್ಯೆ ಜೋರಾಗಿ ಓಡಬೇಕಾಗುತ್ತೆ ಅಷ್ಟೇ! ನಾವು ಹೋದ ಮ್ಯಾಚ್ ಆಡಿದ ಅದೇ ಟೀಮ್ನಲ್ಲಿ ಆಡ್ತಾ ಇದ್ದೀವಿ.”
October 31, 2025 1:40 PM IST