Last Updated:
ಪಂದ್ಯದ ಆರಂಭದಲ್ಲಿ ಬೌಲರ್ ಗಾಯಗೊಂಡರೆ, ಇಡೀ ಯೋಜನೆ ತಲೆಕೆಳಗಾಗುತ್ತದೆ. ಎರಡನೇ ಇನ್ನಿಂಗ್ಸ್ನಲ್ಲಿ ನಮ್ಮ ಬೌಲರ್ಗಳು ತೋರಿಸಿದ ಹೋರಾಟ ಅದ್ಭುತವಾಗಿತ್ತು. ನಮ್ಮ ಆಟಗಾರರಿಂದ ನಾವು ಬಯಸುವುದು ತಂಡಕ್ಕಾಗಿ ತಮ್ಮ ಎಲ್ಲವನ್ನೂ ನೀಡುವುದು. ನಮ್ಮ ಬೌಲರ್ಗಳಲ್ಲಿ ಒಬ್ಬರಿಗೆ ಗಾಯವು ನಮ್ಮ ಗೆಲುವಿಗೆ ಇದ್ದ ಸಾಧ್ಯತೆಗಳನ್ನು ಕುಂಠಿತಗೊಳಿಸಿದೆ ಎಂದು ಸ್ಟೋಕ್ಸ್ ತಿಳಿಸಿದ್ದಾರೆ.
ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನ (India tour Of England) ಅದ್ಭುತವಾಗಿ ಮುಗಿಸಿದೆ. ಕೊನೆಯ ಪಂದ್ಯವನ್ನ 6 ರನ್ಗಳಿಂದ ಗೆಲ್ಲುವ ಮೂಲಕ 5 ಪಂದ್ಯಗಳ ಸರಣಿಯನ್ನ 2-2ರಲ್ಲಿ ಸಮಬಲ ಸಾಧಿಸಿ ಸರಣಿ ಗೆಲುವನ್ನ ಹಂಚಿಕೊಂಡಿದೆ. 374 ರನ್ಗಳ ಗುರಿಯನ್ನ ಬೆನ್ನಟ್ಟಿದ ಇಂಗ್ಲೆಂಡ್ ತಂಡ 367ಕ್ಕೆ ಆಲೌಟ್ ಆಗುವ ಮೂಲಕ ತವರಿನಲ್ಲೇ ಮುಖಭಂಗ ಅನುಭವಿಸಿತು. ಇಂಗ್ಲೆಂಡ್ ತಂಡ ಕೊನೆಯ ದಿನ 4 ವಿಕೆಟ್ ಕೈಯಲ್ಲಿಟ್ಟುಕೊಂಡು 35 ರನ್ಗಳಿಸಬೇಕಿತ್ತು. ಆದರೆ ಕೇವಲ 28 ರನ್ಗಳಿಸಲಷ್ಟೇ ಶಕ್ತವಾಯಿತು. ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ಬೌಲಿಂಗ್ಗೆ ಉತ್ತರ ಕೊಡಲಾಗದೇ ಇಂಗ್ಲೆಂಡ್ ಪರದಾಡಿ ಸೋಲೊಪ್ಪಿಕೊಂಡಿತು.
ಪಂದ್ಯದ ನಂತರ ಮಾತನಾಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಪಂದ್ಯದ ಮೊದಲ ದಿನದಂದು ಕ್ರಿಸ್ ವೋಕ್ಸ್ ಗಾಯಗೊಂಡಿದ್ದರಿಂದ ಅವರ ಗೆಲುವಿನ ಸಾಧ್ಯತೆಗಳು ಕುಂಠಿತಗೊಂಡವು ಎಂದು ಹೇಳಿದ್ದಾರೆ. ವೋಕ್ಸ್ ಗಾಯಗೊಂಡಿದ್ದರೂ ತಂಡಕ್ಕಾಗಿ ಬ್ಯಾಟಿಂಗ್ ಮಾಡಲು ಬಂದಿದ್ದು ನೆನಪಿನಲ್ಲಿ ಉಳಿಯುವಂತಹ ಘಟನೆಯಾಗಿದೆ ಎಂದು ಹೇಳಿದರು.
ಈ ಪಂದ್ಯದ ನಂತರ ಮಾತನಾಡಿದ ಬೆನ್ ಸ್ಟೋಕ್ಸ್, ಅಂತಿಮ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಂಡಿದ್ದು ದೊಡ್ಡ ನಷ್ಟ ಎಂದು ಹೇಳಿದ್ದಾರೆ. ‘ಪಂದ್ಯದ ಆಡದೆ ಡ್ರೆಸ್ಸಿಂಗ್ ಕೋಣೆಯಲ್ಲಿ ಇರುವುದು ತುಂಬಾ ಕಷ್ಟ. ಸರಣಿಯಲ್ಲಿ ಈ ಪಂದ್ಯ ಮತ್ತೊಂದು ಉತ್ತಮ ಹೋರಾಟವಾಗಿತ್ತು. ಈ ಪಂದ್ಯವು ಐದು ದಿನಗಳ ಕಾಲ ನಡೆಯಿತು. ಎರಡೂ ತಂಡಗಳು ಗೆಲ್ಲಲು ಸಾಕಷ್ಟು ಶ್ರಮಿಸಿದವು. ಎಲ್ಲಾ ಆಟಗಾರರು ತಮ್ಮ ಎಲ್ಲಾ ಶಕ್ತಿ ಮೀರಿ ಹೋರಾಡಿದರು. ಈ ಪಂದ್ಯವನ್ನು ನಾವು ಗೆಲ್ಲದಿರುವುದು ನಿರಾಶೆಯನ್ನುಂಟು ಮಾಡಿದೆ. ಆದರೆ ಇಂಗ್ಲೆಂಡ್ನ ಪ್ರದರ್ಶನದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ತಿಳಿಸಿದ್ದಾರೆ.
