IND vs ENG: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ರೋಚಕ ಜಯ! 93 ವರ್ಷಗಳಲ್ಲೇ ಇದೇ ಮೊದಲು ಭಾರತಕ್ಕೆ ಇಂತಾ ವಿಶೇಷ ಗೆಲುವು | india’s tightest test wins: smallest margins of victory by runs | ಕ್ರೀಡೆ

IND vs ENG: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ರೋಚಕ ಜಯ! 93 ವರ್ಷಗಳಲ್ಲೇ ಇದೇ ಮೊದಲು ಭಾರತಕ್ಕೆ ಇಂತಾ ವಿಶೇಷ ಗೆಲುವು | india’s tightest test wins: smallest margins of victory by runs | ಕ್ರೀಡೆ
6 ರನ್​ಗಳ ಸೋಲು

ಜುಲೈ 31 ರಿಂದ ಆಗಸ್ಟ್ 4, 2025ರವರೆಗೆ ಓವಲ್‌ನಲ್ಲಿ ನಡೆದ ಈ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಕೊನೆಯ ದಿನ 35 ರನ್‌ಗಳ ಅಗತ್ಯವಿತ್ತು. ಆದರೆ, ಭಾರತದ ವೇಗದ ಬೌಲರ್‌ಗಳಾದ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣರ ಭರ್ಜರಿ ಬೌಲಿಂಗ್‌ನಿಂದ ಇಂಗ್ಲೆಂಡ್ ಕೇವಲ 28 ರನ್‌ಗಳನ್ನು ಗಳಿಸಿ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಇಂಗ್ಲೆಂಡ್ ತಂಡವು 367 ರನ್‌ಗಳಿಗೆ ಆಲೌಟ್ ಆಗುವ ಮೂಲಕ 6 ರನ್‌ ಸೋಲಭವಿಸಿತು.

9 ವಿಕೆಟ್ ಪಡೆದ ಸಿರಾಜ್

ಮೊಹಮ್ಮದ್ ಸಿರಾಜ್ 30.1 ಓವರ್‌ಗಳಲ್ಲಿ 104 ರನ್‌ಗೆ 5 ವಿಕೆಟ್‌ಗಳನ್ನು ಪಡೆದು ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪಡೆದರು. ಅವರು ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗಳ ಜೊತೆಗೆ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗಳನ್ನು ಕಬಳಿಸಿದರು. ಇದರೊಂದಿಗೆ, ಸಿರಾಜ್ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 7 ಬಾರಿ 4 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ಏಷ್ಯಾದ ಮೊದಲ ಬೌಲರ್ ಎಂಬ ದಾಖಲೆಯನ್ನು ಬರೆದರು. ಪ್ರಸಿದ್ಧ್ ಕೃಷ್ಣ 27 ಓವರ್‌ಗಳಲ್ಲಿ 126 ರನ್‌ಗೆ 4 ವಿಕೆಟ್‌ಗಳನ್ನು ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಭಾರತದ ಐತಿಹಾಸಿಕ ಗೆಲುವು

ಈ 6 ರನ್‌ಗಳ ಗೆಲುವು ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ರನ್‌ಗಳಿಂದ ಸಾಧಿಸಿದ ಗೆಲುವಾಗಿದೆ. ಈ ಹಿಂದೆ ಭಾರತವು 2004ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾವನ್ನು 13 ರನ್‌ಗಳಿಂದ ಸೋಲಿಸಿತ್ತು, ಇದು ಈವರೆಗಿನ ಅತ್ಯಂತ ಕಡಿಮೆ ರನ್‌ಗಳ ಗೆಲುವಿನ ದಾಖಲೆಯಾಗಿತ್ತು. ಈ ಗೆಲುವಿನೊಂದಿಗೆ ಭಾರತವು ತನ್ನ ಹಿಂದಿನ ದಾಖಲೆಯನ್ನು ಮುರಿದಿದೆ.

