Last Updated:
IND vs AUS: ಇಂಡಿಯಾ-ಆಸ್ಟ್ರೇಲಿಯಾ ಮ್ಯಾಚ್ ಅಂದ್ರೆ ಸುಮ್ನೆನಾ? ಬರೀ ಆಟವಲ್ಲ, ಅದೊಂದು ಪ್ರತಿಷ್ಠೆಯ ಕದನ. ಅದರಲ್ಲೂ ಆಸ್ಟ್ರೇಲಿಯಾ ಮಣ್ಣಲ್ಲೇ ಅವರಿಗೆ ಸವಾಲು ಹಾಕಲು ನಮ್ಮ ಹುಡುಗರು ಸಜ್ಜಾಗಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆಸ್ಟ್ರೇಲಿಯಾದಲ್ಲಿ ಆರಂಭವಾಗುತ್ತಿದೆ. ಇಂಡಿಯಾ-ಆಸ್ಟ್ರೇಲಿಯಾ ಮ್ಯಾಚ್ ಅಂದ್ರೆ ಸುಮ್ನೆನಾ? ಬರೀ ಆಟವಲ್ಲ, ಅದೊಂದು ಪ್ರತಿಷ್ಠೆಯ ಕದನ. ಅದರಲ್ಲೂ ಆಸ್ಟ್ರೇಲಿಯಾ (Australia) ಮಣ್ಣಲ್ಲೇ ಅವರಿಗೆ ಸವಾಲು ಹಾಕಲು ನಮ್ಮ ಹುಡುಗರು ಸಜ್ಜಾಗಿದ್ದಾರೆ. ಕ್ರಿಕೆಟ್ ಜಗತ್ತಿನ ಕಣ್ಣೆಲ್ಲಾ ಈಗ ಈ ಸರಣಿಯ ಮೇಲೆಯೇ ನೆಟ್ಟಿದೆ. ಇನ್ನೂ ಈಗಾಗಲೇ ಟಾಸ್ (Toss) ಗೆದ್ದ ಆಸ್ಟ್ರೇಲಿಯಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ, ಶುಭಮನ್ ಗಿಲ್ (ಸಿ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ಡಬ್ಲ್ಯೂ), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷ್ದೀಪ್ ಸಿಂಗ್
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ (ನಾಯಕ), ಮ್ಯಾಥ್ಯೂ ಶಾರ್ಟ್, ಜೋಶ್ ಫಿಲಿಪ್ (ವಿಕೆಟ್ ಕೀಪರ್), ಮ್ಯಾಟ್ ರೆನ್ಶಾ, ಕೂಪರ್ ಕಾನೊಲಿ, ಮಿಚೆಲ್ ಓವನ್, ಮಿಚೆಲ್ ಸ್ಟಾರ್ಕ್, ನಾಥನ್ ಎಲ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಜೋಶ್ ಹ್ಯಾಜಲ್ವುಡ್
ನಿತೀಶ್ ರೆಡ್ಡಿ ODIಗೆ ಪಾದಾರ್ಪಣೆ!
October 19, 2025 8:37 AM IST