IND vs ENG: ಇಂಗ್ಲೆಂಡ್ ಬೌಲರ್​ಗಳನ್ನ ಬೆಂಡೆತ್ತಿದ್ದ ರಾಹುಲ್-ಜೈಸ್ವಾಲ್! 39 ವರ್ಷಗಳ ದಾಖಲೆಗೆ ಬಿತ್ತು ಬ್ರೇಕ್ | KL Rahul and Yashasvi Jaiswal Smash 39-Year Record with Record-Breaking Opening Stand

IND vs ENG: ಇಂಗ್ಲೆಂಡ್ ಬೌಲರ್​ಗಳನ್ನ ಬೆಂಡೆತ್ತಿದ್ದ ರಾಹುಲ್-ಜೈಸ್ವಾಲ್! 39 ವರ್ಷಗಳ ದಾಖಲೆಗೆ ಬಿತ್ತು ಬ್ರೇಕ್ | KL Rahul and Yashasvi Jaiswal Smash 39-Year Record with Record-Breaking Opening Stand

ಐತಿಹಾಸಿಕ ದಾಖಲೆ

ಕೆ.ಎಲ್. ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಜೋಡಿಯು ಹೆಡಿಂಗ್ಲೆ ಮೈದಾನದಲ್ಲಿ ಭಾರತದ ಪರವಾಗಿ ಆರಂಭಿಕ ಜೊತೆಯಾಟದಲ್ಲಿ ಗರಿಷ್ಠ ರನ್‌ಗಳ ದಾಖಲೆಯನ್ನು ನಿರ್ಮಿಸಿದೆ. ಈ ಜೋಡಿಯ 91 ರನ್‌ಗಳ ಜೊತೆಯಾಟವು 1986ರಲ್ಲಿ ಸುನಿಲ್ ಗವಾಸ್ಕರ್ ಮತ್ತು ಕ್ರಿಸ್ ಶ್ರೀಕಾಂತ್‌ರ 64 ರನ್‌ಗಳ ದಾಖಲೆಯನ್ನು ಮೀರಿದೆ. ಈ ದಾಖಲೆಯು 39 ವರ್ಷಗಳಿಂದ ಯಾರಿಂದಲೂ ಮುರಿಯಲಾಗಿರಲಿಲ್ಲ. ಇದೀಗ ಹೆಡಿಂಗ್ಲೆಯಲ್ಲಿ ರಾಹುಲ್-ಜೈಲ್ವಾಲ್ ಈ ದಾಖಲೆಯನ್ನ ಬ್ರೇಕ್ ಮಾಡಿದೆ.

ಹೆಡಿಂಗ್ಲೆ ಮೈದಾನದಲ್ಲಿನ ಆರಂಭಿಕ ಜೊತೆಯಾಟದ ದಾಖಲೆ

91 ರನ್: ಕೆ.ಎಲ್. ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್, 2025

64 ರನ್: ಸುನಿಲ್ ಗವಾಸ್ಕರ್ ಮತ್ತು ಕ್ರಿಸ್ ಶ್ರೀಕಾಂತ್, 1986

39 ರನ್: ಫಾರೂಕ್ ಇಂಜಿನಿಯರ್ ಮತ್ತು ರಮೇಶ್ ಸಕ್ಸೇನಾ, 1967

34 ರನ್: ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್, 2021

18 ರನ್: ದತ್ತಾ ಗಾಯಕ್ವಾಡ್ ಮತ್ತು ಪಂಕಜ್ ರಾಯ್, 1952

ಕೆ.ಎಲ್. ರಾಹುಲ್‌ಗೆ ವಿಕೆಟ್‌ ಪತನ

ಉತ್ತಮ ಆರಂಭ ಪಡೆದಿದ್ದ ಭಾರತ ಮೊದಲ ದಿನದ ಮಧ್ಯಾಹ್ನದ ಊಟಕ್ಕೆ ಕೆಲವೇ ನಿಮಿಷಗಳ ಮೊದಲು ಕೆ.ಎಲ್. ರಾಹುಲ್ ವಿಕೆಟ್ ಕಳೆದುಕೊಂಡಿತು. 78 ಎಸೆತಗಳನ್ನ ಎದುರಿಸಿದ 42 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದಾಗ, ಜೋಶ್ ಟಂಗ್ ಎಸೆದ ವೈಡ್ ಎಸೆತವನ್ನು ಚೇಸ್ ಮಾಡಲು ಯತ್ನಿಸಿದರು. ಈ ಎಸೆತವು ರಾಹುಲ್‌ರ ಬ್ಯಾಟ್‌ನ ತುದಿಗೆ ತಾಗಿ ಎರಡನೇ ಸ್ಲಿಪ್‌ನಲ್ಲಿ ಜೋ ರೂಟ್‌ಗೆ ಕ್ಯಾಚ್ ಒಡ್ಡಿತು. ರಾಹುಲ್‌ರ ಈ ವಿಕೆಟ್ ಇಂಗ್ಲೆಂಡ್‌ಗೆ ಮೊದಲ ಯಶಸ್ಸನ್ನು ತಂದುಕೊಟ್ಟಿತಾದರೂ, ಭಾರತದ ಆರಂಭಿಕ ಜೊತೆಯಾಟದ ದಾಖಲೆ ಈಗಾಗಲೇ ಇತಿಹಾಸದ ಪುಟ ಸೇರಿತ್ತು.

