ಜಸ್ಪ್ರಿತ್ ಬುಮ್ರಾ ಇದುವರೆಗೆ ಆಡಿದ 11 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಪಂದ್ಯಗಳಲ್ಲಿ 46 ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದಾರೆ ಮತ್ತು ಮುಂಬರುವ 5 ಪಂದ್ಯಗಳಲ್ಲಿ ಅವರು ಕನಿಷ್ಠ 13 ವಿಕೆಟ್‌ಗಳನ್ನು ಪಡೆದರೆ ಟೀಂ ಇಂಡಿಯಾದ ಮಾಜಿ ದಿಗ್ಗಜ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ 58 ವಿಕೆಟ್‌ಗಳ ದಾಖಲೆಯನ್ನು ಹಿಂದಿಕ್ಕಿ ಇಂಗ್ಲೆಂಡ್ ವಿರುದ್ಧ ಡಬ್ಲ್ಯೂಟಿಸಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಆಗಲಿದ್ದಾರೆ.
ಕಳೆದ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಅಶ್ವಿನ್, ಇಂಗ್ಲೆಂಡ್ ವಿರುದ್ಧ 9 ಡಬ್ಲ್ಯೂಟಿಸಿ ಪಂದ್ಯಗಳನ್ನು ಆಡಿ 58 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದರು. ಇಂಗ್ಲೆಂಡ್ ವಿರುದ್ಧ ಡಬ್ಲ್ಯೂಟಿಸಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಒಟ್ಟಾರೆ ದಾಖಲೆ ಆಸ್ಟ್ರೇಲಿಯಾದ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಹೆಸರಲ್ಲಿದೆ. ಈ ವಾರಾಂತ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಡಬ್ಲ್ಯೂಟಿಸಿ-2025 ಫೈನಲ್‌ನಲ್ಲಿ ಆಸಿಸ್ ತಂಡವನ್ನು ಕಮ್ಮಿನ್ಸ್ ಮುನ್ನಡೆಸಲಿದ್ದು, ಅವರು ಇಂಗ್ಲೆಂಡ್ ವಿರುದ್ಧ ಡಬ್ಲ್ಯೂಟಿಸಿಯಲ್ಲಿ 14 ಪಂದ್ಯಗಳಲ್ಲಿ 68 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
WTCಯಲ್ಲಿ ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ವಿಕೆಟ್‌ಗಳು
ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ) – 68
ರವಿಚಂದ್ರನ್ ಅಶ್ವಿನ್ (ಭಾರತ) – 58
ಜಸ್ಪ್ರೀತ್ ಬುಮ್ರಾ (ಭಾರತ) – 46
ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ) – 46
ನಾಥನ್ ಲಿಯಾನ್ (ಆಸ್ಟ್ರೇಲಿಯಾ) – 45
ಜೋಶ್ ಹ್ಯಾಜಲ್‌ವುಡ್ (ಆಸ್ಟ್ರೇಲಿಯಾ) – 39
ಅಕ್ಷರ್ ಪಟೇಲ್ (ಭಾರತ) – 32
ಕಗಿಸೊ ರಬಾಡ (ದಕ್ಷಿಣ ಆಫ್ರಿಕಾ) – 28
ಅನ್ರಿಚ್ ನಾರ್ಟ್ಜೆ (ದಕ್ಷಿಣ ಆಫ್ರಿಕಾ) – 28
ಮೊಹಮ್ಮದ್ ಸಿರಾಜ್ (ಭಾರತ) – 27
ಇಂಗ್ಲೆಂಡ್ ವಿರುದ್ಧ ಇಂಗ್ಲೆಂಡ್‌ನಲ್ಲಿ ಇದುವರೆಗೆ ನಡೆದ ಎಂಟು ಟೆಸ್ಟ್ ಪಂದ್ಯಗಳಲ್ಲಿ ಬುಮ್ರಾ ಭಾರತ ಪರ 37 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮುಂಬರುವ 5 ಟೆಸ್ಟ್ ಪಂದ್ಯಗಳಲ್ಲಿ ಬುಮ್ರಾ ಕನಿಷ್ಠ 12 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರೆ, ಇಂಗ್ಲೆಂಡ್‌ನಲ್ಲಿ ಭಾರತೀಯ ಬೌಲರ್ ಆಗಿ ಇಶಾಂತ್ ಶರ್ಮಾ ಅವರ 48 ಟೆಸ್ಟ್ ವಿಕೆಟ್‌ಗಳ ದಾಖಲೆಯನ್ನು ಮುರಿಯಲಿದ್ದಾರೆ.
ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದವರು
ಇಶಾಂತ್ ಶರ್ಮಾ – 48
ಕಪಿಲ್ ದೇವ್ – 43
ಜಸ್ಪ್ರೀತ್ ಬುಮ್ರಾ – 37
ಅನಿಲ್ ಕುಂಬ್ಳೆ – 36
ಬಿಷನ್ ಸಿಂಗ್ ಬೇಡಿ – 35
ಮೊಹಮ್ಮದ್ ಶಮಿ – 34
ಜಹೀರ್ ಖಾನ್ – 31
ಭಗವತ್ ಚಂದ್ರಶೇಖರ್ – 31
ರವೀಂದ್ರ ಜಡೇಜಾ – 22
ವಿನೂ ಮಂಕಡ್ – 20
ಶ್ರೀನಿವಾಸ್ ವೆಂಕಟರಾಘವನ್ – 20
ಭುವನೇಶ್ವರ್ ಕುಮಾರ್ – 19
ಬುಮ್ರಾ 13 ವಿಕೆಟ್ ಪಡೆದರೆ, ಇಂಗ್ಲೆಂಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ 50 ಟೆಸ್ಟ್ ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಇಂಗ್ಲೆಂಡ್ ನೆಲದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ವಿರುದ್ಧ ಅತೀ ಹೆಚ್ಚು ವಿಕೆಟ್ ಪಡೆದ ಒಟ್ಟಾರೆ ದಾಖಲೆ ಶೇನ್ ವಾರ್ನ್ ಹೆಸರಿನಲ್ಲಿದೆ.
ಇಂಗ್ಲೆಂಡ್ ವಿರುದ್ಧ ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್‌ಗಳು
ಶೇನ್ ವಾರ್ನ್ (ಆಸ್ಟ್ರೇಲಿಯಾ) – 129
ಡೆನ್ನಿಸ್ ಲಿಲ್ಲಿ (ಆಸ್ಟ್ರೇಲಿಯಾ) – 96
ಮಾಲ್ಕಮ್ ಮಾರ್ಷಲ್ (ವೆಸ್ಟ್ ಇಂಡೀಸ್) – 94
ಕರ್ಟ್ಲಿ ಆಂಬ್ರೋಸ್ (ವೆಸ್ಟ್ ಇಂಡೀಸ್) – 88
ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ) – 87
ಕೋರ್ಟ್ನಿ ವಾಲ್ಷ್ (ವೆಸ್ಟ್ ಇಂಡೀಸ್) – 87
ಟೆರ್ರಿ ಆಲ್ಡರ್‌ಮನ್ (ಆಸ್ಟ್ರೇಲಿಯಾ) – 83
June 09, 2025 8:33 PM IST
IND vs ENG: ಅಶ್ವಿನ್ ಆಲ್ ಟೈಮ್ ರೆಕಾರ್ಡ್ ಬ್ರೇಕ್ ಮಾಡಲು ಬುಮ್ರಾಗೆ ಬೇಕು ಜಸ್ಟ್ 13 ವಿಕೆಟ್! ಇಂಗ್ಲೆಂಡ್ ವಿರುದ್ಧ ನಿರ್ಮಾಣವಾಗುತ್ತಾ ಹೊಸ ದಾಖಲೆ?