IND vs AUS: ಭಾರತ ವಿರುದ್ಧ ಏಕದಿನ ಸರಣಿಗೂ ಮುನ್ನ ಆಸ್ಟ್ರೇಲಿಯಾಗೆ ಬಿಗ್ ಶಾಕ್! ಸೂಪರ್ ಫಾರ್ಮ್​​ನಲ್ಲಿದ್ದ ಸ್ಟಾರ್ ಪ್ಲೇಯರ್ ಸೀರಿಸ್​ನಿಂದಲೇ ಔಟ್! / Australia star all-rounder Cameron Green ruled out ahead of ODI series against India | ಕ್ರೀಡೆ

IND vs AUS: ಭಾರತ ವಿರುದ್ಧ ಏಕದಿನ ಸರಣಿಗೂ ಮುನ್ನ ಆಸ್ಟ್ರೇಲಿಯಾಗೆ ಬಿಗ್ ಶಾಕ್! ಸೂಪರ್ ಫಾರ್ಮ್​​ನಲ್ಲಿದ್ದ ಸ್ಟಾರ್ ಪ್ಲೇಯರ್ ಸೀರಿಸ್​ನಿಂದಲೇ ಔಟ್! / Australia star all-rounder Cameron Green ruled out ahead of ODI series against India | ಕ್ರೀಡೆ

Last Updated:

ಭಾರತ ವಿರುದ್ಧ ಏಕದಿನ ಸರಣಿಗೂ ಮುನ್ನ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್​ರೌಂಡರ್ ಗಾಯಗೊಂಡಿದ್ದಾರೆ. ಪರಿಣಾಮ ಅವರು ಇಡೀ ಏಕದಿನ ಸರಣಿಯಿಂದ ಹೊರಗುಳಿದ್ದಾರೆ.

AustraliaAustralia
Australia

ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಏಕದಿನ ಸರಣಿ (ODI series)ಗೂ ಮುನ್ನ ಕೆಟ್ಟ ಸುದ್ದಿ ಹೊರಬಿದ್ದಿದೆ. ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಇಡೀ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಏಕದಿನ ಸರಣಿ ಅಕ್ಟೋಬರ್ 19 ರಂದು ಪ್ರಾರಂಭವಾಗಲಿದೆ. ಉಭಯ ದೇಶಗಳ ನಡುವಿನ ಈ ಏಕದಿನ ಸರಣಿ ಅಕ್ಟೋಬರ್ 19 ರಿಂದ ಅಕ್ಟೋಬರ್ 25 ರವರೆಗೆ ನಡೆಯಲಿದೆ. ಭಾರತ (Team India) ವಿರುದ್ಧದ ಏಕದಿನ ಸರಣಿಗೂ ಮುನ್ನ ಆಸ್ಟ್ರೇಲಿಯಾ ತಂಡವು ದೊಡ್ಡ ಹಿನ್ನಡೆ ಅನುಭವಿಸಿದೆ.

ಭಾರತ ತಂಡವನ್ನು ತವರಿನಲ್ಲಿ ಕಟ್ಟಿ ಹಾಕಲು ಆಸ್ಟ್ರೇಲಿಯಾ ಸಜ್ಜಾಗುತ್ತಿದೆ. ಆದರೆ ಏಕದಿನ ಸರಣಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತಂಡ ಹಿನ್ನಡೆ ಅನುಭವಿಸಿದೆ. ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್​ರೌಂಡರ್ ಕ್ಯಾಮರೂನ್ ಗ್ರೀನ್ ಗಾಯದ ಕಾರಣದಿಂದಾಗಿ ಇಡೀ ಸರಣಿಯಿಂದ ಹೊರಗುಳಿದಿದ್ದಾರೆ.

ಗ್ರೀನ್ ಬದಲಿಗೆ ಯಾರು?

