IND vs ENG: ಒಂದೇ ಓವರ್​​ನಲ್ಲಿ 4,6, 4, 4,4, ಜೊತೆಗೆ 8 ಓವರ್​ಗಳಲ್ಲಿ 61 ಬಿಟ್ಟುಕೊಟ್ಟ ಭಾರತೀಯ ವೇಗಿ! ಹೀಗಾದರೆ ಭಾರತ ಟೆಸ್ಟ್ ಗೆದ್ದಂಗೆ! | india vs england Prasidh Krishna Joins Unwanted List After given 23-Run in an Over

IND vs ENG: ಒಂದೇ ಓವರ್​​ನಲ್ಲಿ 4,6, 4, 4,4, ಜೊತೆಗೆ 8 ಓವರ್​ಗಳಲ್ಲಿ 61 ಬಿಟ್ಟುಕೊಟ್ಟ ಭಾರತೀಯ ವೇಗಿ! ಹೀಗಾದರೆ ಭಾರತ ಟೆಸ್ಟ್ ಗೆದ್ದಂಗೆ! | india vs england Prasidh Krishna Joins Unwanted List After given 23-Run in an Over

ಅದರಲ್ಲೂ ವಿಕೆಟ್ ಕೀಪರ್ ಜೇಮೀ ಸ್ಮಿತ್, ಪ್ರಸಿದ್ಧ್ ಕೃಷ್ಣ ಅವರ ಮೇಲೆ ಟಿ20 ಶೈಲಿಯಲ್ಲಿ ಭರ್ಜರಿ ಸಿಕ್ಸರ್‌ಗಳ ಮೂಲಕ ದಾಳಿ ನಡೆಸಿದರು. ಪ್ರಸಿದ್ಧ್ ಕೃಷ್ಣ ಎಸೆದ 32 ನೇ ಓವರ್‌ನಲ್ಲಿ, ಜೇಮೀ ಸ್ಮಿತ್ 4, 6, 4, 4, ವೈಡ್, 4 ನೊಂದಿಗೆ 23 ರನ್‌ಗಳನ್ನು ಗಳಿಸಿದರು. ಅಲ್ಲಿಯವರೆಗೆ ನಿಧಾನವಾಗಿ ಆಡುತ್ತಿದ್ದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್‌ ಮೂಲಕ ಸ್ಫೋಟಕ ಆಟವನ್ನು ಶುರು ಮಾಡಿಕೊಂಡಿತು. ಅವರು ಈಗಾಗಲೇ ವೇಗವಾಗಿ ಆಡುವ ಮೂಲಕ 165 ರನ್‌ಗಳ ಜೊತೆಯಾಟ ಪೂರ್ಣಗೊಳಿಸಿದೆ. ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್ ನೋಡಿ ಭಾರತೀಯ ಅಭಿಮಾನಿಗಳು ಹಾಗೂ ಕಾಮೆಂಟೇಟರ್​ಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಉಲ್ಟಾ ಹೊಡೆತ ಭಾರತೀಯರ ತಂತ್ರ

ಶಾರ್ಟ್-ಪಿಚ್ ಎಸೆತಗಳಿಂದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಸದೆಬಡಿಯಲು ಪ್ರಯತ್ನಿಸುವ ಭಾರತದ ತಂತ್ರವು ಉಲ್ಟಾ ಹೊಡೆದಿದೆ. ಪ್ರಸಿದ್ಧ್ ಅವರ ತಪ್ಪು ಬೌನ್ಸರ್‌ಗಳು ಮತ್ತು ಬೌಲಿಂಗ್‌ನಲ್ಲಿ ಯಾವುದೇ ವೇರಿಯೇಷನ್​ ತೋರಿಸದೆ ಪ್ರತಿ ಚೆಂಡನ್ನು ಬೌನ್ಸರ್ ಆಗಿ ಬೌಲಿಂಗ್ ಮಾಡುವುದು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ನಿರಾಯಾಸವಾಗಿ ರನ್​ ಕಲೆ ಹಾಕಲು ಸಹಾಯ ಮಾಡಿದೆ. ಆಟದ ಮೂರನೇ ದಿನದಂದು, ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಪ್ರಸಿದ್ಧ್ ಎಸೆದ ಪ್ರತಿ ಓವರ್‌ನಲ್ಲಿ ಬೌಂಡರಿಗಳನ್ನು ಹೊಡೆಯುತ್ತಿದ್ದಾರೆ. 8 ಓವರ್‌ಗಳನ್ನು ಬೌಲ್ ಮಾಡಿರುವ ಪ್ರಸಿದ್ಧ್ ಕೃಷ್ಣ, 7.62 ರ ಎಕಾನಮಿಯೊಂದಿಗೆ 61 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಪ್ರಸಿದ್ಧ್ ಅವರ ವೈಫಲ್ಯವು ಇತರ ಬೌಲರ್‌ಗಳ ಮೇಲೆ ಪರಿಣಾಮ ಬೀರುತ್ತಿದೆ.

