Last Updated:
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 243 ರನ್ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಭಾರತ 428 ರನ್ಗಳಿಸಿತ್ತು. 185 ರನ್ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಕಾಂಗರೂ ಪಡೆ ಕೇವಲ 127ಕ್ಕೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಹಾಗೂ 58 ರನ್ಗಳಿಂದ ಗೆದ್ದು ಬೀಗಿತು.
ಆಸ್ಟ್ರೇಲಿಯಾ ನೆಲದಲ್ಲಿ ಭಾರತೀಯ ಅಂಡರ್-19 (India U19) ತಂಡದ ಪ್ರಾಬಲ್ಯ ಮುಂದುವರೆದಿದೆ. ಬ್ರಿಸ್ಬೇನ್ನಲ್ಲಿ (Brisbane) ನಡೆದ ಆಸೀಸ್ ಅಂಡರ್-19 (Australi U19) ತಂಡದ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 58 ರನ್ಗಳಿಂದ ಗೆದ್ದುಕೊಂಡಿದೆ. ಇದಕ್ಕೂ ಮೊದಲು ಏಕದಿನ ಸರಣಿಯನ್ನ 3-0ಯಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 243 ರನ್ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಭಾರತ 428 ರನ್ಗಳಿಸಿತ್ತು. 185 ರನ್ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಕಾಂಗರೂ ಪಡೆ ಕೇವಲ 127ಕ್ಕೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಹಾಗೂ 58 ರನ್ಗಳಿಂದ ಗೆದ್ದು ಬೀಗಿತು.
185ರನ್ಗಳ ಇನ್ನಿಂಗ್ಸ್ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ ತಂಡ ಭಾರತೀಯ ಬೌಲಿಂಗ್ ದಾಳಿಗೆ ಧೂಳೀಪಟವಾಯಿತು. ಆಸ್ಟ್ರೇಲಿಯಾ ಪರ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಆರ್ಯನ್ ಶರ್ಮಾ 43 ರನ್ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. 22 ರನ್ಗಳಿಸಿದ ನಾಯಕ ವಿಲ್ ಮಲಾಕ್ಜುಕ್ 22 ರನ್ಗಳಿಸಿದರು. ಖಿಲಾನ್ ಪಟೇಲ್ 19ಕ್ಕೆ3, ಅನ್ಮೋಲ್ಜಿತ್ ಸಿಂಗ್ 55ಕ್ಕೆ2, ದೀಪೇಶ್ 16ಕ್ಕೆ3, ಕಿಶನ್ ಕುಮಾರ್ 26ಕ್ಕೆ2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇನ್ನು ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಸ್ಟೀವನ್ ಹೋಗನ್ (92) ಹೊರತುಪಡಿಸಿ, ಉಳಿದೆಲ್ಲಾ ಬ್ಯಾಟ್ಸ್ಮನ್ಗಳು ರನ್ ಗಳಿಸುವಲ್ಲಿ ವಿಫಲರಾಗಿದ್ದರು. ಭಾರತೀಯ ಬೌಲರ್ಗಳಲ್ಲಿ ದೀಪೇಶ್ ದೇವೇಂದ್ರನ್ 5 ವಿಕೆಟ್ ಪಡೆದರೆ,ಕಿಶನ್ ಕುಮಾರ್ 3 ವಿಕೆಟ್ ಹಾಗೂ ಅನ್ಮೋಲ್ಜಿತ್ ಸಿಂಗ್, ಖಿಲಾನ್ ಪಟೇಲ್ ತಲಾ 1 ವಿಕೆಟ್ ಪಡೆದರು.
ಆಸ್ಟ್ರೇಲಿಯಾದ 243 ರನ್ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ್ದ ಭಾರತ ತಂಡ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ (86 ಎಸೆತಗಳಲ್ಲಿ 113; 9 ಬೌಂಡರಿ, 8 ಸಿಕ್ಸರ್) ಮತ್ತು ವೇದಾಂತ್ ತ್ರಿವೇದಿ (192 ಎಸೆತಗಳಲ್ಲಿ 140; 19 ಬೌಂಡರಿ) ಅದ್ಭುತ ಶತಕಗಳೊಂದಿಗೆ ಮತ್ತೊಮ್ಮೆ ಪ್ರಾಬಲ್ಯ ಮೆರೆದರು. ಐಪಿಎಲ್ನಲ್ಲಿ ಈಗಾಗಲೇ ಪ್ರಭಾವಿ ಪ್ರದರ್ಶನ ನೀಡಿರುವ 14 ವರ್ಷದ ವೈಭವ್ ಟೆಸ್ಟ್ ಏಕದಿನ ಕ್ರಿಕೆಟ್ನಲ್ಲೂ ಟಿ20 ಮಾದರಿಯಂತೆ ಸಿಡಿಲಬ್ಬರಿಸುತ್ತಿದ್ದಾರೆ.
ವೈಭವ್, ವೇದಾಂತ್ ಜೊತೆಗೆ ಮೂರನೇ ವಿಕೆಟ್ಗೆ 152 ರನ್ ಸೇರಿಸಿದರು. ವೇದಾಂತ್ 192 ಎಸೆತಗಳಲ್ಲಿ 19 ಬೌಂಡರಿಗಳ ಸಹಿತ 140 ರನ್ಗಳಿಸಿದರು. ಖಿಲಾನ್ ಪಟೇಲ್ (49 ಎಸೆತಗಳಲ್ಲಿ 49; 7 ಬೌಂಡರಿ, 2 ಸಿಕ್ಸರ್), ಆಯುಷ್ ಮಾತ್ರೆ (21), ಅಭಿಗ್ಯ ಕುಂದು (26), ಮತ್ತು ರಾಹುಲ್ ಕುಮಾರ್ (23) ಉತ್ತಮ ಪ್ರದರ್ಶನ ನೀಡಿದರು. ಇದರೊಂದಿಗೆ, ಭಾರತ ತಂಡವು ಮೊದಲ ಇನ್ನಿಂಗ್ಸ್ನಲ್ಲಿ 428 ರನ್ಗಳಿಸಿ 185 ರನ್ಗಳ ಮುನ್ನಡೆ ಸಾಧಿಸಿತು. ಆಸ್ಟ್ರೇಲಿಯಾದ ಬೌಲರ್ಗಳಲ್ಲಿ, ಹೇಡನ್ ಮತ್ತು ವಿಲ್ ಮಲಾಚುಕ್ ತಲಾ 3 ವಿಕೆಟ್ಗಳನ್ನು ಪಡೆದರು.
ಅಕ್ಟೋಬರ್ 7 ರಿಂದ ಮೆಕೆ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಆರಂಭವಾಗಲಿದೆ. ಭಾರತ ಮೂರು ಪಂದ್ಯಗಳ ಏಕದಿನ ಯುವ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದು, ಈ ಪಂದ್ಯವನ್ನ ಗೆದ್ದರೆ, ಟೆಸ್ಟ್ ಸರಣಿಯನ್ನೂ ಕ್ಲೀನ್ ಸ್ವೀಪ್ ಮಾಡಲಿದೆ.
October 02, 2025 10:59 AM IST