IND vs AUS: ಭಾರತದ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಏಕದಿನ ಸರಣಿಯ ಭವಿಷ್ಯ ನುಡಿದ ಫಿಂಚ್ / Aaron Finch predicts ODI series ahead of India’s tour of Australia | ಕ್ರೀಡೆ

IND vs AUS: ಭಾರತದ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಏಕದಿನ ಸರಣಿಯ ಭವಿಷ್ಯ ನುಡಿದ ಫಿಂಚ್ / Aaron Finch predicts ODI series ahead of India’s tour of Australia | ಕ್ರೀಡೆ

Last Updated:

ಆಕ್ಟೋಬರ್ 19 ರಿಂದ ಆರಂಭವಾಗಲಿರುವ ಭಾರತದ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಏಕದಿನ ಸರಣಿಯ ಬಗ್ಗೆ ಆರೋನ್ ಫಿಂಚ್ ಭವಿಷ್ಯ ನುಡಿದಿದ್ದಾರೆ.

Aaron Finch Aaron Finch
Aaron Finch

ಆಸ್ಟ್ರೇಲಿಯಾ ಪ್ರವಾಸ (Australia tour)ಕ್ಕೆ ಈಗಾಗಲೇ ಭಾರತ ತಂಡ (Team India)ವನ್ನು ಬಿಸಿಸಿಐ (BCCI) ಆಯ್ಕೆ ಸಮಿತಿ ಪ್ರಕಟಿಸಿದೆ. ಆಸ್ಟ್ರೇಲಿಯಾ ವಿರುದ್ಧ ಏಕದಿನ ಮತ್ತು ಟಿ20 ಸರಣಿಗಳನ್ನು ಭಾರತ ಆಡಲಿದೆ. ಅಕ್ಟೋಬರ್ 19 ರಿಂದ ಉಭಯ ತಂಡಗಳ ನಡುವೆ ಸರಣಿ ಆರಂಭವಾಗುತ್ತಿದ್ದು, ಇದಕ್ಕೂ ಮುನ್ನ ಸೋಲು-ಗೆಲುವಿನ ಲೆಕ್ಕಚಾರ ಶುರುವಾಗಿದೆ. ವಿಶ್ವ ಕ್ರಿಕೆಟ್​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಬಲಿಷ್ಠವಾಗಿವೆ. ಹೀಗಾಗಿ ಉಭಯ ತಂಡಗಳ ಕಾದಾಟದಲ್ಲಿ ಗೆಲ್ಲುವುದು ಯಾರು? ಎಂಬ ಚರ್ಚೆ ನಡೆಯುತ್ತಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಏಕದಿನ ಮತ್ತು ಟಿ20 ಸರಣಿಗಳನ್ನು ವಶಪಡಿಸಿಕೊಳ್ಳಲು ಭಾರತ ಮಾಸ್ಟರ್ ಪ್ಲಾನ್ ರೂಪಿಸಿದೆ. ಆದರೆ, ಏಕದಿನ ಸರಣಿ ಆರಂಭಕ್ಕೂ ಆಸ್ಟ್ರೇಲಿಯಾ ಮಾಜಿ ನಾಯಕ ಆರೋನ್ ಫಿಂಚ್ (Aaron Finch) ಭವಿಷ್ಯ ನುಡಿದ್ದಾರೆ.

ಆಸ್ಟ್ರೇಲಿಯಾ ಹಾಲಿ ಏಕದಿನ ವಿಶ್ವ ಚಾಂಪಿಯನ್ ಆಗಿದೆ. ಅಕ್ಟೋಬರ್ 19 ರಿಂದ 25 ರವರಗೆ ಕ್ರಮವಾಗಿ ಪರ್ತ್, ಅಡಿಲೇಡ್ ಮತ್ತು ಸಿಡ್ನಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ನಂತರ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ ಸಿದ್ಧತೆಯಾಗಿ ಈ ಸರಣಿಯನ್ನು ಆಡಲಾಗುತ್ತಿದೆ. ಇದಕ್ಕೂ ಮುನ್ನ ಏಕದಿನ ಸರಣಿಯಲ್ಲಿ ಭಾರತವನ್ನು ಆಸ್ಟ್ರೇಲಿಯಾ ಸೋಲಿಸಲಿದೆ ಎಂದು ಆರೋನ್ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.