ಭಾರತದ ಅತ್ಯಂತ ಕಡಿಮೆ ರನ್‌ಗಳ ಗೆಲುವಿನ ಪಟ್ಟಿ

6 ರನ್‌ಗಳು | ಗುರಿ: 374 | ಎದುರಾಳಿ: ಇಂಗ್ಲೆಂಡ್ | ಸ್ಥಳ: ಓವಲ್-2025

13 ರನ್‌ಗಳು | ಗುರಿ: 107 | ಎದುರಾಳಿ: ಆಸ್ಟ್ರೇಲಿಯಾ | ಸ್ಥಳ: ಮುಂಬೈ (ವಾಂಖೆಡೆ)-2004

28 ರನ್‌ಗಳು | ಗುರಿ: 192 | ಎದುರಾಳಿ: ಇಂಗ್ಲೆಂಡ್ | ಸ್ಥಳ: ಕೋಲ್ಕತ್ತಾ-1972

31 ರನ್‌ಗಳು | ಗುರಿ: 323 | ಎದುರಾಳಿ: ಆಸ್ಟ್ರೇಲಿಯಾ | ಸ್ಥಳ: ಅಡಿಲೇಡ್ -2018

37 ರನ್‌ಗಳು | ಗುರಿ: 313 | ಎದುರಾಳಿ: ವೆಸ್ಟ್ ಇಂಡೀಸ್ | ಸ್ಥಳ: ಪೋರ್ಟ್ ಆಫ್ ಸ್ಪೇನ್ – 2002

49 ರನ್‌ಗಳು | ಗುರಿ: 269 | ಎದುರಾಳಿ: ವೆಸ್ಟ್ ಇಂಡೀಸ್ | ಸ್ಥಳ: ಕಿಂಗ್‌ಸ್ಟನ್-2006

59 ರನ್‌ಗಳು | ಗುರಿ: 143 | ಎದುರಾಳಿ: ಆಸ್ಟ್ರೇಲಿಯಾ | ಸ್ಥಳ: ಮೆಲ್ಬರ್ನ್ -1981

60 ರನ್‌ಗಳು | ಗುರಿ: 188 | ಎದುರಾಳಿ: ನ್ಯೂಜಿಲೆಂಡ್ | ಸ್ಥಳ: ಮುಂಬೈ (ಬಿಎಸ್)-1969

63 ರನ್‌ಗಳು | ಗುರಿ: 326 | ಎದುರಾಳಿ: ವೆಸ್ಟ್ ಇಂಡೀಸ್ | ಸ್ಥಳ: ಕಿಂಗ್‌ಸ್ಟನ್ -2011

63 ರನ್‌ಗಳು | ಗುರಿ: 241 | ಎದುರಾಳಿ: ದಕ್ಷಿಣ ಆಫ್ರಿಕಾ | ಸ್ಥಳ: ಜೊಹಾನ್ಸ್‌ಬರ್ಗ್-2018

ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕಡಿಮೆ ರನ್‌ಗಳ ಗೆಲುವು

148 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ, ಕೇವಲ ಎರಡು ಬಾರಿ ತಂಡಗಳು 1 ರನ್‌ನಿಂದ ಗೆಲುವು ಸಾಧಿಸಿವೆ. ಮೊದಲ ಸಂದರ್ಭ 1993ರಲ್ಲಿ ಆಸ್ಟ್ರೇಲಿಯಾ ವಿರುದ್ಧ ವೆಸ್ಟ್ ಇಂಡೀಸ್ ಅಡಿಲೇಡ್‌ನಲ್ಲಿ 1 ರನ್‌ನಿಂದ ಗೆದ್ದಿತು, ಮತ್ತು ಎರಡನೇ ಸಂದರ್ಭವೆಂದರೆ 2023ರಲ್ಲಿ ನ್ಯೂಜಿಲೆಂಡ್ ಇಂಗ್ಲೆಂಡ್ ವಿರುದ್ಧ ವೆಲ್ಲಿಂಗ್ಟನ್‌ನಲ್ಲಿ 1 ರನ್‌ನಿಂದ ಗೆದ್ದಿತು. ಭಾರತದ 6 ರನ್‌ಗಳ ಗೆಲುವು ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟಾರೆಯಾಗಿ 9ನೇ ಅತ್ಯಂತ ಕಡಿಮೆ ರನ್‌ಗಳ ಗೆಲುವಾಗಿದೆ.

ಟೆಸ್ಟ್ ಕ್ರಿಕೆಟ್‌ನ ಅತ್ಯಂತ ಕಡಿಮೆ ರನ್‌ಗಳ ಗೆಲುವಿನ ಪಟ್ಟಿ

1 ರನ್ – ಗುರಿ: 186-ವೆಸ್ಟ್ ಇಂಡೀಸ್ vs ಆಸ್ಟ್ರೇಲಿಯಾ- ಅಡಿಲೇಡ್-1993

1 ರನ್-ಗುರಿ: 258-ನ್ಯೂಜಿಲೆಂಡ್ vs ಇಂಗ್ಲೆಂಡ್ -ವೆಲ್ಲಿಂಗ್ಟನ್-2023

2 ರನ್ – ಗುರಿ: 282-ಇಂಗ್ಲೆಂಡ್ vs ಆಸ್ಟ್ರೇಲಿಯಾ-ಬರ್ಮಿಂಗ್‌ಹ್ಯಾಮ್-2005

3 ರನ್- ಗುರಿ: 124-ಆಸ್ಟ್ರೇಲಿಯಾ vs ಇಂಗ್ಲೆಂಡ್-ಮಾಂಚೆಸ್ಟರ್-1902

3 ರನ್-ಗುರಿ: 292-ಇಂಗ್ಲೆಂಡ್ vs ಆಸ್ಟ್ರೇಲಿಯಾ-ಮೆಲ್ಬರ್ನ್-1982

4 ರನ್- ಗುರಿ: 176-ನ್ಯೂಜಿಲೆಂಡ್ vs ಪಾಕಿಸ್ತಾನ-ಅಬುಧಾಬಿ-2018

5 ರನ್ – ಗುರಿ: 117-ದಕ್ಷಿಣ ಆಫ್ರಿಕಾ vs ಆಸ್ಟ್ರೇಲಿಯಾ-ಸಿಡ್ನಿ-1994

6 ರನ್ -ಗುರಿ: 214-ಆಸ್ಟ್ರೇಲಿಯಾ vs ಇಂಗ್ಲೆಂಡ್ -ಸಿಡ್ನಿ-1885

6 ರನ್- ಗುರಿ: 374-ಭಾರತ vs ಇಂಗ್ಲೆಂಡ್ -ಓವಲ್ -2025