ಭಾರತದ ಆರಂಭಿಕ ಜೊತೆಯಾಟದ ಐತಿಹಾಸಿಕತೆ

ರಾಹುಲ್ ಮತ್ತು ಜೈಸ್ವಾಲ್‌ರ 91 ರನ್‌ಗಳ ಜೊತೆಯಾಟವು ಭಾರತಕ್ಕೆ ಕೇವಲ ಭದ್ರ ಆರಂಭವನ್ನು ಮಾತ್ರವಲ್ಲ, ಐತಿಹಾಸಿಕ ಮೈಲಿಗಲ್ಲನ್ನೂ ಒದಗಿಸಿದೆ. ಈ ಜೊತೆಯಾಟವು 1986ರಲ್ಲಿ ಗವಾಸ್ಕರ್ ಮತ್ತು ಶ್ರೀಕಾಂತ್‌ರ 64 ರನ್‌ಗಳ ದಾಖಲೆಯನ್ನು ಮೀರಿಸಿತು, ಇದು ಹೆಡಿಂಗ್ಲೆಯಂತಹ ಸವಾಲಿನ ಪಿಚ್‌ನಲ್ಲಿ ಭಾರತದ ಆರಂಭಿಕ ಆಟಗಾರರಿಗೆ ದೊಡ್ಡ ಸಾಧನೆಯಾಗಿದೆ. ಈ ಪಿಚ್ ಸಾಮಾನ್ಯವಾಗಿ ವೇಗದ ಬೌಲರ್‌ಗಳಿಗೆ ಸಹಾಯಕವಾಗಿದ್ದು, ಆರಂಭಿಕ ಆಟಗಾರರಿಗೆ ಇಲ್ಲಿ ರನ್ ಗಳಿಸುವುದು ಕಠಿಣವಾಗಿರುತ್ತದೆ.

ಶುಭ್​ಮನ್ ಗಿಲ್‌ರ ನಾಯಕತ್ವದ ಆರಂಭ

ಈ ಟೆಸ್ಟ್ ಸರಣಿಯು ಶುಭಮನ್ ಗಿಲ್‌ಗೆ ನಾಯಕನಾಗಿ ಮೊದಲ ಪರೀಕ್ಷೆಯಾಗಿದೆ. ರಾಹುಲ್ ಮತ್ತು ಜೈಸ್ವಾಲ್‌ರ ಈ ದಾಖಲೆಯ ಆರಂಭಿಕ ಜೊತೆಯಾಟವು ಗಿಲ್‌ರ ನಾಯಕತ್ವದ ಆರಂಭಕ್ಕೆ ಧನಾತ್ಮಕ ಚಿಹ್ನೆಯನ್ನು ಒಡ್ಡಿದೆ. ರಾಹುಲ್‌ರ ವಿಕೆಟ್ ಬಿದ್ದಿದ್ದರಿಂದ ಈಗ ಜೈಸ್ವಾಲ್ ಜೊತೆಗೆ ಯಾರು ಬ್ಯಾಟಿಂಗ್‌ಗೆ ಬರುತ್ತಾರೆ ಎಂಬುದು ಗಮನಾರ್ಹವಾಗಿದೆ. ಭಾರತ ತಂಡದ ಮುಂದಿನ ಬ್ಯಾಟ್ಸ್‌ಮನ್‌ಗಳಾದ ಸಾಯಿ ಸುದರ್ಶನ್, ಕರುಣ್ ನಾಯರ್, ಅಥವಾ ರಿಷಭ್ ಪಂತ್ ಈ ಆರಂಭವನ್ನು ಮುಂದುವರಿಸಿ ತಂಡಕ್ಕೆ ದೊಡ್ಡ ಮೊತ್ತವನ್ನು ಕಲೆಹಾಕುವ ಜವಾಬ್ದಾರಿಯನ್ನು ಹೊಂದಿದ್ದಾರೆ.