ಶುಕ್ರವಾರ ಕ್ಯಾಮರೂನ್ ಗ್ರೀನ್ ಗಂಭೀರ ಗಾಯದಿಂದ ಬಳಲುತ್ತಿದ್ದರು. ಪರಿಣಾಮ ಅವರು ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲು ಫಿಟ್ ಆಗಿಲ್ಲ. ಈ ಕಾರಣದಿಂದಾಗಿ ಗ್ರೀನ್ ಸರಣಿಯಿಂದ ಹೊರಗುಳಿದ್ದು, ಅವರ ಸ್ಥಾನಕ್ಕೆ ಬದಲಿ ಆಟಗಾರನನ್ನು ಆಯ್ಕೆ ಮಾಡಲಾಗಿದೆ. ಕ್ಯಾಮರೂನ್ ಗ್ರೀನ್ ಬದಲಿಗೆ ಮಾರ್ನಸ್ ಲ್ಯಾಬುಶೇನ್ ಅವರನ್ನು ಆಸ್ಟ್ರೇಲಿಯಾದ ಏಕದಿನ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

ಬೌಲಿಂಗ್ ಮಾಡದಂತೆ ಎಚ್ಚರಿಕೆ

ಕಳೆದ ವಾರ ನಡೆದ ಶೆಫೀಲ್ಡ್ ಶೀಲ್ಡ್ ಮೊದಲ ಸುತ್ತಿನ ನ್ಯೂ ಸೌತ್ ವೇಲ್ಸ್ ವಿರುದ್ಧದ ಪಂದ್ಯದಲ್ಲಿ ಕ್ಯಾಮರೂನ್ ಗ್ರೀನ್ ವೆಸ್ಟರ್ನ್ ಆಸ್ಟ್ರೇಲಿಯಾ ಪರ ಆಡಿದ್ದರು. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ವೈದ್ಯಕೀಯ ಸಿಬ್ಬಂದಿ ಸತತ ಎರಡು ದಿನ ಬೌಲಿಂಗ್ ಮಾಡದಂತೆ ನಿರ್ಬಂಧ ಹೇರಿತ್ತು. ಇದಾದ ನಂತರ, ಅವರು ತಮ್ಮ ನಿಗದಿತ ಎಂಟು ಓವರ್‌ಗಳಲ್ಲಿ ಕೇವಲ ನಾಲ್ಕು ಬೌಲಿಂಗ್ ಮಾಡಿ ಒಂದು ವಿಕೆಟ್ ಪಡೆದರು. ಏಕೆಂದರೆ ವೆಸ್ಟರ್ನ್ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಸಾಕಷ್ಟು ಸಮಯ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರಿಗೆ ಪೂರ್ಣ ದಿನದ ವಿಶ್ರಾಂತಿ ದೊರೆಯಲಿಲ್ಲ.

ಭಾರತ ವಿರುದ್ಧ ಕಡಿಮೆ ಬೌಲಿಂಗ್?

ಭಾರತದ ವಿರುದ್ಧದ ಮೊದಲೆರೆಡು ಏಕದಿನ ಪಂದ್ಯಗಳಲ್ಲಿ ಕ್ಯಾಮರೂನ್ ಗ್ರೀನ್ ಬೌಲಿಂಗ್ ಮಾಡುವ ಸಾಧ್ಯತೆ ಕಡಿಮೆ ಇತ್ತು. ಆದರೂ, ಅಕ್ಟೋಬರ್ 28 ರಂದು ನಡೆಯಲಿರುವ ಮೂರನೇ ಶೀಲ್ಡ್ ಸುತ್ತಿನಲ್ಲಿ ಹೆಚ್ಚಿನ ಓವರ್‌ಗಳನ್ನು ಬೌಲಿಂಗ್ ಮಾಡುವ ಉದ್ದೇಶದಿಂದ ಅವರು ತಮ್ಮ ಕೆಲಸದ ಹೊರೆಯನ್ನು ಹೆಚ್ಚಿಸಿಕೊಂಡರು. ಆಶಸ್ ಟೆಸ್ಟ್ ಸರಣಿಗೆ ತಯಾರಿ ನಡೆಸಲು ಸಿಡ್ನಿಯಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯ ಮತ್ತು ನಂತರದ ಟಿ20 ಸರಣಿಯಿಂದ ಅವರಿಗೆ ವಿಶ್ರಾಂತಿ ನೀಡಲು ನಿರ್ಧಾರ ಮಾಡಲಾಗಿತ್ತು. ಇದರಿಂದಾಗಿ ಅವರು ಶೀಲ್ಡ್‌ನ ಮೂರನೇ ಮತ್ತು ನಾಲ್ಕನೇ ಸುತ್ತುಗಳಲ್ಲಿ ಆಡಲು ಅವಕಾಶ ಮಾಡಿಕೊಡಲಾಗಿತ್ತು.

