Last Updated:
ಗಿಲ್ ಔಟ್ ಆದಾಗ ಇಂಗ್ಲೆಂಡ್ ತಂಡ ಮೇಲುಗೈ ಸಾಧಿಸಬಹುದು ಎನ್ನಲಾಗಿತ್ತು. ಆದರೆ ಸುಂದರ್ ಹಾಗೂ ಜಡೇಜಾ ಅದಕ್ಕೆ ಅವಕಾಶ ನೀಡಲಿಲ್ಲ, ಈ ಎಡಗೈ ಜೋಡಿ ಬರೋಬ್ಬರಿ 334 ಎಸೆತಗಳನ್ನ ಎದುರಿಇಸ 203 ರನ್ಗಳ ಅಜೇಯ ಆಟವನ್ನಾಡಿತು.
ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ನಡೆಯುತ್ತಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. 311 ರನ್ಗಳ ಬೃಹತ್ ಹಿನ್ನಡೆಯ ಹೊರತಾಗಿಯೂ ಟೀಮ್ ಇಂಡಿಯಾ ತನ್ನ 2ನೇ ಇನ್ನಿಂಗ್ಸ್ನಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 425 ರನ್ಗಳಿಸಿತು. ಅಂಪೈರ್ಗಳು ಎರಡು ತಂಡಗಳ ಒಪ್ಪಿಗೆ ಮೇರೆಗೆ ಪಂದ್ಯವನ್ನ ಡ್ರಾ ಎಂದು ತೀರ್ಮಾನಿಸಿದರು. ನಾಯಕ ಶುಭ್ಮನ್ ಗಿಲ್ (103) ರವೀಂದ್ರ ಜಡೇಜಾ (ಅಜೇಯ 107) ಹಾಗೂ ವಾಷಿಂಗ್ಟನ್ ಸುಂದರ್ ( ಅಜೇಯ 101) ಶತಕ ಸಿಡಿಸಿದರೆ, ಕನ್ನಡಿಗ ಕೆಎಲ್ ರಾಹುಲ್ 90 ರನ್ಗಳಿಸಿ ಭಾರತ ತಂಡ ಪಂದ್ಯವನ್ನ ಡ್ರಾ ಮಾಡಿಕೊಳ್ಳಲು ನೆರವಾದರು.
4ನೇ ದಿನ ಟಿಮ್ ಇಂಡಿಯಾ 2 ವಿಕೆಟ್ ಕಳೆದುಕೊಂಡು 172 ರನ್ಗಳಿಸಿತ್ತು. ನಿನ್ನೆ 86 ರನ್ಗಳಿಸಿದ್ದ ಕೆಎಲ್ ರಾಹುಲ್ ಇಂದು ಕೇವಲ 4 ರನ್ಗಳಿಸಿ ಶತಕ ಮಿಸ್ ಮಾಡಿಕೊಂಡರು. ರಾಹುಲ್ ಬೆನ್ ಸ್ಟೋಕ್ಸ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ರಾಹುಲ್ 230 ಎಸೆತಗಳಲ್ಲಿ 8 ಬೌಂಡರಿ ಸಹಿತ 90 ರನ್ಗಳಿಸಿದರು. ನಂತರ ಶುಭ್ಮನ್ ಗಿಲ್ ಹಾಗೂ ವಾಷಿಂಗ್ಟನ್ ಸುಂದರ್ 104 ಎಸೆತಗಳಲ್ಲಿ 34 ರನ್ ಸೇರಿಸಿದರು. ಗಿಲ್ 238 ಎಸೆತಗಳಲ್ಲಿ 12 ಬೌಂಡರಿ ಸಹಿತ 103 ರನ್ಗಳಿಸಿ ಆರ್ಚರ್ ಬೌಲಿಂಗ್ನಲ್ಲಿ ಕೀಪರ್ ಜೇಮಿ ಸ್ಮಿತ್ಗೆ ಕ್ಯಾಚ್ ನೀಡಿ ಔಟ್ ಆದರು.
ಗಿಲ್ ಔಟ್ ಆದಾಗ ಇಂಗ್ಲೆಂಡ್ ತಂಡ ಮೇಲುಗೈ ಸಾಧಿಸಬಹುದು ಎನ್ನಲಾಗಿತ್ತು. ಆದರೆ ಸುಂದರ್ ಹಾಗೂ ಜಡೇಜಾ ಅದಕ್ಕೆ ಅವಕಾಶ ನೀಡಲಿಲ್ಲ, ಈ ಎಡಗೈ ಜೋಡಿ ಬರೋಬ್ಬರಿ 334 ಎಸೆತಗಳನ್ನ ಎದುರಿಇಸ 203 ರನ್ಗಳ ಅಜೇಯ ಆಟವನ್ನಾಡಿತು. ಜಡೇಜಾ 185 ಎಸೆತಗಳಲ್ಲಿ 15 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 107 ರನ್ಗಳಿಸಿದರೆ, ವಾಷಿಂಗ್ಟನ್ ಸುಂದರ್ 206 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 101 ರನ್ಗಳಿಸಿ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳಲು ನೆರವಾದರು.
ಇಂಗ್ಲೆಂಡ್ ತಂಡದ ಪರ ಕ್ರಿಸ್ ವೋಕ್ಸ್ 67ಕ್ಕೆ2, ಜೋಫ್ರಾ ಆರ್ಚರ್ 78ಕ್ಕೆ1, ಬೆನ್ ಸ್ಟೋಕ್ಸ್ 33ಕ್ಕೆ1 ವಿಕೆಟ್ ಪಡೆದರಾದರು. 0-2 ವಿಕೆಟ್ ಪಡೆದಿದ್ದ ಇಂಗ್ಲೆಂಡ್ ಪಂದ್ಯವನ್ನ ಗೆಲ್ಲಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಭಾರತ ತಂಡದ ಬ್ಯಾಟರ್ಗಳು ಅದಕ್ಕೆ ಅವಕಾಶ ಕೊಡದೇ ಪಂದ್ಯ ಡ್ರಾನಲ್ಲಿ ಅಂತ್ಯವಾಗಿಸಿದರು.
July 27, 2025 10:35 PM IST
IND vs ENG: ಇಂಗ್ಲೆಂಡ್ ಗೆಲುವಿನ ಆಸೆ ಕಮರಿಸಿದ ಜಡ್ಡು-ಸುಂದರ್ ದ್ವಿಶತಕದ ಜೊತೆಯಾಟ! ಟ್ರೋಫಿ ಉಳಿಕೊಳ್ಳಲು ಭಾರತಕ್ಕೆ ಮತ್ತೊಂದು ಚಾನ್ಸ್