2000ದ ನಂತರ ಭಾರತಕ್ಕೆ ಟೆಸ್ಟ್‌ನಲ್ಲಿ ಅತ್ಯಂತ ದುಬಾರಿ ಓವರ್

27 ರನ್‌ಗಳು – ಹರ್ಭಜನ್ ಸಿಂಗ್ vs ಪಾಕ್, ಲಾಹೋರ್, 2006

25 ರನ್‌ಗಳು – ಮುನಾಫ್ ಪಟೇಲ್ vs ವಿಂಡೀಸ್, ಬಾಸ್ಸೆಟೆರೆ, 2006

24 ರನ್‌ಗಳು – ಕರ್ಣ ಶರ್ಮಾ vs ಆಸ್ಟ್ರೇಲಿಯಾ, ಅಡಿಲೇಡ್, 2004

23 ರನ್‌ಗಳು – ಪ್ರಸಿದ್ಧ್ ಕೃಷ್ಣ vs ಇಂಗ್ಲೆಂಡ್, ಬರ್ಮಿಂಗ್ಹ್ಯಾಮ್, 2025

22 ರನ್‌ಗಳು – ಇರ್ಫಾನ್ ಪಠಾಣ್ vs ಪಾಕ್, ಫೈಸಲಾಬಾದ್, 2006

ಜೇಮೀ ಸ್ಮಿತ್ ಹಾಗೂ ಹ್ಯಾರಿ ಬ್ರೂಕ್ ಸಿಡಿಲಬ್ಬರ

ಭಾರತದ ಸಂಪೂರ್ಣ ಹಿಡಿತದಲ್ಲಿದ್ದ ಈ ಪಂದ್ಯ ನಿಧಾನವಾಗಿ ಇಂಗ್ಲೆಂಡ್ ಕಡೆಗೆ ಬದಲಾಗುತ್ತಿದೆ. ಕ್ರೀಸ್‌ನಲ್ಲಿರುವ ಜೇಮೀ ಸ್ಮಿತ್ ಸ್ಫೋಟಕ ಶತಕ ಸಿಡಿಸಿದ್ದರೆ, ಹ್ಯಾರಿ ಬ್ರೂಕ್ ಅರ್ಧಶತಕ ಪೂರೈಸಿ ಶತಕಕ್ಕೆ ಕೇವಲ 9 ರನ್​ಗಳ ಅಂತರದಲ್ಲಿದ್ದಾರೆ. ಅದರಲ್ಲೂ ಜೇಮೀ ಸ್ಮಿತ್ ಕೇವಲ 80 ಎಸೆತಗಳಲೇ ಶತಕ ಪೂರ್ಣಗೊಳಿಸಿದ್ದಾರೆ. ಅವರ ಇನ್ನಿಂಗ್ಸ್​​ನಲ್ಲಿ 14 ಬೌಂಡರಿ, 3 ಸಿಕ್ಸರ್​ ಸಿಡಿಸಿದ್ದಾರೆ. ಇತ್ತಾ ಹ್ಯಾರಿ ಬ್ರೂಕ್ 127 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 91 ರನ್​ಗಳಿಸಿದ್ದಾರೆ, ಇವರಿಬ್ಬರು 165 ರನ್​ಗಳಿಸಿ ಭಾರತಕ್ಕೆ ದೊಡ್ಡ ತಲೆನೋವಾಗಿದ್ದಾರೆ. ಆದಷ್ಟು ಬೇಗ ಈ ಜೋಡಿಯನ್ನ ಬೇರ್ಪಡಿಸದಿದ್ದರೆ.

ಭಾರತ 587 ರನ್

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 587 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಶುಭ್​ಮನ್ ಗಿಲ್ (387 ಎಸೆತಗಳಲ್ಲಿ 30 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 269) ದಾಖಲೆಯ ದ್ವಿಶತಕ ಬಾರಿಸಿದರು. ರವೀಂದ್ರ ಜಡೇಜಾ (137 ಎಸೆತಗಳಲ್ಲಿ 10 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ 89) ಮತ್ತು ಯಶಸ್ವಿ ಜೈಸ್ವಾಲ್ (107 ಎಸೆತಗಳಲ್ಲಿ 13 ಬೌಂಡರಿಗಳೊಂದಿಗೆ 87) ಸ್ವಲ್ಪದರಲ್ಲೇ ಶತಕ ಗಳಿಸಲು ವಿಫಲರಾದರು. ವಾಷಿಂಗ್ಟನ್ ಸುಂದರ್ (103 ಎಸೆತಗಳಲ್ಲಿ 3 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ 42) ಪ್ರಮುಖ ಇನ್ನಿಂಗ್ಸ್ ಆಡಿದರು.

ಇಂಗ್ಲೆಂಡ್ ಬೌಲರ್‌ಗಳಲ್ಲಿ, ಶೋಯೆಬ್ ಬಶೀರ್ (3/167) ಮೂರು ವಿಕೆಟ್ ಪಡೆದರು, ಕ್ರಿಸ್ ವೋಕ್ಸ್ (2/81) ಮತ್ತು ಜೋಶ್ ಟಾಂಗ್ (2/119) ತಲಾ ಎರಡು ವಿಕೆಟ್ ಪಡೆದರು. ಬ್ರೈಡನ್ ಕಾರ್ಸ್, ಬೆನ್ ಸ್ಟೋಕ್ಸ್ ಮತ್ತು ಜೋ ರೂಟ್ ತಲಾ ಒಂದು ವಿಕೆಟ್ ಪಡೆದರು.