IND vs ENG: ಗಿಲ್ , ಯಶಸ್ವಿ ಅಲ್ಲ, ಈತ ಟೀಮ್ ಇಂಡಿಯಾ ಇಂಗ್ಲೆಂಡ್​ನಲ್ಲಿ ಪ್ರಬಲಪೈಪೋಟಿ ನೀಡಲು ಕಾರಣ! ಇಂಗ್ಲೆಂಡ್​ ಮಾಜಿ ಕ್ಯಾಪ್ಟನ್ ಪ್ರಶಂಸೆ | nasser hussain praises mohammed siraj as ‘india’s heartbeat’ in england series | ಕ್ರೀಡೆ

IND vs ENG: ಗಿಲ್ , ಯಶಸ್ವಿ ಅಲ್ಲ, ಈತ ಟೀಮ್ ಇಂಡಿಯಾ ಇಂಗ್ಲೆಂಡ್​ನಲ್ಲಿ ಪ್ರಬಲಪೈಪೋಟಿ ನೀಡಲು ಕಾರಣ! ಇಂಗ್ಲೆಂಡ್​ ಮಾಜಿ ಕ್ಯಾಪ್ಟನ್ ಪ್ರಶಂಸೆ | nasser hussain praises mohammed siraj as ‘india’s heartbeat’ in england series | ಕ್ರೀಡೆ

Last Updated:

ಈ ಸರಣಿಯಲ್ಲಿ ಭಾರತ ಹೋರಾಡಿದ ರೀತಿ ನನ್ನನ್ನು ಪ್ರಭಾವಿತಗೊಳಿಸಿದೆ. ಮೊದಲ ಟೆಸ್ಟ್ ಸೋಲಿನ ನಂತರ ಭಾರತ ಚೇತರಿಸಿಕೊಳ್ಳುವುದಿಲ್ಲ ಎಂದು ಕೆಲವರು ಭಾವಿಸಿದ್ದರು. ಆದರೆ ಭಾರತ ತಮ್ಮ ಆಟದೊಂದಿಗೆ ತಾವೂ ಎಷ್ಟು ಕಠಿಣ ತಂಡ ಎಂಬುದನ್ನು ತೋರಿಸಿದೆ ಎಂದು ನಾಸೆರ್ ತಿಳಿಸಿದ್ದರು.

ಮೊಹಮ್ಮದ್ ಸಿರಾಜ್ಮೊಹಮ್ಮದ್ ಸಿರಾಜ್
ಮೊಹಮ್ಮದ್ ಸಿರಾಜ್

ಇಂಗ್ಲೆಂಡ್‌ನ ಮಾಜಿ ನಾಯಕ ನಾಸರ್ ಹುಸೇನ್ (Nasser Hussain) ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಅವರನ್ನು ಶ್ಲಾಘಿಸಿದ್ದಾರೆ. ಸಿರಾಜ್ ಅವರ ಅದ್ಭುತ ಪ್ರದರ್ಶನದಿಂದ ಐದು ಟೆಸ್ಟ್‌ಗಳ ಆಂಡರ್ಸನ್-ತೆಂಡೂಲ್ಕರ್​ (Anderson-Tendulkar) ಟ್ರೋಫಿಯಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆ ಎಂದು ಅವರು ಹೇಳಿದರು. ಓವಲ್‌ನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 224 ರನ್‌ಗಳಿಗೆ ಆಲೌಟ್ ಆಗಿತ್ತು. ನಂತರ ಇಂಗ್ಲೆಂಡ್ 247 ರನ್ ಗಳಿಸಿತು. ಭರ್ಜರಿ ಆಟದಿಂದ ಮೊದಲ ವಿಕೆಟ್‌ಗೆ 92 ರನ್ ಗಳಿಸಿದ ಇಂಗ್ಲೆಂಡ್, ಸಿರಾಜ್ ದಾಳಿಗೆ ಸಿಲುಕಿ 247 ರನ್‌ಗಳಿಗೆ ಸೀಮಿತವಾಯಿತು. ನಾಯಕ ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್ ಮತ್ತು ಜಾಕೋಬ್ ಬೆಥೆಲ್ ಅವರನ್ನು ಔಟ್ ಮಾಡಿದ ಸಿರಾಜ್ ಇಂಗ್ಲೆಂಡ್‌ನ ಪತನವನ್ನು ನಿರ್ಣಯಿಸಿದರು.

ಜೈಸ್ವಾಲ್ ಶತಕ

23 ರನ್‌ಗಳ ಕೊರತೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ 396 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಯಶಸ್ವಿ ಜೈಸ್ವಾಲ್ (118) ಶತಕದೊಂದಿಗೆ ತಮ್ಮ ಬಲವನ್ನು ಪ್ರದರ್ಶಿಸಿದರು. ಆಕಾಶ್ ದೀಪ್ (66), ರವೀಂದ್ರ ಜಡೇಜಾ (53), ವಾಷಿಂಗ್ಟನ್ ಸುಂದರ್ (53) ಅರ್ಧಶತಕಗಳೊಂದಿಗೆ ಮಿಂಚಿದರು. 374 ರನ್‌ಗಳ ಗುರಿಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಂಗ್ಲರಿಗೆ ಸಿರಾಜ್ ಆರಂಭದಲ್ಲೇ ಶಾಕ್ ನೀಡಿದ್ದಾರೆ. ಮಿಯಾ ಭಾಯ್ 14 ರನ್​ಗಳಿಸಿದ್ದ ಜ್ಯಾಕ್ ಕ್ರಾಲಿಯನ್ನು ಕ್ಲೀನ್ ಬೌಲ್ಡ್ ಮಾಡಿದರು.

