IND vs AUS: ಸರಣಿ ಆರಂಭಕ್ಕೂ ವಿರಾಟ್-ರೋಹಿತ್ ಬಗ್ಗೆ ಆಸ್ಟ್ರೇಲಿಯಾ ನಾಯಕ ಶಾಕಿಂಗ್ ಹೇಳಿಕೆ! / Australian captain Pat Cummins shocking statement about Team India star players Virat Kohli-Rohit Sharma for the start of ODI series | ಕ್ರೀಡೆ

IND vs AUS: ಸರಣಿ ಆರಂಭಕ್ಕೂ ವಿರಾಟ್-ರೋಹಿತ್ ಬಗ್ಗೆ ಆಸ್ಟ್ರೇಲಿಯಾ ನಾಯಕ ಶಾಕಿಂಗ್ ಹೇಳಿಕೆ! / Australian captain Pat Cummins shocking statement about Team India star players Virat Kohli-Rohit Sharma for the start of ODI series | ಕ್ರೀಡೆ

Last Updated:

ಏಕದಿನ ಸರಣಿ ಆರಂಭಕ್ಕೂ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ -ರೋಹಿತ್ ಶರ್ಮಾ ಬಗ್ಗೆ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

Virat Kohli- Rohit SharmaVirat Kohli- Rohit Sharma
Virat Kohli- Rohit Sharma

ಆಸ್ಟ್ರೇಲಿಯಾ ಮತ್ತು ಭಾರತ (Australia vs India) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ (ODI series) ಅಕ್ಟೋಬರ್ 19 ರಂದು ಆರಂಭವಾಗಲಿದೆ. ಮೊದಲ ಹೈವೋಲ್ಟೇಜ್ ಪಂದ್ಯ ಪರ್ತ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸ್ಟಾರ್ ಆಟಗಾರರು ಟೀಮ್ ಇಂಡಿಯಾ (Team India)ಕ್ಕೆ ಮರಳುತ್ತಿದ್ದಾರೆ. ದೀರ್ಘಕಾಲದಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಟೀಮ್ ಇಂಡಿಯಾದ ಬ್ಯಾಟಿಂಗ್ (Batting) ವಿಭಾಗವನ್ನು ಮುನ್ನಡೆಸಲಿದ್ದಾರೆ. ಆಸ್ಟ್ರೇಲಿಯಾ ಪ್ರವಾಸ (Australia tour)ದಿಂದ ಟೀಮ್ ಇಂಡಿಯಾ ಮುನ್ನಡೆಸಲಿರುವ ಹೊಸ ಏಕದಿನ ನಾಯಕ ಶುಭಮನ್ ಗಿಲ್ (Shubman Gill) ನೇತೃತ್ವದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಡುತ್ತಿರುವುದು ಇದೇ ಮೊದಲು. ಇದರ ನಡುವೆ ಆಸ್ಟ್ರೇಲಿಯಾ ನಾಯಕ (Australia captain) ಪ್ಯಾಟ್ ಕಮ್ಮಿನ್ಸ್ (Pat Cummins) ಭಾರತದ ಸ್ಟಾರ್ ಆಟಗಾರರ ಬಗ್ಗೆ ಪ್ರತಿಕ್ರಿಯಿಸುತ್ತಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

32 ವರ್ಷದ ಪ್ಯಾಟ್ ಕಮ್ಮಿನ್ಸ್ ಬಹಳ ಕೆಲವು ದಿನಗಳಿಂದ ಗಾಯದಿಂದ ಬಳಲುತ್ತಿದ್ದಾರೆ. ಭಾರತ ವಿರುದ್ಧದ ಏಕದಿನ ಸರಣಿಗೆ ಅವರು ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ರೋಹಿತ್ ಮತ್ತು ಕೊಹ್ಲಿ ಬಗ್ಗೆ ಕಮ್ಮಿನ್ಸ್ ಹೇಳಿರುವುದು ಗಮನಿಸಬೇಕಾದ ಸಂಗತಿ.

ಆಸ್ಟ್ರೇಲಿಯಾ ನಾಯಕ ಶಾಕಿಂಗ್ ಹೇಳಿಕೆ!