ಇಂಗ್ಲೆಂಡ್ ವಿರುದ್ಧದ ಆಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಕೇವಲ ಐದು ವಾರಗಳು ಬಾಕಿ ಇವೆ. ಇಂತಹ ಸಂದರ್ಭದಲ್ಲಿ ಕ್ಯಾಮರೂನ್ ಗ್ರೀನ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ. ಆಶಸ್ ಸರಣಿ‌ಗಾಗಿ ತಮ್ಮ ಸಿದ್ಧತೆಗಳನ್ನು ಮುಂದುವರಿಸಲು ಶೆಫೀಲ್ಡ್ ಶೀಲ್ಡ್‌ನ ಮೂರನೇ ಸುತ್ತಿನಲ್ಲಿ ಆಡುವ ಸಾಧ್ಯತೆಯಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ವಕ್ತಾರರು ತಿಳಿಸಿದ್ದಾರೆ.

ಆಸ್ಟ್ರೇಲಿಯಾಕ್ಕೆ ಗಾಯದ ಬರೆ

ನವೆಂಬರ್ 21 ರಿಂದ ಪರ್ತ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ನಲ್ಲಿ ನಾಯಕ ಪ್ಯಾಟ್ ಕಮ್ಮಿನ್ಸ್ ಭಾಗವಹಿಸುವುದು ಇನ್ನೂ ನಿರ್ಧಾರವಾಗಿಲ್ಲ. ಏಕೆಂದರೆ ಅವರು ತೊಡೆಸಂದು ನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ವೇಗದ ಬೌಲರ್‌ಗಳಾದ ಸೀನ್ ಅಬಾಟ್ (ತೋಳು) ಮತ್ತು ಬ್ರೆಂಡನ್ ಡಾಗೆಟ್ (ಮಂಡಿರಜ್ಜು) ಸಹ ಗಾಯಗೊಂಡಿದ್ದಾರೆ. ಭುಜದ ಶಸ್ತ್ರಚಿಕಿತ್ಸೆಯ ನಂತರ ಜೇ ರಿಚರ್ಡ್‌ಸನ್ ಇನ್ನೂ ಕ್ರಿಕೆಟ್‌ಗೆ ಮರಳಿಲ್ಲ. ಆದರೆ ಗುರುವಾರ ಪರ್ತ್‌ನಲ್ಲಿ ನಡೆದ ಏಕದಿನ ತಂಡದ ಮೊದಲ ತರಬೇತಿ ಅವಧಿಯಲ್ಲಿ ಅವರು ಹೆಚ್ಚು ಸಮಯ ಬೌಲಿಂಗ್ ಮಾಡಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

IND vs AUS: ಭಾರತ ವಿರುದ್ಧ ಏಕದಿನ ಸರಣಿಗೂ ಮುನ್ನ ಆಸ್ಟ್ರೇಲಿಯಾಗೆ ಬಿಗ್ ಶಾಕ್! ಸೂಪರ್ ಫಾರ್ಮ್​​ನಲ್ಲಿದ್ದ ಸ್ಟಾರ್ ಪ್ಲೇಯರ್ ಸೀರಿಸ್​ನಿಂದಲೇ ಔಟ್!