ಫಿಂಚ್ ಹೇಳಿದ್ದೇನು?

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇದು ಒಂದು ಉತ್ತಮ ಸರಣಿಯಾಗಲಿದೆ. ಇದು ಯಾವಾಗಲೂ ಭಾರತದ ವಿರುದ್ಧದ ಸರಣಿಯೇ ಆಗಿರುತ್ತದೆ. ವಿರಾಟ್ ಕೊಹ್ಲಿ ಮತ್ತೆ ತಂಡಕ್ಕೆ ಸೇರ್ಪಡೆಗೊಳ್ಳುವುದರಿಂದ ಆಸ್ಟ್ರೇಲಿಯಾ ವಿರುದ್ಧ ಅವರಲ್ಲಿನ ಅತ್ಯುತ್ತಮ ಪ್ರದರ್ಶನ ಹೊರಬರುತ್ತದೆ ಅಂದುಕೊಂಡಿದ್ದೇನೆ. ನೀವು ಕಾಗದದ ಮೇಲೆ ನೋಡಿದಾಗ ಇದು ಯಾವಾಗಲೂ ಉತ್ತಮ ಹೋರಾಟವಾಗಿರುತ್ತದೆ. ಏಕೆಂದರೆ ಇದು ತುಂಬಾ ಉಭಯ ತಂಡಗಳ ನಡುವೆ ಸಮನಾಗಿರುತ್ತದೆ. ಆದರೆ ನಾನು ಆಸ್ಟ್ರೇಲಿಯಾ ಸರಣಿಯನ್ನು 2-1 ರಿಂದ ಗೆಲ್ಲುತ್ತದೆ ಎಂದು ಹೇಳುತ್ತೇನೆ. ಇದು ಆತ್ಮವಿಶ್ವಾಸದಿಂದ ಅಲ್ಲ ಎಂದು ಆರೋನ್ ಫಿಂಚ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಗಿಲ್ ಬಗ್ಗೆ ಫಿಂಚ್ ಗುಣಗಾನ

ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೆಲವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದೆ. ಈ ವರ್ಷದ ಆರಂಭದಲ್ಲಿ 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲಿಸಿದ್ದ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಶುಭಮನ್ ಗಿಲ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆರೋನ್ ಫಿಂಚ್, ಶುಭ‌ಮನ್ ಗಿಲ್ ಈಗಾಗಲೇ ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ತಾನು ಎಂತಹ ಉತ್ತಮ ನಾಯಕ ಎಂಬುದನ್ನು ತೋರಿಸಿದ್ದಾರೆ. ಆದ್ದರಿಂದ ಇದು ಯಾವುದೇ ರೀತಿಯಲ್ಲಿ ಭಿನ್ನವಾಗಿರುವುದಿಲ್ಲ ಎಂದು ನನಗೆ ಖಚಿತವಾಗಿದೆ. ರೋಹಿತ್ ಮತ್ತು ಕೊಹ್ಲಿ ಇನ್ನು ಮುಂದೆ ನಾಯಕತ್ವದ ಪಾತ್ರಗಳಲ್ಲಿಲ್ಲದಿದ್ದರೂ, ಅವರ ಅನುಭವವು ತಂಡಕ್ಕೆ ಇನ್ನೂ ಮೌಲ್ಯಯುತವಾಗಿರುತ್ತದೆ ಎಂದು ಹೇಳಿದ್ದಾರೆ.

ಭಾರತ ಏಕದಿನ ತಂಡ: ಶುಭ​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಶ್‌ದೀಪ್ ಸಿಂಗ್, ಧ್ರುವ್ ಜುರೆಲ್(ವಿಕೆಟ್ ಕೀಪರ್).