ಏಕದಿನ ಸರಣಿ ಆರಂಭಕ್ಕೂ ಮುನ್ನ ಪ್ಯಾಟ್ ಕಮ್ಮಿನ್ಸ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ನಿವೃತ್ತಿ ಸುಳಿವು ಕೊಟ್ಟಿದ್ದಾರೆ. ಭಾರತ ವಿರುದ್ಧ ಸರಣಿಯೂ ಆಸ್ಟ್ರೇಲಿಯಾದ ಕ್ರಿಕೆಟ್ ಪ್ರೇಮಿಗಳಿಗೆ ಇಬ್ಬರು ದಿಗ್ಗಜರನ್ನು ನೋಡಲು ಕೊನೆಯ ಅವಕಾಶ ಆಗಿರಬಹುದು ಎನ್ನುವ ಮೂಲಕ ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆ ನಂತರ ಕ್ರಿಕೆಟ್ ಗಲ್ಲಿಗಳಲ್ಲಿ ರೋಹಿತ್ ಮತ್ತು ವಿರಾಟ್ ನಿವೃತ್ತಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಕೊನೆಯ ಸರಣಿ?

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಸಮಾನ ಪೈಪೋಟಿಯನ್ನು ಹೊಂದಿರುತ್ತವೆ. ಆಸ್​ಟ್ರೇಲಿಯಾ ತಂಡ ಏಕದಿನ ಪಂದ್ಯಗಳಲ್ಲಿ ಭಾರತ ತಂಡದಿಂದ ತೀವ್ರ ಪೈಪೋಟಿಯನ್ನು ಎದುರಿಸಿದ್ದಾರೆ. ಕಳೆದ 15 ವರ್ಷಗಳಿಂದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಪರ ಆಡುತ್ತಿದ್ದಾರೆ. ಇಬ್ಬರೂ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.

ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಅವರ ಟ್ರ್ಯಾಕ್ ರೆಕಾರ್ಡ್ ಕೂಡ ಅದ್ಭುತವಾಗಿದೆ. ಆಸ್ಟ್ರೇಲಿಯಾದ ಅಭಿಮಾನಿಗಳು ವಿರಾಟ್ ಮತ್ತು ರೋಹಿತ್ ಅವರನ್ನು ನೋಡಲು ಸ್ಟೇಡಿಯಂಗೆ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇದೀಗ ಕಮ್ಮಿನ್ಸ್ ಅವರ ಹೇಳಿಕೆ ಆಸ್ಟ್ರೇಲಿಯಾ ಕ್ರಿಕೆಟ್ ಅಭಿಮಾನಿಗಳಿಗೆ ನಿದ್ದೆಗೆಡಿಸಿದೆ. ವಿರಾಟ್ ಮತ್ತು ರೋಹಿತ್ ಒಟ್ಟಿಗೆ ಆಡುತ್ತಿರುವ ಕೊನೆಯ ಸರಣಿ ಇದಾಗಿರಬಹುದು ಎಂಬುದು ಕಮ್ಮಿನ್ಸ್ ಅಭಿಪ್ರಾಯವಾಗಿದೆ.

ಪ್ಯಾಟ್ ಕಮ್ಮಿನ್ಸ್ ಬೇಸರ

ಭಾರತ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗಳನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾದ ಸುತ್ತಲೂ ಸಾಕಷ್ಟು ಉತ್ಸಾಹವಿದೆ. ಇಂತಹ ಹೈವೋಲ್ಟೇಜ್ ಸರಣಿಯನ್ನು ಕಳೆದುಕೊಳ್ಳುವುದು ನಿರಾಶಾದಾಯಕವಾಗಿದೆ. ಆದಾಗ್ಯೂ, ಇದು ಎರಡೂ ದೇಶಗಳ ನಡುವೆ ತೀವ್ರ ಸ್ಪರ್ಧೆಯಾಗುವ ನಿರೀಕ್ಷೆಯಿದೆ ಎಂದು ಕಮ್ಮಿನ್ಸ್ ಹೇಳಿದ್ದಾರೆ.