Last Updated:
ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಶುಭ್ಮನ್ ಗಿಲ್ ಅವರ ಈ ರನ್ ಔಟ್ ನಿಂದ ಮೊದಲ ದಿನವೇ ಭಾರೀ ಹಿನ್ನಡೆ ಅನುಭವಿಸಿದೆ. ಗಿಲ್ ರನ್ಔಟ್ ಆದ ರೀತಿಗೆ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೋಪಗೊಂಡಿದ್ದರು. ಇದು ಆತ್ಮಹತ್ಯಾ ರನೌಟ್ ಎಂದು ಅವರು ಟೀಕಿಸಿದರು.
ಇಂಗ್ಲೆಂಡ್ ವಿರುದ್ಧದ (India vs England) ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಕಷ್ಟದಲ್ಲಿದೆ. ಗುರುವಾರ ದಿ ಓವಲ್‌ನಲ್ಲಿ ಆರಂಭವಾದ ಈ ಪಂದ್ಯದಲ್ಲಿ, ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ, ನಿರ್ಣಾಯಕ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಆರಂಭಿಕರಾದ ಯಶಸ್ವಿ ಜೈಸ್ವಾಲ್ (2) ಮತ್ತು ಕೆಎಲ್ ರಾಹುಲ್ (14) ಇನ್ನಿಂಗ್ಸ್ ಆರಂಭದಲ್ಲೇ ಪೆವಿಲಿಯನ್ ಸೇರಿದರು. ಜೈಸ್ವಾಲ್ ಅವರನ್ನು ಅಟ್ಕಿನ್ಸನ್ ಎಲ್ಬಿಡಬ್ಲ್ಯೂ ಆಗಿ ಔಟ್ ಮಾಡಿದರೆ, ರಾಹುಲ್ ಅವರನ್ನು ಕ್ರಿಸ್ ವೋಕ್ಸ್ ಕ್ಲೀನ್ ಬೌಲ್ಡ್ ಮಾಡಿದರು. ಈ ಸಂದರ್ಭಗಳಲ್ಲಿ, ಸಾಯಿ ಸುದರ್ಶನ್ ಮತ್ತು ನಾಯಕ ಗಿಲ್ ಕ್ರೀಸ್‌ಗೆ ಬಂದು ಎಚ್ಚರಿಕೆಯಿಂದ ಆಡಿದರು. ಮಳೆ ಅಡ್ಡಿಪಡಿಸಿದ ಕಾರಣ ಅಂಪೈರ್‌ಗಳು ಆಟವನ್ನು ನಿಲ್ಲಿಸಿ, ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಊಟದ ವಿರಾಮವನ್ನು ಘೋಷಿಸಿದರು. ಮಳೆ ಕಣ್ಣಾಮುಚ್ಚಾಲೆ ಆಟವಾಡಿದ ಕಾರಣ ಸ್ವಲ್ಪ ಸಮಯದ ನಂತರ ಪಂದ್ಯ ಪುನರಾರಂಭವಾಯಿತು.
ಎರಡನೇ ಅವಧಿಯ ಆರಂಭದಲ್ಲಿ ಶುಭ್ಮನ್ ಗಿಲ್ ರನ್ ಗಳಿಸಲು ಪ್ರಯತ್ನಿಸಿ ರನ್ ಔಟ್ ಆದರು. ಗಿಲ್ ಸಿಂಗಲ್ ರನ್ ಕದಿಯುವ ಯತ್ನದಲ್ಲಿ ವಿಕೆಟ್ ಕಳೆದುಕೊಂಡರು. ಚೆಂಡನ್ನು ನೇರವಾಗಿ ಬೌಲರ್‌ನ ಕೈಗೆ ಹೊಡೆದು, ಸಿಂಗಲ್ಗೆ ಪ್ರಯತ್ನಿಸಿದರು, ಆದರೆ ಜೊತೆಗಾರ ಬ್ಯಾಟರ್ ಸಾಯಿ ಸುದರ್ಶನ್ ‘ ನೋ’ ಎಂದು ಹೇಳಿದರು, ಗಿಲ್ ‘ಯು-ಟರ್ನ್’ ತೆಗೆದುಕೊಂಡರು. ಆದರೆ ಚೆಂಡನ್ನು ಸ್ವೀಕರಿಸಿದ ಅಟ್ಕಿನ್ಸನ್ ನೇರವಾಗಿ ಸ್ಟಂಪ್ಗೆ ಹೊಡೆದರು. ಅದರೊಂದಿಗೆ ಉತ್ತಮ ಟಚ್ನಲ್ಲಿದ್ದ ಶುಭ್ಮನ್ ಗಿಲ್ (21) ಪೆವಿಲಿಯನ್ ಸೇರಬೇಕಾಯಿತು. ಅಟ್ಕಿನ್ಸನ್ ಎಸೆದ 28ನೇ ಓವರ್‌ನಲ್ಲಿ ಈ ಘಟನೆ ನಡೆಯಿತು.
ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಶುಭ್ಮನ್ ಗಿಲ್ ಅವರ ಈ ರನ್ ಔಟ್ ನಿಂದ ಮೊದಲ ದಿನವೇ ಭಾರೀ ಹಿನ್ನಡೆ ಅನುಭವಿಸಿದೆ. ಗಿಲ್ ರನ್ಔಟ್ ಆದ ರೀತಿಗೆ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೋಪಗೊಂಡಿದ್ದರು. ಇದು ಆತ್ಮಹತ್ಯಾ ರನೌಟ್ ಎಂದು ಅವರು ಟೀಕಿಸಿದರು. ಪಿಚ್‌ನ ಅರ್ಧದಾರಿಯಲ್ಲೇ ಕ್ರೀಸ್ ತಲುಪಲು ಸಾಧ್ಯವಾಗದ ಗಿಲ್, ಸಾಯಿ ಸುದರ್ಶನ್ ಅವರು ರನ್ ಪೂರ್ಣಗೊಳಿಸುತ್ತಾರೆಂದು ಹೇಗೆ ನಿರೀಕ್ಷಿಸಿದರು ಎಂದು ಪ್ರಶ್ನಿಸಿದ್ದಾರೆ.
ಕರುಣ್ ನಾಯರ್ ಕ್ರೀಸ್ ಪ್ರವೇಶಿಸುತ್ತಿದ್ದಂತೆ, ಮಳೆ ಮತ್ತೆ ಅಡ್ಡಿಪಡಿಸಿತು. ಪಂದ್ಯ ಪುನಾರಂಭವಾದ ನಂತರ 108 ಎಸೆತಗಳಲ್ಲಿ 6 ಬೌಂಡರಿ ಸಹಿತ 38 ರನ್ಗಳಿಸಿದ್ದ ಸಾಯಿ ಸುದರ್ಶನ್ ಕೂಡ ಔಟ್ ಆದರು. ಆ ನಂತರ ಬಂದ ರವೀಂದ್ರ ಜಡೇಜಾ ಕೇವಲ 9 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ಧ್ರುವ್ ಜುರೆಲ್ 19 ರನ್ಗಳಿಸಿ ಔಟ್ ಆದರು. ಪ್ರಸ್ತುತ ಕರುಣ್ ನಾಯರ್ ಅಜೇಯ 40 ರನ್ಗಳಿಸಿದರೆ, ವಾಷಿಂಗ್ಟನ್ ಸುಂದರ್ 6 ರನ್ಗಳಿಸಿ ಆಡುತ್ತಿದ್ದಾರೆ.
July 31, 2025 11:31 PM IST