ಟಾಸ್ ಸೋತು ಬ್ಯಾಟಿಂಗ್ಗೆ ಇಳಿದಿದ್ದ ಭಾರತ ತಂಡ ಕೇವಲ 25 ರನ್ಗಳಾಗುಷ್ಟರಲ್ಲಿ ರೋಹಿತ್ ಶರ್ಮಾ (8), ವಿರಾಟ್ ಕೊಹ್ಲಿ (0) ಹಾಗೂ ಗಿಲ್ (10) ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ನಂತರ ಬಂದ ಶ್ರೇಯಸ್ ಅಯ್ಯರ್ ಕೂಡ ಕೇವಲ 24 ಎಸೆತಗಳಲ್ಲಿ ಕೇವಲ 11 ರನ್ಗಳಿಗೆ ವಿಕೆಟ್ ಒಪ್ಪಿಸಿ ನಿರೀಕ್ಷೆ ಹುಸಿಗೊಳಿಸಿದರು. 5ನೇ ವಿಕೆಟ್ಗೆ ಒಂದಾದ ರಾಹುಲ್ ಹಾಗೂ ಅಕ್ಷರ್ ಪಟೇಲ್ 5ನೇ ವಿಕೆಟ್ ಜೊತೆಯಾಟದಲ್ಲಿ 39 ರನ್ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನ 100ರ ಗಡಿ ದಾಟಿಸಿದರು.
ಅಕ್ಷರ್ ಪಟೇಲ್ 38 ಎಸೆತಗಳಲ್ಲಿ 3 ಬೌಂಡರಿಗಳ ಸಹಿತ 31 ರನ್ಗಳಿಸಿದರೆ, ರಾಹುಲ್ 31 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಿತ 38 ರನ್ಗಳಿಸಿ 25ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ನಿತೀಶ್ ಕುಮಾರ್ ರೆಡ್ಡಿ 11 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 19ರನ್ ಸಿಡಿಸಿದರು.
ಆಸ್ಟ್ರೇಲಿಯಾ ಪರ ಮ್ಯಾಥ್ಯೂ ಕುನ್ಹೆಮನ್ 26ಕ್ಕೆ2, ಮಿಚೆಲ್ ಓವೆನ್ 20ಕ್ಕೆ2, ನೇತನ್ ಎಲ್ಲಿಸ್ 29ಕ್ಕೆ1, ಜೋಶ್ ಹೇಜಲ್ವುಡ್ 20ಕ್ಕೆ2, ಮಿಚೆಲ್ ಸ್ಟಾರ್ಕ್ 22ಕ್ಕೆ1 ವಿಕೆಟ್ ಪಡೆದರು.
ಭಾರತ ತಂಡ ಬ್ಯಾಟಿಂಗ್ ಮಾಡುವ ವೇಳೆ 4 ಬಾರಿ ಮಳೆ ಅಡಚಣೆಯನ್ನುಂಟು ಮಾಡಿತು. ಮೊದಲ ಬಾರಿ ಮಳೆ ಬಂದ ನಂತರ 49 ಓವರ್ಗಳಿಗೆ ಪಂದ್ಯವನ್ನ ಇಳಿಸಲಾಯಿತು. ಮತ್ತೆ ಮಳೆ ಬಂದಾಗ 35ಕ್ಕೆ, 3ನೇ ಬಾರಿ ಬಂದು ನಿಂತ ನಂತರ 32 ಓವರ್ ಹಾಗೂ ನಾಲ್ಕನೇ ಬಾರಿ ಮಳೆ ಬಂದು ನಿಂತ ನಂತರ 26 ಓವರ್ಗಳಿಗೆ ನಿಗಧಿಪಡಿಸಲಾಯಿತು. ಕೊನೆಯ ಬ್ರೇಕ್ ನಂತರ ಭಾರತಕ್ಕೆ 10 ಓವರ್ಗಳು ಮಾತ್ರ ಸಿಕ್ಕವು. 16.4 ಓವರ್ಗಳಲ್ಲಿ 52ಕ್ಕೆ4 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡ ರಾಹುಲ್ ಹಾಗೂ ಅಕ್ಷರ್ ಸಹಾಸದಿಂದ ಕೊನೆಯ 52 ಎಸೆತಗಳಲ್ಲಿ 84 ರನ್ ಸಿಡಿಸಿದರು. ತಂಡದ ಮೊತ್ತ 136 ಇದ್ದರೂ ಡೆಕ್ವರ್ತ್ ಲೂಯಿಸ್ ನಿಯಮದನ್ವಯ ಆಸೀಸ್ಗೆ 131 ರನ್ಗಳ ಗುರಿ ನಿಗಧಿ ಮಾಡಲಾಯಿತು.
ರೋಹಿತ್ ಶರ್ಮಾ, ಶುಭ್ಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ (ನಾಯಕ), ಮ್ಯಾಥ್ಯೂ ಶಾರ್ಟ್, ಜೋಶ್ ಫಿಲಿಪ್ (ವಿಕೆಟ್ ಕೀಪರ್), ಮ್ಯಾಟ್ ರೆನ್ಶಾ, ಕೂಪರ್ ಕಾನೊಲಿ, ಮಿಚೆಲ್ ಓವನ್, ಮಿಚೆಲ್ ಸ್ಟಾರ್ಕ್, ನಾಥನ್ ಎಲ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಜೋಶ್ ಹೇಜಲ್ವುಡ್.
October 19, 2025 2:59 PM IST