IND vs ENG: ಕ್ಯಾಪ್ಟನ್ ಗಿಲ್ ವಿಶ್ವದಾಖಲೆಯ ದ್ವಿಶತಕ​ ! ಬೃಹತ್ ಮೊತ್ತ ದಾಖಲಿಸಿದ ಟೀಮ್ ಇಂಡಿಯಾ

IND vs ENG: ಕ್ಯಾಪ್ಟನ್ ಗಿಲ್ ವಿಶ್ವದಾಖಲೆಯ ದ್ವಿಶತಕ​ ! ಬೃಹತ್ ಮೊತ್ತ ದಾಖಲಿಸಿದ ಟೀಮ್ ಇಂಡಿಯಾ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಬರ್ಮಿಂಗ್ಹ್ಯಾಮ್ ನ ಎಡ್ಜ್ ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಗುರುವಾರ ಪಂದ್ಯದ ಎರಡನೇ ದಿನವಾಗಿದ್ದು, ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 587 ರನ್ ಗಳಿಗೆ ಆಲೌಟ್ ಆಗಿದೆ. ನಾಯಕ ಶುಭ್​ಮನ್ ಗಿಲ್ ಭಾರತ ಪರ ಅದ್ಭುತ ಪ್ರದರ್ಶನ ನೀಡಿ 269 ರನ್‌ಗಳ ದಾಖಲೆ ಇನ್ನಿಂಗ್ಸ್ ಆಡಿ ಬೃಹತ್ ಮೊತ್ತಕ್ಕೆ ಕಾರಣರಾದರು.