ಸಿರಾಜ್ ನಾಯಕನ ನೆಚ್ಚಿನ ಬೌಲರ್

ಐದನೇ ಟೆಸ್ಟ್‌ಗೆ ಸಂಬಂಧಿಸಿದಂತೆ ಡೈಲಿ ಮೇಲ್‌ಗಾಗಿ ಬರೆದ ಲೇಖನದಲ್ಲಿ, ನಾಸರ್ ಹುಸೇನ್ ಸಿರಾಜ್ ಅವರ ಪ್ರದರ್ಶನವನ್ನು ವಿಶೇಷವಾಗಿ ಹೊಗಳಿದರು. ‘ಸಿರಾಜ್.. ನಾಯಕನ ನೆಚ್ಚಿನ ಬೌಲರ್. ಅವರು ಯಾವಾಗಲೂ ತಂಡವನ್ನು ಹುರಿದುಂಬಿಸುತ್ತಾರೆ. ನಾನು ಇಂಗ್ಲೆಂಡ್ ನಾಯಕನಾಗಿದ್ದಾಗ, ಡ್ಯಾರೆನ್ ಗೌ ನನ್ನ ನೆಚ್ಚಿನ ಬೌಲರ್ ಎಂದು ನಾನು ಯಾವಾಗಲೂ ಹೇಳುತ್ತಿದ್ದೆ. ಸಿರಾಜ್ ಭಾರತಕ್ಕೆ ಆ ರೀತಿಯ ಆಟಗಾರನಾಗಿದ್ದಾರೆ. ಈ ಸರಣಿಯಲ್ಲಿ ಅವರ ಪ್ರದರ್ಶನ ಅದ್ಭುತವಾಗಿತ್ತು. ಅವರ ಕಾರಣದಿಂದಾಗಿಯೇ ಟೀಮ್ ಇಂಡಿಯಾ ಈ ಸರಣಿಯಲ್ಲಿ ಕಠಿಣ ಸ್ಪರ್ಧೆ ನೀಡಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

ಭಾರತದ ಹೋರಾಟ ಅದ್ಭುತ

ಈ ಸರಣಿಯಲ್ಲಿ ಭಾರತ ಹೋರಾಡಿದ ರೀತಿ ನನ್ನನ್ನು ಪ್ರಭಾವಿತಗೊಳಿಸಿದೆ. ಮೊದಲ ಟೆಸ್ಟ್ ಸೋಲಿನ ನಂತರ ಭಾರತ ಚೇತರಿಸಿಕೊಳ್ಳುವುದಿಲ್ಲ ಎಂದು ಕೆಲವರು ಭಾವಿಸಿದ್ದರು. ಆದರೆ ಭಾರತ ತಮ್ಮ ಆಟದೊಂದಿಗೆ ತಾವೂ ಎಷ್ಟು ಕಠಿಣ ತಂಡ ಎಂಬುದನ್ನು ತೋರಿಸಿದೆ. ಇಂಗ್ಲೆಂಡ್‌ನಂತೆಯೇ ಈ ಸರಣಿಯಲ್ಲಿ ಅವರು ಹಲವು ಸೆಷನ್‌ಗಳನ್ನು ಸಮನಾಗಿ ಗೆದಿದ್ದಾರೆ. ನಿರ್ಣಾಯಕ ಸಮಯಗಳಲ್ಲಿ ಮಾತ್ರ ಅವರು ಸ್ವಲ್ಪ ಹಿಂದೆ ಬಿದ್ದರು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಲ್ಲದೆ ಇಷ್ಟು ಉತ್ತಮ ಪ್ರದರ್ಶನ ನೀಡುವುದು ಅದ್ಭುತವಾಗಿದೆ, ‘ಎಂದು ನಾಸರ್ ಹುಸೇನ್ ಪ್ರಶಂಸಿಸಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

IND vs ENG: ಗಿಲ್ ಅಲ್ಲ, ಯಶಸ್ವಿ ಅಲ್ಲ, ಈತ ಟೀಮ್ ಇಂಡಿಯಾ ಇಂಗ್ಲೆಂಡ್​ನಲ್ಲಿ ಪ್ರಬಲಪೈಪೋಟಿ ನೀಡಲು ಕಾರಣ! ಇಂಗ್ಲೆಂಡ್​ ಮಾಜಿ ಕ್ಯಾಪ್ಟನ್ ಪ್ರಶಂಸೆ