IND vs AUS: ವರುಣ ಅಬ್ಬರಕ್ಕೆ ಆಹುತಿಯಾಯ್ತು ಮೊದಲ ಟಿ20 ಪಂದ್ಯ! ಆದ್ರೂ ಭಾರತದ ಅಭಿಮಾನಿಗಳಿಗೆ ಸಿಕ್ತು ಖುಷಿ ಸುದ್ದಿ | India vs Australia 1st T20I Abandoned: Suryakumar Yadav, Shubman Gill Shine Before Rain Takes Over | ಕ್ರೀಡೆ

IND vs AUS: ವರುಣ ಅಬ್ಬರಕ್ಕೆ ಆಹುತಿಯಾಯ್ತು ಮೊದಲ ಟಿ20 ಪಂದ್ಯ! ಆದ್ರೂ ಭಾರತದ ಅಭಿಮಾನಿಗಳಿಗೆ ಸಿಕ್ತು ಖುಷಿ ಸುದ್ದಿ | India vs Australia 1st T20I Abandoned: Suryakumar Yadav, Shubman Gill Shine Before Rain Takes Over | ಕ್ರೀಡೆ

Last Updated:

ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಪಂದ್ಯ ಆರಂಭವಾದ ಬಳಿಕ ಎರಡು ಬಾರಿ ಮಳೆಯಿಂದ ಸ್ಥಗಿತಗೊಂಡಿತು. ಒಮ್ಮೆ 18 ಓವರ್​ಗಳಿಗೆ ಪಂದ್ಯವನ್ನ ಇಳಿಸಲಾಗಿತ್ತು. ಆದರೆ ಮತ್ತೆ ಮಳೆ ಆಗಮನದಿಂದ ಮತ್ತೆ ಸ್ಥಗಿತಗೊಂಡಿತ್ತು. ಆದರೆ ಮತ್ತೆ ಪಂದ್ಯಾರಂಭಕ್ಕೆ ಮಳೆ ಅವಕಾಶ ನೀಡದ ಕಾರಣ ಪಂದ್ಯವನ್ನ ರದ್ದುಗೊಳಿಸಲಾಯಿತು.

ಭಾರತ vs ಆಸ್ಟ್ರೇಲಿಯಾ ಟಿ20 ಪಂದ್ಯ ಮಳೆ ಕಾರಣ ರದ್ದು
ಭಾರತ vs ಆಸ್ಟ್ರೇಲಿಯಾ ಟಿ20 ಪಂದ್ಯ ಮಳೆ ಕಾರಣ ರದ್ದು

ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಕ್ಯಾನ್‌ಬೆರಾದಲ್ಲಿ ಮಳೆಯಿಂದಾಗಿ ರದ್ದಾಗಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ತಂಡ (Team India) 9.4 ಓವರ್​ಗಳಲ್ಲಿ 97 ರನ್​ಗಳಿಸಿತ್ತು. ಪಂದ್ಯ ಆರಂಭವಾದ ಬಳಿಕ ಎರಡು ಬಾರಿ ಮಳೆಯಿಂದ ಸ್ಥಗಿತಗೊಂಡಿತು. ಒಮ್ಮೆ 18 ಓವರ್​ಗಳಿಗೆ ಪಂದ್ಯವನ್ನ ಇಳಿಸಲಾಗಿತ್ತು. ಆದರೆ ಮತ್ತೆ ಮಳೆ ಆಗಮನದಿಂದ ಮತ್ತೆ ಸ್ಥಗಿತಗೊಂಡಿತ್ತು. ಆದರೆ ಮತ್ತೆ ಪಂದ್ಯಾರಂಭಕ್ಕೆ ಮಳೆ ಅವಕಾಶ ನೀಡದ ಕಾರಣ ಪಂದ್ಯವನ್ನ ರದ್ದುಗೊಳಿಸಲಾಯಿತು.

ಫ್ಯಾನ್ಸ್​ಗೆ ಖುಷಿ ತಂದ ಸೂರ್ಯ-ಗಿಲ್

ಪಂದ್ಯ ರದ್ದಾದರೂ ಭಾರತದ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಉಪನಾಯಕ ಶುಭ್​ಮನ್ ಗಿಲ್ ಇಬ್ಬರು ಫಾರ್ಮ್‌ಗೆ ಮರಳಿರುವುದು ಭಾರತೀಯ ಅಭಿಮಾನಿಗಳಿಗೆ ಸಮಾಧಾನ ತರಿಸಿದೆ. ಸೂರ್ಯಕುಮಾರ್ ಯಾದವ್ ಏಷ್ಯಾಕಪ್ ಸೇರಿ ಕಳೆದ ಕೆಲವು ಕೆಲವು ಸರಣಿಗಳಿಂದ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. ಇನ್ನು ಗಿಲ್​ ಕೂಡ ಏಷ್ಯಾಕಪ್​ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗಳಲ್ಲಿ ವಿಫಲರಾಗಿದ್ದರು. ಆದರೆ ಇಬ್ಬರು ಮೊದಲ ಟಿ20 ಪಂದ್ಯದಲ್ಲಿ ಉತ್ತಮ ಟಚ್​ನಲ್ಲಿರುವುದು ಭಾರತ ತಂಡಕ್ಕೆ ಖುಷಿ ತಂದಿದೆ.

