IND vs ENG: ಆತ ತಂಡದಲ್ಲಿದ್ರೆ ಮಾತ್ರ ನೀವು ಭಾರತವನ್ನ ಸೋಲಿಸಬಹುದು, ಇಲ್ಲಾಂದ್ರ ಗೆಲುವು ಕಷ್ಟ!ಇಂಗ್ಲೆಂಡ್ ತಂಡಕ್ಕೆ ಮಹತ್ವದ ಸಲಹೆ ನೀಡಿದ ಆ್ಯಂಡರ್ಸನ್​​ | James Anderson s Lord s Plea England Must Make Key Addition for Test

IND vs ENG: ಆತ ತಂಡದಲ್ಲಿದ್ರೆ ಮಾತ್ರ ನೀವು ಭಾರತವನ್ನ ಸೋಲಿಸಬಹುದು, ಇಲ್ಲಾಂದ್ರ ಗೆಲುವು ಕಷ್ಟ!ಇಂಗ್ಲೆಂಡ್ ತಂಡಕ್ಕೆ ಮಹತ್ವದ ಸಲಹೆ ನೀಡಿದ ಆ್ಯಂಡರ್ಸನ್​​ | James Anderson s Lord s Plea England Must Make Key Addition for Test

ಇಂಗ್ಲೆಂಡ್‌ನ ಲೆಜೆಂಡರಿ ಬೌಲರ್ ಜೇಮ್ಸ್ ಆ್ಯಂಡರ್ಸನ್ ಮುಂದಿನ ಪಂದ್ಯಕ್ಕೆ ಜೊಫ್ರಾ ಆರ್ಚರ್‌ ಮರಳಬೇಕೆಂದು ಸೂಚಿಸಿದ್ದಾರೆ. 29 ವರ್ಷದ ಆರ್ಚರ್ ಎಲ್ಬೋ ಸಮಸ್ಯೆಯನ್ನ ಎದುರಿಸುತ್ತಿದ್ದು, 2021ರ ಫೆಬ್ರವರಿಯಿಂದ ಟೆಸ್ಟ್ ಪಂದ್ಯಗಳಲ್ಲಿ ಆಡಿಲ್ಲ. ಆದರೆ ಈಗ ಸಸೆಕ್ಸ್‌ನೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್‌ಗೆ ಮರಳಿದ್ದು, ಎಡ್ಜ್‌ಬಾಸ್ಟನ್‌ನ ಎರಡನೇ ಟೆಸ್ಟ್‌ ವೇಳೆಯೇ 16ರ ಇಂಗ್ಲೆಂಡ್ ತಂಡದಲ್ಲಿ ಸೇರ್ಪಡೆಯಾಗಿದ್ದಾರೆ.

ಎಡ್ಜ್‌ಬಾಸ್ಟನ್ ಸೋಲಿನ ನಂತರ ಆರ್ಚರ್‌ಗೆ ಆಯ್ಕೆಗೆ ಒತ್ತಾಯ

ಇಂಗ್ಲೆಂಡ್ ಎಡ್ಜ್‌ಬಾಸ್ಟನ್‌ನಲ್ಲಿ 336 ರನ್‌ಗಳಿಂದ ಭಾರತ ವಿರುದ್ಧ ಸೋತ ನಂತರ, ಆಂಡರ್ಸನ್ ಆರ್ಚರ್‌ ಅವಶ್ಯಕತೆ ತಂಡಕ್ಕಿದೆ. ಈಗ ಕರೆಸದಿದ್ದರೆ, ಇನ್ಯಾವಾಗ ಕರೆಸುತ್ತೀರಿ ಎಂದು ಒತ್ತಾಯಿಸಿದ್ದಾರೆ. ಈ ಸೋಲಿನಿಂದ ಸರಣಿ 1-1ರಲ್ಲಿ ಸಮಬಲಗೊಂಡಿದೆ. ನೀವು ಈಗಿನಿಂದಲೇ ಆತನಿಗೆ ಅವಕಾಶ ನೀಡಿ ಓವರ್‌ಗಳನ್ನು ಹೆಚ್ಚಿಸಲು ಪ್ರಯತ್ನಿಸಬಹುದು, ಒಂದು ವೇಳೆ ಈ ಸರಣಿಯ ನಂತರ ಆಡಿಸಲು ಬಯಸಿದರೆ, ಅದು ತಂಡಕ್ಕೆ ನಷ್ಟವಾಗಬಹುದು. ನಾನು ಆತ ಆಡುತ್ತಾನೆ ಎಂದು ಭಾವಿಸುತ್ತೇನೆ . ಆತ ಸಸೆಕ್ಸ್‌ಗಾಗಿ ಒಂದು ಪಂದ್ಯ ಆಡಿದ್ದಾನೆ, ಎಡ್ಜ್‌ಬಾಸ್ಟನ್‌ನಲ್ಲಿ ತಂಡದ ಜೊತೆ ಇದ್ದು, ಸ್ವಲ್ಪ ಬೌಲಿಂಗ್ ಅಭ್ಯಾಸ ಮಾಡಿದ್ದಾನೆ. ಆತನನ್ನು ಆಡಿಸಬೇಕು, ಇದು ತುಂಬಾ ಪ್ರಮುಖ ಪಂದ್ಯ,” ಎಂದು ಆ್ಯಂಡರ್ಸನ್ ಇಂಡಿಯಾ ಟುಡೆಗೆ ತಿಳಿಸಿದ್ದಾರೆ.