ಗಾಯಗೊಂಡರು ಒಂದೇ ಕೈಯಲ್ಲಿ ಬ್ಯಾಟಿಂಗ್ ಮಾಡಲು ಬಂದ ಕ್ರಿಸ್ ವೋಕ್ಸ್ ಮನೋಭಾವನೆ ಅದ್ಭುತವಾಗಿತ್ತು. ಪರಿಸ್ಥಿತಿಗಳು ಅಗತ್ಯವಿದ್ದರೆ ಬ್ಯಾಟಿಂಗ್ ಮಾಡುವ ಬಗ್ಗೆ ಕ್ರಿಸ್ ವೋಕ್ಸ್ ಯೋಚಿಸುತ್ತಿದ್ದರು. ಗಾಯಗೊಂಡ ಕೈಯಿಂದ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ಅವರು ನಿನ್ನೆಯೆಲ್ಲಾ ಯೋಚಿಸಿದ್ದರು. ಎರಡೂ ತಂಡಗಳು ಮುರಿದ ಮೂಳೆಯೊಂದಿಗೆ ಆಡಿದ ಆಟಗಾರರನ್ನು ಹೊಂದಿವೆ. ದೇಶಕ್ಕಾಗಿ ಆಡುವುದು ಎಷ್ಟು ಮುಖ್ಯ ಎಂಬುದನ್ನು ಇದು ತೋರಿಸುತ್ತದೆ. ಗಾಯಗಳಿಂದ ಬ್ಯಾಟಿಂಗ್ ಮಾಡುವುದರ ಬಗ್ಗೆ ನನಗೆ ಹೆಮ್ಮೆ ಇದೆ. ಶುಭ್ಮನ್ ಗಿಲ್ ಕೂಡ ಹೆಮ್ಮೆ ಪಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದರು.
ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಗಳು ಯಾವಾಗಲೂ ದೊಡ್ಡ ಸರಣಿಗಳು. ನೀವು ಮೈದಾನದಲ್ಲಿ ಬಹಳಷ್ಟು ಭಾವನೆಗಳನ್ನು ನೋಡುತ್ತೀರಿ. ಆದರೆ ಮೈದಾನದಲ್ಲಿ ನಡೆಯುವ ಘಟನೆಗಳ ಬಗ್ಗೆ ನಾವು ಅಳುತ್ತಾ ಕುಳಿತುಕೊಳ್ಳುವುದಿಲ್ಲ. ಭಾರತೀಯ ಆಟಗಾರರು ಹಾಗೆ ಇರುತ್ತಾರೆ. ಇದೆಲ್ಲವೂ ಆಟದ ಭಾಗ. ಮೈದಾನದ ಹೊರಗೆ, ನಾವೆಲ್ಲರೂ ಸ್ನೇಹಿತರು. ಈ ಸರಣಿಯಲ್ಲಿ ಆಲ್ರೌಂಡರ್ ಆಗಿ ನನ್ನ ಪಾತ್ರವನ್ನು ಪೂರೈಸಲು ನಾನು ಶ್ರಮಿಸಿದ್ದೇನೆ. ಈ ಪಂದ್ಯವನ್ನು ಆಡಲು ಸಾಧ್ಯವಾಗದಿರುವುದು ದೊಡ್ಡ ನಿರಾಶೆಯಾಗಿದೆ. ನಾವು ಪುನಶ್ಚೇತನಗೊಂಡು ಮುಂದಿನ ಆಶಸ್ ಸರಣಿಗೆ ಸಿದ್ಧರಾಗಬೇಕು ಎಂದರು.
ಪಂದ್ಯದ ಆರಂಭದಲ್ಲಿ ಬೌಲರ್ ಗಾಯಗೊಂಡರೆ, ಇಡೀ ಯೋಜನೆ ತಲೆಕೆಳಗಾಗುತ್ತದೆ. ಎರಡನೇ ಇನ್ನಿಂಗ್ಸ್ನಲ್ಲಿ ನಮ್ಮ ಬೌಲರ್ಗಳು ತೋರಿಸಿದ ಹೋರಾಟ ಅದ್ಭುತವಾಗಿತ್ತು. ” ನಮ್ಮ ಆಟಗಾರರಿಂದ ನಾವು ಬಯಸುವುದು ತಂಡಕ್ಕಾಗಿ ತಮ್ಮ ಎಲ್ಲವನ್ನೂ ನೀಡುವುದು. ನಮ್ಮ ಬೌಲರ್ಗಳಲ್ಲಿ ಒಬ್ಬರಿಗೆ ಗಾಯವು ನಮ್ಮ ಗೆಲುವಿಗೆ ಇದ್ದ ಸಾಧ್ಯತೆಗಳನ್ನು ಕುಂಠಿತಗೊಳಿಸಿದೆ. ಆದಾಗ್ಯೂ, ನಮ್ಮ ಮೂವರು ಬೌಲರ್ಗಳು ಅಸಾಧಾರಣ ಪ್ರದರ್ಶನ ನೀಡಿದ್ದಾರೆ” ಎಂದು ಬೆನ್ ಸ್ಟೋಕ್ಸ್ ಪ್ರಶಂಸಿಸಿದರು.
August 04, 2025 7:33 PM IST