ಸೂರ್ಯಕುಮಾರ್​ 24 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 39 ರನ್ ಗಳಿಸಿರೆ, ಶುಭ್​ಮನ್ ಗಿಲ್ 20 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್‌ಗಳ ಸಹಾಯದಿಂದ 37 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಪಂದ್ಯದಲ್ಲಿ ಟಾಸ್ ಸೋತ ಭಾರತ 9.4 ಓವರ್‌ಗಳಿಗೆ ಬ್ಯಾಟಿಂಗ್ ಮಾಡಿ ಒಂದು ವಿಕೆಟ್ ನಷ್ಟಕ್ಕೆ ಒಟ್ಟು 97 ರನ್ ಗಳಿಸಿತು. ಅಭಿಷೇಕ್ ಶರ್ಮಾ 19 ರನ್ ಗಳಿಸಿ ಔಟಾದರು. ಸರಣಿಯ ಎರಡನೇ ಪಂದ್ಯವು ಈಗ ಅಕ್ಟೋಬರ್ 31 ಶುಕ್ರವಾರ ಮೆಲ್ಬೋರ್ನ್‌ನಲ್ಲಿ ನಡೆಯಲಿದೆ.

ಸೂರ್ಯ- ಗಿಲ್ ಸ್ಫೋಟಕ ಬ್ಯಾಟಿಂಗ್

ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 4ನೇ ಓವರ್​ನಲ್ಲಿ 19 ರನ್​ಗಳಿಸಿದ್ದ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಆ ನಂತರ ಒಂದಾದ ಆರಂಭಿಕ ಶುಭ್​ಮನ್ ಗಿಲ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ (SKY) ಭರ್ಜರಿ ಪ್ರದರ್ಶನ ನೀಡಿದರು. ಮೊದಲ ಮಳೆ ವಿರಾಮದವರೆಗೆ ವಿಕೆಟ್ ಕಾಯ್ದುಕೊಳ್ಳುತ್ತಾ ಆಡುತ್ತಿದ್ದ ಸೂರ್ಯಕುಮಾರ್ ಯಾದವ್ ಮತ್ತು ಶುಭ್​ಮನ್ ಗಿಲ್ ವಿರಾಮದ ಬಳಿಕ ಗೇರ್ ಬದಲಾಯಿಸಿಕೊಂಡು ಆಕ್ರಮಣಕಾರಿಯಾಗಿ ಆಡಲು ಪ್ರಾರಂಭಿಸಿದರು. ಇವರಿಬ್ಬರು ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕ ಆಸ್ಟ್ರೇಲಿಯಾ ಬೌಲರ್‌ಗಳನ್ನು ಬೆಚ್ಚಿ ಬೀಳಿಸಿ ಕೇವಲ 35 ಎಸೆತಗಳಲ್ಲಿ 62 ರನ್​ ಸೂರೆಗೈದಿದ್ದರು.

ಭಾರತ vs ಆಸ್ಟ್ರೇಲಿಯಾ ಟಿ20 ಸರಣಿ

ಮುಂದಿನ ಬಂದ್ಯ ಮೆಲ್ಬೋರ್ನ್​ನಲ್ಲಿ ಶುಕ್ರವಾರ ನಡೆಯಲಿದೆ. 3ನೇ ಪಂದ್ಯ ನವೆಂಬರ್ 2 ರಂದು ಹೋಬರ್ಟ್​ನಲ್ಲಿ, 4ನೇ ಪಂದ್ಯ ನವೆಂಬರ್ 6ರಂದು ಗೋಲ್ಡ್ ಕಾಸ್ಟ್​​ನಲ್ಲಿ, 5ನೇ ಪಂದ್ಯ ಬ್ರಿಸ್ಬೇನ್​​ನಲ್ಲಿ ನವೆಂಬರ್ 8ರಂದು ನಡೆಯಲಿದೆ.

18ನೇ ಬಾರಿ ಟಾಸ್ ಗೆಲುವು

ಕ್ಯಾನ್‌ಬೆರಾದಲ್ಲಿ ನಡೆದ ಮೊದಲ ಟಿ20ಐನಲ್ಲಿ, ಆಸ್ಟ್ರೇಲಿಯಾದ ನಾಯಕ ಮಿಚೆಲ್ ಮಾರ್ಷ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಈ ನಿರ್ಧಾರವು ಅಂತರರಾಷ್ಟ್ರೀಯ ಟಿ20ಐನಲ್ಲಿ ಮಾರ್ಷ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ 18ನೇ ಬಾರಿಯಾಗಿದೆ.

ಹೆಡ್​ ಟು ಹೆಡ್ ದಾಖಲೆ

ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸ್ಪಷ್ಟ ಮೇಲುಗೈ ಸಾಧಿಸಿದೆ. ಉಭಯ ತಂಡಗಳ ನಡುವೆ ಇಲ್ಲಿಯವರೆಗೆ 32 ಟಿ20 ಪಂದ್ಯಗಳು ನಡೆದಿವೆ. ಈ ಪೈಕಿ ಭಾರತ 20 ಪಂದ್ಯಗಳಲ್ಲಿ ಗೆದ್ದಿದ್ದರೆ, ಆಸ್ಟ್ರೇಲಿಯಾ 11 ಪಂದ್ಯಗಳಲ್ಲಿ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಬಂದಿಲ್ಲ. ಆಸ್ಟ್ರೇಲಿಯಾ ನೆಲದಲ್ಲಿ ಟಿ20ಯಲ್ಲೂ ಭಾರತ ಮೇಲುಗೈ ಸಾಧಿಸಿದೆ. ಆಸ್ಟ್ರೇಲಿಯಾದಲ್ಲಿ ಭಾರತ ತಂಡವು ಇಲ್ಲಿಯವರೆಗೆ ಆಸ್ಟ್ರೇಲಿಯಾ ವಿರುದ್ಧ 12 ಪಂದ್ಯಗಳನ್ನು ಆಡಿದ್ದು, ಏಳು ಪಂದ್ಯಗಳನ್ನು ಗೆದ್ದು ನಾಲ್ಕರಲ್ಲಿ ಸೋತಿದೆ.