ಆರ್ಚರ್ ಬಗ್ಗೆ ಮೆಕಲಮ್ ಹೇಳಿದ್ದೇನು?

ಇಂಗ್ಲೆಂಡ್ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಆರ್ಚರ್‌ರ ದೈಹಿಕ ಮತ್ತು ಮಾನಸಿಕ ಸಿದ್ಧತೆಯ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದಾರೆ, ಆದರೆ ಆಯ್ಕೆಯ ಖಚಿತತೆಯ ಬಗ್ಗೆ ಖಚಿತಪಡಿಸಿಲ್ಲ. “ಜೊಫ್ರಾ ಫಿಟ್ ಆಗಿದ್ದಾರೆ, ಟೆಸ್ಟ್ ಆಡಲು ಸಿದ್ಧನಾಗಿದ್ದಾರೆ ಮತ್ತು ಪ್ಲೇಯಿಂಗ್​ ಇಲೆವೆನ್​​ನಲ್ಲಿ ಇರಬಹುದು. ಆತ ತನ್ನ ಗಾಯದಿಂದ ಹೊರಬಿದ್ದಿದ್ದರು, ಟೆಸ್ಟ್ ಕ್ರಿಕೆಟ್‌ನಿಂದ ದೂರವಿದ್ದ ದಿನಗಳನ್ನು ಎದುರಿಸಿದ್ದಾರೆ. ಹಾಗಾಗಿ ಟೆಸ್ಟ್‌ಗೆ ಮರಳಲು ಅತ್ಯುತ್ಸಾಹದಲ್ಲಿದ್ದಾರೆ. ಆತ ಕಮ್​ಬ್ಯಾಕ್ ಮಾಡಿದರೆ ಏನು ಸಾಧಿಸಬಹುದು ಎಂಬುದು ಎಲ್ಲರಿಗೂ ಗೊತ್ತಿದೆ,” ಎಂದು ಮೆಕಲಮ್ ಹೇಳಿದ್ದಾರೆ.

ಜುಲೈ 10ರಂದು ಲಾರ್ಡ್ಸ್‌ನಲ್ಲಿ ಆರಂಭವಾಗುವ ಮೂರನೇ ಟೆಸ್ಟ್‌ಗೂ ಮುಂಚೆ ಆರ್ಚರ್‌ರ ಆಯ್ಕೆಯ ಬಗ್ಗೆ ಚರ್ಚೆಯಾಗುತ್ತಿದೆ. ಜೊತೆಗೆ, ಮೇನಲ್ಲಿ ಜಿಂಬಾಬ್ವೆ ವಿರುದ್ಧದ ಏಕ ಟೆಸ್ಟ್‌ನಲ್ಲಿ ಗಾಯಗೊಂಡಿದ್ದ ವೇಗದ ಬೌಲರ್ ಗಸ್ ಆ್ಯಟ್‌ಕಿನ್ಸನ್ ಮತ್ತು ಆಲ್​ರೌಂಡರ್ ಜೇಕಬ್ ಬೆಥೆಲ್ ಆಯ್ಕೆಗೆ ಸಿದ್ದರಿದ್ದಾರೆ. ಆದರೆ 22 ವರ್ಷದ ಬೆಥೆಲ್ ಆರಂಭಿಕ ಸ್ಪಿನ್ನರ್ ಶೋಯಬ್ ಬಷೀರ್‌ರ ಸ್ಥಾನವನ್ನು ತುಂಬಲಾರರು, ಅವರು ತಂಡದ ಬ್ಯಾಟಿಂಗ್ ವಿಭಾಗದಲ್ಲಿದ್ದಾರೆ, ಏನಾದರೂ ಬ್ಯಾಟರ್​ಗಳಲ್ಲಿ ಗಾಯ ಸಂಭವಿಸಿದರೆ ಅವರೇ ನಮ್ಮ ಮುಂದಿನ ಆಯ್ಕೆ ಎಂದು ತಿಳಿಸಿದ್ದಾರೆ.

ಇಂಗ್ಲೆಂಡ್‌ನ ಮೂರನೇ ಟೆಸ್ಟ್‌ಗಾಗಿ ತಂಡ

ಬೆನ್ ಸ್ಟೋಕ್ಸ್ (ನಾಯಕ), ಜೊಫ್ರಾ ಆರ್ಚರ್, ಗಸ್ ಆ್ಯಟ್‌ಕಿನ್ಸನ್, ಶೋಯಬ್ ಬಷೀರ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸ್, ಸ್ಯಾಮ್ ಕುಕ್, ಜಾಕ್ ಕ್ರಾಲಿ, ಬೆನ್ ಡಕೆಟ್, ಜೇಮಿ ಓವರ್ಟನ್, ಒಲಿ ಪೋಪ್, ಜೋ ರೂಟ್, ಜೇಮಿ ಸ್ಮಿತ್, ಜೋಶ್ ಟಂಗ್, ಕ್ರಿಸ್ ವೋಕ್ಸ್.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

IND vs ENG: ನೀವು ಭಾರತವನ್ನ ಸೋಲಿಸಬೇಕಾದ್ರೆ ತಂಡದಲ್ಲಿ ಆತ ಇದ್ರೆ ಮಾತ್ರ ಸಾಧ್ಯ! ಇಂಗ್ಲೆಂಡ್ ತಂಡಕ್ಕೆ ಮಹತ್ವದ ಸಲಹೆ ನೀಡಿದ ಆ್ಯಂಡರ್ಸನ್​